ನವದೆಹಲಿ :  ಇಂದಿನ ಕಾಲದಲ್ಲಿ ಹಲವರು ಮೇಲ್ ಬಳಸುತ್ತಾರೆ. ಶಾಲೆ ಮತ್ತು ಕಾಲೇಜಿನ  ಅಸೈನ್‌ಮೆಂಟ್‌ಗಳಿಂದ ಆಫೀಸ್ ಫೈಲ್‌ಗಳವರೆಗೆ, ಹೆಚ್ಚಿನ ಕಾರ್ಯಗಳಿಗಾಗಿ ಮೇಲ್‌ಗಳನ್ನು ಬಳಸಲಾಗುತ್ತದೆ. ಮೇಲ್ ಖಾತೆಯನ್ನು ರಚಿಸಲು ಇರುವ ಕಾಮನ್ ಪ್ಲಾಟ್ ಫಾರಂ ಎಂದರೆ  Gmail. ಹೀಗಿರುವಾಗ ಒಮ್ಮೊಮ್ಮೆ gmail ಖಾತೆ ಲಾಕ್ ಆಗುತ್ತದೆ. ಹೀಗೆ ನಾನಾ ಈಗ ಕಾರಣಗಳಿಂದಾಗಿ gmail ಖಾತೆಯು ಲಾಕ್ ಆಗಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಸುಲಭ ವಿಧಾನವನ್ನು ಬಳಸುವ ಮೂಲಕ , ಮತ್ತೆ ಲಾಗ್ ಇನ್ ಮಾಡಿಕೊಳ್ಳಬಹುದು.  


COMMERCIAL BREAK
SCROLL TO CONTINUE READING

ಸೈನ್-ಇನ್ ವಿಧಾನವನ್ನು ಬದಲಾಯಿಸಿ  :
ಕೆಲವು ಕಾರಣಗಳಿಂದಾಗಿ ನಿಮ್ಮ Gmail ಖಾತೆಯು ಲಾಕ್ ಆಗಿದ್ದರೆ ಅಥವಾ ಲಾಗ್ ಔಟ್ ಆಗಿದ್ದರೆ  ಅಥವಾ ಪಾಸ್‌ವರ್ಡ್ ಮರೆತು ಹೋಗಿದ್ದಲ್ಲಿ, ಖಾತೆಗೆ ಆಕ್ಸೆಸ್ಸ್  ಪಡೆಯುವುದು ಸಾಧ್ಯವಾಗುವುದಿಲ್ಲ.  ಈ ಸಂದರ್ಭದಲ್ಲಿ ಮತ್ತೆ ಖಾತೆಗೆ ಆಕ್ಸೆಸ್ಸ್   ಪಡೆಯಲು ಸೈನ್-ಇನ್ ಪ್ಲಾಟ್‌ಫಾರ್ಮ್ ಅನ್ನು ಬದಲಾಯಿಸಬಹುದು. ಪಾಸ್ವರ್ಡ್ ಬದಲಿಗೆ ನಿಮ್ಮ ಫೋನ್ ಸಂಖ್ಯೆಯೊಂದಿಗೆ Gmail ಖಾತೆಗೆ ಲಾಗ್ ಇನ್ ಮಾಡುವುದು ಸುಲಭವಾದ ಮಾರ್ಗವಾಗಿದೆ. ಅಂತಹ ಸಮಯದಲ್ಲಿ ರಿಕವರಿ  ಇಮೇಲ್ ಐಡಿ ಅಥವಾ ಫೋನ್ ನಂಬರ್ ಅನ್ನು ಕೂಡಾ ಬಳಸಬಹುದು. 


ಇದನ್ನೂ ಓದಿ : Redmi Note 10S: ಕೇವಲ 500 ರೂ.ಗೆ Redmi ಸ್ಮಾರ್ಟ್‌ಫೋನ್ ಖರೀದಿಸಿ, ಹೇಗೆಂದು ತಿಳಿಯಿರಿ


ಆಂಡ್ರಾಯ್ಡ್ ಬಳಕೆದಾರರು ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು
ಈ ವಿಧಾನವನ್ನು  ಆಂಡ್ರಾಯ್ಡ್ ಬಳಕೆದಾರರೂ ಬಳಸಬಹುದು. ನಿಮ್ಮ Gmail ಖಾತೆಯಿಂದ ನೀವು ಲಾಗ್ ಔಟ್ ಆಗಿದ್ದರೆ ಅಥವಾ ನಿಮ್ಮ ಖಾತೆಯು ಲಾಕ್ ಆಗಿದ್ದರೆ, ಈ ರೀತಿ ಮಾಡಿದರೆ ಸುಲಬಹ್ವಾಗಿ ಆಕ್ಸೆಸ್ ಪಡೆಯಬಹುದು. ಎಲ್ಲಾ Android ಫೋನ್‌ಗಳನ್ನು Google ಖಾತೆಗೆ ಲಿಂಕ್ ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ, ನೀವು Google Authenticator ಅಪ್ಲಿಕೇಶನ್ ಬಳಸಿ ಲಾಗ್ ಇನ್ ಮಾಡಬಹುದು. 


ಆಪಲ್ ಬಳಕೆದಾರರು ಈ ರೀತಿ ಲಾಗಿನ್ ಮಾಡಬಹುದು :
ನೀವು Apple ಬಳಕೆದಾರರಾಗಿದ್ದು,  Gmail ಖಾತೆಗೆ ಲಾಗ್ ಇನ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ iPhone ಅಥವಾ iPad ನಲ್ಲಿ ಲಾಗ್ ಇನ್ ಆಗಿರುವ Google ಖಾತೆಯನ್ನು ಬಳಸಬಹುದು. ಲಾಗ್ ಇನ್ ಯಾವತ್ತೂ ಪಾಸ್ವರ್ಡ್ ಅನ್ನು ಕೇಳುವುದಿಲ್ಲ.  


ಇದನ್ನೂ ಓದಿ : Single Sign On Service: ಒಂದೇ ID ಬಳಸಿ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳ ಲಾಭ ಪಡೆಯಿರಿ, ಆಗಸ್ಟ್ ನಿಂದ ಆರಂಭಗೊಳ್ಳುತ್ತಿದೆ ಈ ಹೊಸ ಸೇವೆ


ಇದರ ಹೊರತಾಗಿಯೂ ಕೆಲವು ಆಯ್ಕೆಗಳಿವೆ. ಸಾಮಾನ್ಯವಾಗಿ ಲಾಗ್ ಇನ್ ಮಾಡುವ ಸಾಧನ ಅಥವಾ ಸ್ಥಳವನ್ನು ಬಳಸಬಹುದು. Googleನಲ್ಲಿ ಸರ್ಚ್ ಮಾಡುವ ಮೂಲಕ ರಿಕವರಿ ಇನ್ಫಾರ್ಮೇಶನ್ ಪಡೆದುಕೊಳ್ಳ ಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.