ನವದೆಹಲಿ: ಇತ್ತೀಚೆಗೆ ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರಿಗಾಗಿ ಹೊಸ ಆಪರೇಟಿಂಗ್ ಸಿಸ್ಟಮ್ ಅಪ್‌ಗ್ರೇಡ್ (Operating System upgrade) ಮಾಡಲಾಗಿದೆ.  ಆಂಡ್ರಾಯ್ಡ್ 11 ಅನ್ನು ಬಿಡುಗಡೆ ಮಾಡಲಾಗಿದೆ. ಈ ಆಪರೇಟಿಂಗ್ ಸಿಸ್ಟಮ್ ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಅದರ ವೈಶಿಷ್ಟ್ಯಗಳು ನಿಮ್ಮನ್ನು ಇನ್ನೂ ಕ್ರೇಜಿಯಾಗಿಸುತ್ತದೆ.


COMMERCIAL BREAK
SCROLL TO CONTINUE READING

ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಮೂಲಕವೂ ಕಾರ್ಯ ನಿರ್ವಹಿಸಲಿದೆ ಗೂಗಲ್ ಅಸಿಸ್ಟೆಂಟ್: 
ಹೊಸ ಆಂಡ್ರಾಯ್ಡ್ ಆವೃತ್ತಿ  (New Android Version)ಯಲ್ಲಿ ನೀವು ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಮೂಲಕ  ಗೂಗಲ್ ಅಸಿಸ್ಟೆಂಟ್ (Google Assistant) ಅನ್ನು ಸಹ ಡೌನ್‌ಲೋಡ್ ಮಾಡಬಹುದು. ಇದರ ಬಹಳ ದೊಡ್ಡ ಪ್ರಯೋಜನ ಎಂದರೆ ಕೇವರ ವಾಯ್ಸ್ ಕಮಾಂಡ್ (Voice Command) ಮೂಲಕ ಟೈಪ್ ಮಾಡಿ ನೀವು ಯಾವುದೇ ಮೇಲ್ ಕಳುಹಿಸಬಹುದು. ಅಲೆಕ್ಸಾ, ಗಿನಿಯಾ ಮತ್ತು ಸಿರಿಯಂತೆಯೇ ನೀವು ಹೊಸ ಗೂಗಲ್ ಅಸಿಸ್ಟೆಂಟ್ ಅನ್ನು ಬಳಸಲು ಸಾಧ್ಯವಾಗುತ್ತದೆ.


ಈ ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಸಿಗಲಿದೆ ಭಾರೀ ಡಿಸ್ಕೌಂಟ್ ಜೊತೆಗೆ ಕ್ಯಾಶ್‌ಬ್ಯಾಕ್ ಆಫರ್


ಪರಿಶೀಲಿಸಿದ ಕರೆಯ ಮೂಲಕ ಬೇರೆಯವರು ಏಕೆ ಕರೆ ಮಾಡುತ್ತಿದ್ದಾರೆಂದು ತಿಳಿದುಕೊಳ್ಳಿ:-
ಹೊಸ ಆಂಡ್ರಾಯ್ಡ್  (Android) ಆವೃತ್ತಿಯಲ್ಲಿ, ಯಾವುದೇ ಅಪರಿಚಿತ ಕರೆ ಮಾಡುವವರ ಉದ್ದೇಶವನ್ನು ನೀವು ಈಗ ತಿಳಿದುಕೊಳ್ಳಬಹುದು. ವಾಸ್ತವವಾಗಿ ಹೊಸ ವ್ಯವಸ್ಥೆಯಲ್ಲಿ ಕರೆ ಮಾಡುವ ಮೊದಲು, ಕರೆ ಮಾಡಲು ಕಾರಣವೇನು ಎಂಬ ಸಂದೇಶವನ್ನು ಈಗಾಗಲೇ ಆ್ಯಪ್ ಮೂಲಕ ನೀಡಬಹುದು. ಉದಾಹರಣೆಗೆ ಅಪರಿಚಿತ ವ್ಯಕ್ತಿಯು ನಿಮಗೆ ಕರೆ ಮಾಡುವ ಮೊದಲು ಸಂದೇಶವನ್ನು ನೀಡಿದರೆ, ಯಾವ ಕಾರಣಕ್ಕಾಗಿ ಕರೆ ಮಾಡಲಾಗುತ್ತಿದೆ ಎಂದು ತಿಳಿಯುತ್ತದೆ. ನಂತರ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಅದಕ್ಕೆ ಪ್ರತಿಕ್ರಿಯಿಸಬಹುದು.


Trick: ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಚಿಂತಿಸಬೇಡಿ! Google ಸಹಾಯದಿಂದ ಅದನ್ನು ಹೀಗೆ ಪತ್ತೆ ಹಚ್ಚಿ


ಅಕ್ಕ-ಪಕ್ಕದ ಧ್ವನಿಯ ಮೂಲಕವೂ ಮಾಡುತ್ತೆ ಅಲರ್ಟ್: 
ಒಂದೊಮ್ಮೆ ಹೆಡ್‌ಫೋನ್‌ಗಳಲ್ಲಿ ಹೆಚ್ಚು ಸೌಂಡ್ ಕೊಟ್ಟು ಏನಾದರು ಕೇಳುತ್ತಿದ್ದರೆ ನೀವು ಯಾರಾದರು ಮನೆ ಬೆಲ್ ಒತ್ತಿದರೇ ಅಥವಾ ನಿಮ್ಮ ಮನೆಯ ಮೈಕ್ರೋವೇವ್ ಟೈಮರ್ ಸೌಂಡ್ ಆಯ್ತಾ.... ಗೊತ್ತೇ ಆಗಲಿಲ್ಲವಲ್ಲಾ ಎಂದು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಈ ಸ್ಮಾರ್ಟ್‌ಫೋನ್ (Smart Phone) ಅಂತಹ ಸಮಯದಲ್ಲೂ ನಿಮಗೆ ಅಲರ್ಟ್ ನೀಡುತ್ತದೆ. ಈ ಹೊಸ  ವೈಶಿಷ್ಟ್ಯಗಳಲ್ಲಿ ಧ್ವನಿಯನ್ನು ಪತ್ತೆ ಮಾಡುವ ಪುಶ್ ಅಧಿಸೂಚನೆಗಳನ್ನು ನೀಡಲಾಗುತ್ತಿದೆ.