ತನ್ನ ಬಳಕೆದಾರರಿಗೆ `ಫಾರ್ ಯೂ` ಸೆಕ್ಷನ್ ಆಂಭಿಸಿದ ಯೂಟ್ಯೂಬ್, ಬಳಕೆದಾರಿಗೇನು ಲಾಭ? ಇಲ್ಲಿ ತಿಳಿದುಕೊಳ್ಳಿ!
YouTube Big Update: ತನ್ನ ಬಳಕೆದಾರರಿಗೆ ಯೂಟ್ಯೂಬ್ `ಫಾರ್ ಯೂ` ವಿಭಾಗವನ್ನು ಆರಂಭಿಸಿದೆ. ಈ ವಿಭಾಗವು ಯೂ ಟ್ಯೂಬ್ ಬಳಕೆದಾರರಿಗೆ ಅವರು ವೀಕ್ಷಿಸಿದ ವೀಡಿಯೊಗಳ ಪ್ರಕಾರ ಇತರ ವೀಡಿಯೊಗಳನ್ನು ಶಿಫಾರಸು ಮಾಡಲಿದೆ. ಇದು ಬಳಕೆದಾರರ ವೀಕ್ಷಣೆಯ ಅನುಭವವನ್ನು ಮತ್ತಷ್ಟು ಸುಧಾರಿಸಲಿದೆ ಎಂದು ಯೂಟ್ಯೂಬ್ ಹೇಳಿದೆ. (Technology News In Kannada)
ಬೆಂಗಳೂರು: ಯುಟ್ಯೂಬ್ ಕಳೆದ ಕೆಲ ದಿನಗಳಿಂದತನ್ನ ಪ್ಲಾಟ್‌ಫಾರ್ಮ್ ಅನ್ನು ಇತರರಿಗಿಂತ ಉತ್ತಮವಾಗಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಫಾಸ್ಟ್ ಫಾರ್ವರ್ಡ್ ವೈಶಿಷ್ಟ್ಯವನ್ನು ಯೂಟ್ಯೂಬ್ ಗೆ ಸೇರಿಸಲಾಗಿದೆ. ಇದೀಗ ಕಂಪನಿಯು ಕ್ರಿಯೇಟರ್ ವಿಭಾಗದ ಹೋಮ್ ಟ್ಯಾಬ್‌ನಲ್ಲಿ 'ಫಾರ್ ಯೂ' ಎಂಬ ಹೊಸ ಸೆಕ್ಷನ್ ಅನ್ನು ಶಾಮೀಲುಗೊಳಿಸಿದೆ. ಈ ವಿಭಾಗವು ಬಳಕೆದಾರರಿಗೆ ಅವರು ವೀಕ್ಷಿಸಿದ ವೀಡಿಯೊಗಳ ಆಧಾರದ ಮೇಲೆ ವೈಯಕ್ತೀಕರಿಸಿದ ವೀಡಿಯೊಗಳನ್ನು ಶಿಫಾರಸು ಮಾಡುತ್ತದೆ. ಇದು ವೀಕ್ಷಣೆಯ ಅನುಭವವನ್ನು ಸುಧಾರಿಸುತ್ತದೆ ಮತ್ತು ಕಂಟೆಂಟ್ ರಚನೆಕಾರರ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಅದರ ಸಹಾಯದಿಂದ, ವೀಡಿಯೊಗಳನ್ನು ಹುಡುಕುವುದು ತುಂಬಾ ಸುಲಭವಾಗಲಿದೆ. (Technology News In Kannada)
ಫಾರ್ ಯೂ ವಿಭಾಗ
ಈ ಕುರಿತು ಹೇಳಿಕೊಂಡಿರುವ ಯುಟ್ಯೂಬ್ ರಚನೆಕಾರರು ಫಾರ್ ಯೂ ವಿಭಾಗದಲ್ಲಿ ವಿಶೇಷ ಆಯ್ಕೆಯನ್ನು ಪಡೆಯಲಿದ್ದಾರೆ. ಇದರ ಸಹಾಯದಿಂದ, ರಚನೆಕಾರರು ತಮ್ಮ ವೀಕ್ಷಕರಿಗೆ ಯಾವ ವೀಡಿಯೊವನ್ನು ತೋರಿಸಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ. ಇದು ವೀಕ್ಷಕರಿಗೆ ಚಾನಲ್‌ನಲ್ಲಿ ವೈಯಕ್ತಿಕ ಅನುಭವವನ್ನು ನೀಡಲಿದೆ.
