ನವದೆಹಲಿ : ಅತ್ಯಂತ ಹಗುರವಾದ ಮತ್ತು ಸ್ಲಿಮ್ ಸ್ಮಾರ್ಟ್ ಫೋನ್ Mi 11 Lite ಜೂನ್ 22 ರಂದು  ಭಾರತದಲ್ಲಿ ಬಿಡುಗಡೆಯಾಗಲಿದೆ.  Xiaomi ಕಂಪನಿಯು ಈ ಬಗ್ಗೆ ಅಧಿಕೃತವಾಗಿ ಬಹಿರಂಗಪಡಿಸಿದೆ. ಆದರೆ, ಈ ಸ್ಮಾರ್ಟ್‌ಫೋನ್ 4 ಜಿ ವೆರೀಯೆಂಟ್ ನಲ್ಲಿರಲಿದೆಯೋ ಅಥವಾ  5 ಜಿ ಯಲ್ಲಿ ಬಿಡುಗಡೆಯಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಂಪನಿಯು ಈ ಫೋನಿನ ವೈಶಿಷ್ಟ್ಯಗಳ ಬಗ್ಗೆಯೂ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ.  ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್ ಗ್ಲೋಬಲ್ ಮಾಡಲ್ ಅನ್ನು ಹೋಲಬಹುದು ಎಂದು ನಿರೀಕ್ಷಿಸಲಾಗಿದೆ. 


COMMERCIAL BREAK
SCROLL TO CONTINUE READING

ಬಿಡುಗಡೆಯಾಗಲಿದೆ Mi 11 Lite : 
ಜೂನ್ 22 ರಂದು ಮಧ್ಯಾಹ್ನ 12 ಗಂಟೆಗೆ Mi 11 Lite  ಫೋನ್ ಬಿಡುಗಡೆ ಮಾಡಲಾಗುವುದು ಎಂದು Xiaomi ಕಂಪನಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗಪಡಿಸಿದೆ. ಇದೊಂದು ಕಂಪನಿಯ ವರ್ಚುವಲ್ ಈವೆಂಟ್ ಆಗಿರಲಿದೆ. ಈ ಸ್ಮಾರ್ಟ್‌ಫೋನ್ (Smartphone)  ಫುಲ್ ಲೋಡೆಡ್ ಆಗಿರಲಿದೆ  ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಅಂದರೆ ಪೋನಿನಲ್ಲಿ ಅನೇಕ ಫೀಚರ್ ಗಳು ಲಭ್ಯವಿರಲಿದೆ ಎನ್ನಲಾಗಿದೆ. 


ಇದನ್ನೂ ಓದಿ Realme: ಜಿಯೋಫೋನ್‌ಗೆ ಟಕ್ಕರ್ ನೀಡಲು ಮುಂದಾದ ರಿಯಲ್ಮೆ ಫೀಚರ್ ಫೋನ್


ಬೆಲೆ ಎಷ್ಟಿರಲಿದೆ ? 
Mi 11 Lite ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 6 GB + 64 GB ಮಾದರಿಯ ಬೆಲೆ EUR 299 ಅಂದರೆ 26,600 ರೂ. ಇದಲ್ಲದೆ ಇದು 6 GB + 128 Gb ಸ್ಟೋರೇಜ್ ವೇರಿಯೆಂಟ್ ನಲ್ಲಿ ಲಭ್ಯವಿರುತ್ತದೆ. ಇಲ್ಲಿಯವರೆಗೆ ಬಹಿರಂಗವಾದ ಮಾಹಿತಿ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ನ ಬೆಲೆ 25 ಸಾವಿರ ರೂಗಳಷ್ಟು ಇರಬಹುದು ಎನ್ನಲಾಗಿದೆ.


ಸಂಭಾವ್ಯ ವೈಶಿಷ್ಟ್ಯಗಳು : 
Mi 11 Lite  ಜಾಗತಿಕ ರೂಪಾಂತರವನ್ನು ನೋಡಿದರೆ, ಈ ಸ್ಮಾರ್ಟ್‌ಫೋನ್ 6.55-ಇಂಚಿನ ಪೂರ್ಣ ಎಚ್‌ಡಿ + ಡಿಸ್ಪ್ಲೇ ಹೊಂದಿದ್ದು, 1,080 × 2,400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದಕ್ಕೆ 90Hz ರಿಫ್ರೆಶ್ ರೇಟ್ ಡಿಸ್ ಪ್ಲೇ ಮತ್ತು HDR10 ಸಪೋರ್ಟ್ ನೀಡಲಾಗಿದೆ. ಫೋನ್‌ನ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನೊಂದಿಗೆ ಕೋಟೆಡ್ ಆಗಿದೆ. ಇದನ್ನು Qualcomm Snapdragon 732G ಪ್ರೊಸೆಸರ್‌ ನೊಂದಿಗೆ ಲಾಂಚ್ ಮಾಡಲಾಗಿದೆ. ಇದು 8 ಜಿಬಿ RAM ಮತ್ತು 128 ಜಿಬಿ ಇಂಟರ್ ನೆಲ್ ಸ್ಟೋರೇಜ್ ಅನ್ನು  ಹೊಂದಿದೆ.


ಇದನ್ನೂ ಓದಿ : ಬರೋಬ್ಬರಿ 12,000 ರೂ. ಅಗ್ಗವಾದ Samsung Galaxy S20 FE, ಇದರ ಹೊಸ ಬೆಲೆ, ವೈಶಿಷ್ಟ್ಯ ಇಲ್ಲಿದೆ


Mi 11 Lite ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಗ್ರಾಫಿಗಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಬಹುದು. ಫೋನ್‌ನಲ್ಲಿ, ಬಳಕೆದಾರರಿಗೆ 64 MP  ಪ್ರೈಮರಿ ಸೆನ್ಸಾರ್  ನೀಡಲಾಗಿದೆ. 8 ಎಂಪಿ ಅಲ್ಟ್ರಾ ವೈಡ್ ಆಂಗಲ್ ಮತ್ತು 5 MP ಟೆಲಿಫೋಟೋ ಸೆನ್ಸಾರ್ ನೀಡಲಾಗಿದೆ. ವೀಡಿಯೊ ಕರೆ ಮತ್ತು ಸೆಲ್ಫಿಯ ಅನುಕೂಲಕ್ಕಾಗಿ, ಈ ಸ್ಮಾರ್ಟ್‌ಫೋನ್‌ನಲ್ಲಿ 16MP  ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಪವರ್ ಬ್ಯಾಕಪ್‌ಗಾಗಿ, ಇದು 4,250mAh ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬರುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