Wallpaper Tips For Mobile: ಬದಲಾಗುತ್ತಿರುವ ಇಂದಿನ ಜೀವನಶೈಲಿಗೂ ಕೂಡ ವಾಸ್ತು ಶಾಸ್ತ್ರದ ನಿಯಮಗಳು ಪ್ರಸ್ತುತವಾಗಿವೆ. ಇಂದಿನ ಕಾಲಕ್ಕೆ ತಕ್ಕಂತೆ ಅವುಗಳನ್ನು ಅನುಸರಿಸಿದರೆ ಅದರಿಂದ ಸಾಕಷ್ಟು ಲಾಭ ಸಿಗುತ್ತದೆ. ಮೊಬೈಲ್ ಬಗ್ಗೆ ಹೇಳುವುದಾದರೆ, ವಾಸ್ತುಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅನುಸರಿಸುವುದರಿಂದ ನೀವು ಅನೇಕ ಸಮಸ್ಯೆಗಳಿಂದ ಪಾರಾಗಬಹುದು, ಜೊತೆಗೆ ನಿಮ್ಮ ವೃತ್ತಿ ಜೀವನ-ಆರ್ಥಿಕ ಸ್ಥಿತಿಗೂ ಕೂಡ ಇದರಿಂದ ಲಾಭ ಸಿಗುತ್ತದೆ. ಇದಕ್ಕಾಗಿ, ನಿಮ್ಮ ಮೊಬೈಲ್‌ನಲ್ಲಿ ವಾಸ್ತುಶಾಸ್ತ್ರದ ನಿಯಮಗಳನ್ನು ಅನುಸರಿಸಿ ವಾಲ್‌ಪೇಪರ್ ಅನ್ನು ಅನ್ವಯಿಸಿದರೆ ಉತ್ತಮ.


COMMERCIAL BREAK
SCROLL TO CONTINUE READING

ಮೊಬೈಲ್ ವಾಲ್‌ಪೇಪರ್ ನಿಂದ ಸಮಸ್ಯೆಗಳ ಪರಿಹಾರ 
ನಾವು ಮೊಬೈಲ್‌ನ ವಾಲ್‌ಪೇಪರ್ ಅನ್ನು ದಿನಕ್ಕೆ ನೂರಾರು ಬಾರಿ ನೋಡುತ್ತೇವೆ, ಇದರಿಂದ ವಾಲ್‌ಪೇಪರ್‌ನಲ್ಲಿ ಏನಿದೆ ಮತ್ತು ಅದು ಹೇಗಿದೆ ಎಂಬುದು ನಮ್ಮ ಆಲೋಚನೆ ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ವಾಲ್‌ಪೇಪರ್ ನೋಡಿದ ತಕ್ಷಣ ಧನಾತ್ಮಕ ಶಕ್ತಿಯಿಂದ ತುಂಬಿಹೋಗುವಂತಿದ್ದರೆ ಅದು ನಮ್ಮ ಆಲೋಚನೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಯಾವ ರೀತಿಯ ಸಮಸ್ಯೆ ನಿವಾರಿಸಲು ಮೊಬೈಲ್‌ನಲ್ಲಿ ಎಂತಹ ವಾಲ್‌ಪೇಪರ್ ಅನ್ನು ಇನ್ಸ್ಟಾಲ್ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.


>> ವೃತ್ತಿ-ವ್ಯವಹಾರದ ಪ್ರಗತಿಗೆ ವಾಲ್‌ಪೇಪರ್: ನಿಮ್ಮ ಉದ್ಯೋಗ-ವ್ಯಾಪಾರದಲ್ಲಿ ನೀವು ಸಿಲುಕಿಹಾಕಿಕೊಂಡಿದ್ದೀರಿ ಎಂದು ನೀವು ಭಾವಿಸುತ್ತಿದ್ದರೆ ಅಥವಾ ನಿಮ್ಮ ಇಚ್ಛೆಯಂತೆ ಪ್ರಗತಿಯನ್ನು ಸಾಧಿಸುತ್ತಿಲ್ಲ ಎಂದು ನೀವು ಭಾವಿಸುತ್ತಿದ್ದಾರೆ, ಮೊಬೈಲ್ ವಾಲ್‌ಪೇಪರ್‌ನಲ್ಲಿ ವ್ಯಕ್ತಿ ಮೆಟ್ಟಿಲುಗಳನ್ನು ಏರುತ್ತಿರುವ ಚಿತ್ರವನ್ನು ನೀವು ಬಳಸಬಹುದು. ಇದು ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ ಮತ್ತು ಇದು ನಿಮಗೆ ಮುಂದುವರಿಯಲು ಸಾಕಷ್ಟು ಸಹಾಯ ಮಾಡುತ್ತದೆ.


