ಮಾರುಕಟ್ಟೆಗೆ ಬಿಡುಗಡೆಯಾಗಲಿದೆ Xiaomi 40 Inch TV, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

ಹೊಸ ಸ್ಮಾರ್ಟ್ ಟಿವಿಯಲ್ಲಿ ಹಾರಿಜಾನ್ ಡಿಸ್ಪ್ಲೇ ಇರುತ್ತದೆ ಮತ್ತು ಬದಿಯಲ್ಲಿ ತುಂಬಾ ತೆಳುವಾದ ಬಜೆಲ್ ನೀಡಲಾಗುವುದು ಎಂದು ಚೀನಾದ ಟೆಕ್ ದೈತ್ಯ ಟ್ವೀಟ್ ಮೂಲಕ ಮಾಹಿತಿ ನೀಡಿದೆ.   

Written by - Ranjitha R K | Last Updated : May 25, 2021, 01:27 PM IST
  • ಮುಂದಿನ ತಿಂಗಳು ಬಿಡುಗಡೆಯಾಗಲಿದೆ Xiaomi ಹೊಸ ಸ್ಮಾರ್ಟ್ ಟಿವಿ
  • ಜೂನ್ 1 ರಂದು ನಡೆಯಲಿರುವ ಆನ್‌ಲೈನ್ ಈವೆಂಟ್‌ನಲ್ಲಿ ಬಿಡುಗಡೆ
  • ಟಿವಿಯ ಫೀಚರ್, ಬೆಲೆ ಏನಿರಲಿದೆ ತಿಳಿಯಿರಿ
ಮಾರುಕಟ್ಟೆಗೆ ಬಿಡುಗಡೆಯಾಗಲಿದೆ Xiaomi 40 Inch TV, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ title=
ಮುಂದಿನ ತಿಂಗಳು ಬಿಡುಗಡೆಯಾಗಲಿದೆ Xiaomi ಹೊಸ ಸ್ಮಾರ್ಟ್ ಟಿವಿ

ನವದೆಹಲಿ : Xiaomi  ತನ್ನ ಹೊಸ ಸ್ಮಾರ್ಟ್ ಟಿವಿಯನ್ನು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಿದೆ. Mi TV 4A 40 Horizo ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಲಾಂಚ್ ಮಾಡಲು ಟೀಸರ್ ಬಿಡುಗಡೆ ಮಾಡಿದೆ. ಈ ಹೊಸ ಟಿವಿ 2019 ರ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದ Mi TV 4A ಫುಲ್ -HD TV  ಮಾಡೆಲ್ ನ ಅಪ್‌ಗ್ರೇಡ್  ವರ್ಸನ್ ಆಗಿದೆ. ಜೂನ್ 1 ರಂದು ನಡೆಯಲಿರುವ ಆನ್‌ಲೈನ್ ಈವೆಂಟ್‌ನಲ್ಲಿ ಕಂಪನಿಯು ಈ ಟಿವಿಯನ್ನು ಬಿಡುಗಡೆ ಮಾಡಲಿದೆ. 

ಹೊಸ ಸ್ಮಾರ್ಟ್ ಟಿವಿಯಲ್ಲಿ (Smart TV) ಹಾರಿಜಾನ್ ಡಿಸ್ಪ್ಲೇ ಇರುತ್ತದೆ ಮತ್ತು ಬದಿಯಲ್ಲಿ ತುಂಬಾ ತೆಳುವಾದ ಬಜೆಲ್ ನೀಡಲಾಗುವುದು ಎಂದು ಚೀನಾದ ಟೆಕ್ ದೈತ್ಯ ಟ್ವೀಟ್ (Tweet) ಮೂಲಕ ಮಾಹಿತಿ ನೀಡಿದೆ. ಕಂಪನಿಯು ಹೊಸ ಟಿವಿಯನ್ನು ಬೆಸೆಲ್ ಲೆಸ್ ಡಿಸೈನ್ ಆಗಿ, ಶೋಕೇಸ್ ಮಾಡುತ್ತಿದೆ.  ಟೀಸರ್ ಇಮೇಜ್ ನಲ್ಲಿ ಈ ಚಿತ್ರವನ್ನು ಕಾಣಬಹುದಾಗಿದೆ. 

ಇದನ್ನೂ ಓದಿ : Oppo Reno 5A ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

Mi TV 4A 40-inch Horizon Edition  Mi TV 4A 40-inch full-HD ಸ್ಮಾರ್ಟ್ ಟಿವಿಯಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ,  ಗೂಗಲ್ ಅಸಿಸ್ಟೆಂಟ್ (Google assistant), ಆಂಡ್ರಾಯ್ಡ್ ಟಿವಿ ಡೇಟಾ ಸೇವಿಂಗ್ ಫೀಚರ್, DTS-HD  ಬೆಂಬಲದೊಂದಿಗೆ 20 W ಸ್ಪೀಕರ್‌ಗಳೊಂದಿಗೆ ಇತ್ತೀಚಿನ ಪ್ಯಾಚ್‌ವಾಲ್ ಸಾಫ್ಟ್‌ವೇರ್ ಕೂಡಾ ಇರಲಿದೆ ಎನ್ನಲಾಗಿದೆ. Mi TV 4A 40-inch  ಟಿವಿಯ ಬೆಲೆ ಎಷ್ಟಿರಲಿದೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಸುಮಾರು 22 ಸಾವಿರ ರೂಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ : WhatsApp New Privacy Policy: WhatsApp ಹೊಸ ಆಟ ಆರಂಭ! ಗೌಪ್ಯತಾ ನೀತಿ ಒಪ್ಪಿಕೊಳ್ಳದ ಬಳಕೆದಾರದಿಗೆ ಎದುರಾದ ಅಡಚಣೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News