Summer Health Tips: ಬೇಸಿಗೆ ಕಾಲದಲ್ಲಿ ಮೂತ್ರಪಿಂಡದ ಆರೋಗ್ಯ ರಕ್ಷಣೆಗೆ ಈ ಪಾನೀಯಗಳನ್ನು ಸೇವಿಸಿ!

Lemon Drinks: ಮೂತ್ರ ಪಿಂಡದ ಆರೋಗ್ಯ ರಕ್ಷಣೆಗೆ ನಿಂಬೆ ಹಣ್ಣು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಬನ್ನಿ ನಿಂಬೆ ಹಣ್ಣಿನಿಂದ ತಯಾರಿಸಲಾಗುವ ಮೂರು ವಿಶೇಷ ಪಾನೀಯಗಳ ಕುರಿತು ತಿಳಿದುಕೊಳ್ಳೋಣ.  

Written by - Nitin Tabib | Last Updated : Apr 18, 2023, 10:12 PM IST
  • ಕಿಡ್ನಿ ಆರೋಗ್ಯವಾಗಿರಲು ನೀವು ಬಯಸುತ್ತಿದ್ದರೆ, ನಿಂಬೆಯನ್ನು ಸೇವಿಸಿ.
  • ನಿಂಬೆಹಣ್ಣಿನ ಸೇವನೆಯಿಂದ ಕಿಡ್ನಿಯಲ್ಲಿರುವ ಕೊಳೆ ಶುದ್ಧವಾಗುತ್ತದೆ.
  • ಮೂತ್ರಪಿಂಡವನ್ನು ಆರೋಗ್ಯವಾಗಿಡಲು ನಿಂಬೆಯನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Summer Health Tips: ಬೇಸಿಗೆ ಕಾಲದಲ್ಲಿ ಮೂತ್ರಪಿಂಡದ ಆರೋಗ್ಯ ರಕ್ಷಣೆಗೆ ಈ ಪಾನೀಯಗಳನ್ನು ಸೇವಿಸಿ! title=
ಮೂತ್ರಪಿಂಡದ ಆರೋಗ್ಯಕ್ಕೆ ಸಲಹೆಗಳು!

Kidney Health Tips: ಮೂತ್ರಪಿಂಡವು ನಮ್ಮ ದೇಹದ ಅವಿಭಾಜ್ಯ ಅಂಗವಾಗಿದೆ, ಇದು ದೇಹದಲ್ಲಿ ಇರುವ ಕೊಳೆಯನ್ನು ಸ್ವಚ್ಛಗೊಳಿಸಲು ನಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ರಕ್ತದಲ್ಲಿರುವ ಕೊಳೆಯನ್ನೂ ಸಹ ಸ್ವಚ್ಛಗೊಳಿಸಲು ಇದು ಪರಿಣಾಮಕಾರಿಯಾಗಿದೆ. ಹೀಗಿರುವಾಗ, ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಹಲವಾರು ಸಮಸ್ಯೆಗಳ ಅಪಾಯ ಎದುರಾಗುತ್ತದೆ. ಆದ್ದರಿಂದ ಕಿಡ್ನಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಕಿಡ್ನಿ ಆರೋಗ್ಯವಾಗಿರಲು ನೀವು ಬಯಸುತ್ತಿದ್ದರೆ, ನಿಂಬೆಯನ್ನು ಸೇವಿಸಿ. ನಿಂಬೆಹಣ್ಣಿನ ಸೇವನೆಯಿಂದ ಕಿಡ್ನಿಯಲ್ಲಿರುವ ಕೊಳೆ ಶುದ್ಧವಾಗುತ್ತದೆ. ಮೂತ್ರಪಿಂಡವನ್ನು ಆರೋಗ್ಯವಾಗಿಡಲು ನಿಂಬೆಯನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಪುದೀನಾ-ನಿಂಬೆ ಪಾನಕ
ಪುದೀನ ಮತ್ತು ನಿಂಬೆಯಿಂದ ತಯಾರಿಸಿದ ಪಾನೀಯಗಳನ್ನು ಸೇವಿಸುವುದರಿಂದ ನೀವು ಕಿಡ್ನಿಯನ್ನು ಆರೋಗ್ಯವಾಗಿಡಬಹುದು. ಈ ಪಾನೀಯವನ್ನು ತಯಾರಿಸಲು, ಒಂದು ಲೋಟ ನೀರು ತೆಗೆದುಕೊಳ್ಳಿ. ನಿಂಬೆ ರಸ, ಸ್ವಲ್ಪ ಪುದೀನ ಎಲೆಗಳು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪಾನೀಯವನ್ನು ಸೇವಿಸುವುದರಿಂದ ನಿಮ್ಮ ಮೂತ್ರಪಿಂಡವು ಆರೋಗ್ಯಕರವಾಗಿರುತ್ತದೆ.

ಮಸಾಲಾ ಲೆಮನ್ ಸೋಡಾ
ನೀವು ಸ್ವಲ್ಪ ಮಸಾಲೆ ತಿನ್ನಲು ಇಷ್ಟಪಡುತ್ತಿದ್ದರೆ, ಮಸಾಲಾ ನಿಂಬೆ ಸೋಡಾ ಪಾನೀಯವನ್ನು ಸೇವಿಸಿ. ಇದರಿಂದ ನಿಮ್ಮ ಕಿಡ್ನಿ ಆರೋಗ್ಯಕರವಾಗಿರುತ್ತದೆ. ಈ ಪಾನೀಯವನ್ನು ತಯಾರಿಸಲು, ಒಂದು ಗ್ಲಾಸ್ ತೆಗೆದುಕೊಳ್ಳಿ ಮತ್ತು ಅದರಲ್ಲಿ ನಿಂಬೆ ರಸ, ಜೀರಿಗೆ-ಕೊತ್ತಂಬರಿ ಪುಡಿ, ಚಾಟ್ ಮಸಾಲ ಮತ್ತು ಸೋಡಾ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಸಿದ್ಧಪಡಿಸಿದ ಪಾನೀಯವನ್ನು ಕುಡಿಯಿರಿ. ಇದರಿಂದ ಕಿಡ್ನಿಯನ್ನು ಆರೋಗ್ಯವಾಗಿರುತ್ತದೆ.

ಇದನ್ನೂ ಓದಿ-Marriage Tips: ಮದುವೆಗೂ ಮುನ್ನ ಭಾವಿ ದಂಪತಿಗಳು ಮಾಡಿಸಿಕೊಳ್ಳಬೇಕಾದ ಈ ಪರೀಕ್ಷೆಗಳು ನಿಮಗೂ ಗೊತ್ತಿರಲಿ!

ತೆಂಗಿನಕಾಯಿ ಪಾನಕ
ತೆಂಗಿನಕಾಯಿ ಪಾನಕ ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಪಾನೀಯವನ್ನು ತಯಾರಿಸಲು, ಒಂದು ಲೋಟದಲ್ಲಿ ತೆಂಗಿನ ನೀರನ್ನು ತೆಗೆದುಕೊಳ್ಳಿ. ಈ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.

ಇದನ್ನೂ ಓದಿ-Rules For Washing Hairs: ವಾರದ ಈ ದಿನ ಮಹಿಳೆಯರು ಕೂದಲು ತೊಳೆದರೆ ಪ್ರಸನ್ನಳಾಗುತ್ತಾಳೆ ತಾಯಿ ಲಕ್ಷ್ಮಿ, ಮನೆಯಲ್ಲಿ ಹಣದ ಹೊಳೆಯೇ ಹರಿಸುತ್ತಾಳೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News