>> ಮನಃಶಾಂತಿಗಾಗಿ: ನಿಮ್ಮ ಮನಸ್ಸು ಸದಾ ವಿಚಲಿತವಾಗಿದ್ದರೆ, ನಿಮ್ಮ ಮೊಬೈಲ್ ವಾಲ್‌ಪೇಪರ್‌ನಲ್ಲಿ ಮಳೆಯ ನೀರಿನ ಹಿತವಾದ ಚಿತ್ರವನ್ನು ಹಾಕಿ. ಇದಲ್ಲದೇ ಯೋಗಾಸನದ ಚಿತ್ರವನ್ನೂ ವಾಲ್‌ಪೇಪರ್‌ನಲ್ಲಿ ಹಾಕಿದರೆ ಒಳ್ಳೆಯದು.


>> ವೈವಾಹಿಕ ಅಥವಾ ಪ್ರೇಮ ಜೀವನದ ಸಮಸ್ಯೆಗಳಿಂದ ಹೊರಬರಲು: ಮದುವೆ ಅಥವಾ ಪ್ರೇಮ ಜೀವನದಲ್ಲಿ ಸಮಸ್ಯೆಗಳಿದ್ದರೆ, ವಾಲ್‌ಪೇಪರ್‌ನಲ್ಲಿ ಗುಲಾಬಿಯ ಚಿತ್ರವನ್ನು ಹಾಕಿ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಪ್ರೀತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


>> ಹೊಸ ಉದ್ಯೋಗ ಪಡೆಯಲು: ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ಬಡ್ತಿ ಪಡೆಯಲು ಬಯಸುತ್ತಿದ್ದರೆ, ನಂತರ ಮೊಬೈಲ್‌ನ ವಾಲ್‌ಪೇಪರ್‌ಗೆ ಹಸಿರಿನಿಂದ ಕೂಡಿದ ಚಿತ್ರವನ್ನು ಹಾಕಿ. ಹಸಿರು ಬಣ್ಣವು ಯಶಸ್ಸಿನ ಸಂಕೇತವಾಗಿದೆ.


ಇದನ್ನೂ ಓದಿ-Swayamvar Culture: ನಮ್ಮ ದೇಶದ ಈ ರಾಜ್ಯದಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ ಸ್ವಯಂವರ ಪದ್ಧತಿ ಎಂದರೆ ನಂಬ್ತೀರಾ?


>> ಹಣದ ಕೊರತೆ ಹೋಗಲಾಡಿಸಲು: ಹಣದ ಬಿಕ್ಕಟ್ಟು ನಿಮ್ಮನ್ನು ಬಿಡುತ್ತಿಲ್ಲ ಎಂದಾದಲ್ಲಿ ನಿಮ್ಮ ಮೊಬೈಲ್ ನ ವಾಲ್ ಪೇಪರ್ ನಲ್ಲಿ ಬುದ್ಧನ ಆಶೀರ್ವಾದದ ಚಿತ್ರವನ್ನು ಹಾಕಿದರೆ ಸಾಕಷ್ಟು ಲಾಭ ಸಿಗುತ್ತದೆ. ಇದು ನಿಮ್ಮ ಆದಾಯವನ್ನು ಹೆಚ್ಚಿಸುವಲ್ಲಿ ಸಹಾಯಕ ಸಾಬೀತಾಗುತ್ತದೆ ಮತ್ತು ನಿಮಗೆ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ.


ಇದನ್ನೂ ಓದಿ-Kedar Yog: ಅದೃಷ್ಟವಂತರ ಜಾತಕದಲ್ಲಿರುತ್ತದೆ ಈ ಯೋಗ, ಅಪಾರ ಧನ-ಸಂಪತ್ತು, ಸ್ಥಾನಮಾನದ ಒಡೆಯರಾಗುತ್ತಾರೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.