ಈ ರೀತಿಯಾಗಿ ಫಾರ್ ಯೂ ಸೆಕ್ಷನ್ ಅನ್ನು ಎಡಿಟ್ ಮಾಡಿ
1. YouTube ಸ್ಟುಡಿಯೋಗೆ ಸೈನ್ ಇನ್ ಮಾಡಿ.
2. ಎಡ ಮೆನುವಿನಲ್ಲಿ ಯೂಸರ್ ವೈಸ್ ಆಯ್ಕೆಯನ್ನು ಆರಿಸಿ.
3. ನಿಮ್ಮ ವೀಕ್ಷಕರಿಗಾಗಿ ಶಿಫಾರಸುಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ.
4. ಇನ್ನಷ್ಟು ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.
5. ಇಲ್ಲಿ, ನಿಮ್ಮ ಆಯ್ಕೆಯ ಪ್ರಕಾರ ನೀವು ತೋರಿಸಲು ಬಯಸುವ ವೀಡಿಯೊಗಳನ್ನು ಆಯ್ಕೆಮಾಡಿ.
6. ಫಿನಿಷ್ ಬಟನ್ ಮೇಲೆ ಟ್ಯಾಪ್ ಮಾಡಿ.
ಯು ಟ್ಯೂಬ್ ಈ ವೈಶಿಷ್ಟ್ಯವನ್ನು ನವೆಂಬರ್ 20 ರಿಂದ ಪ್ರಪಂಚದಾದ್ಯಂತದ ರಚನೆಕಾರರಿಗೆ ಬಿಡುಗಡೆ ಮಾಡಲಿದೆ. ಈ ವೈಶಿಷ್ಟ್ಯವು ರಚನೆಕಾರರು ಮತ್ತು ವೀಕ್ಷಕರು ಇಬ್ಬರಿಗೂ ತುಂಬಾ ಉಪಯುಕ್ತವಾಗಿದೆ ಎಂದು ಕಂಪನಿಯು ನಿರೀಕ್ಷೆ ಹೊಂದಿದೆ.
ಎಐ ವೈಶಿಷ್ಟ್ಯವು ಬರಲಿದೆ
ವೀಡಿಯೊ ಸ್ಟ್ರೀಮಿಂಗ್ ದೈತ್ಯ ಯುಟ್ಯೂಬ್ ಪ್ರಸ್ತುತ AI ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯದ ವಿಶೇಷತೆ ಎಂದರೆ. ಇದು ವೀಡಿಯೊದಲ್ಲಿನ ಕಾಮೆಂಟ್‌ಗಳನ್ನು ಸ್ವಯಂಚಾಲಿತವಾಗಿ ಸಾರಾಂಶಗೊಳಿಸಲಿದೆ. ಇದು ಉತ್ತಮ ವಿಷಯವನ್ನು ರಚಿಸಲು ರಚನೆಕಾರರನ್ನು ಪ್ರೇರೇಪಿಸಲಿದೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಸಾಧ್ಯತೆಯನ್ನು ಹೆಚ್ಚಿಸಲಿದೆ. ಹೊಸ ವರ್ಷದ ಆರಂಭದಲ್ಲಿ AI ವೈಶಿಷ್ಟ್ಯವನ್ನು ಬಿಡುಗಡೆಯಾಗುವ ನಿರೀಕ್ಷೆ ಇದೆ
ಇದನ್ನೂ ಓದಿ-Free... Free...Free.. ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಬಂಬಾಟ್ ಉಡುಗೊರೆ ನೀಡಿದೆ ಈ ಟೆಲಿಕಾಂ ಕಂಪನಿ!
ಸೆಪ್ಟಂಬರ್‌ನಲ್ಲಿ ಕ್ರಿಯೇಟ್ ಅಪ್ಲಿಕೇಶನ್ ಆರಂಬಿಸಲಾಗಿದೆ
ಯುಟ್ಯೂಬ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕ್ರಿಯೇಟ್ ಅಪ್ಲಿಕೇಶನ್ ಅನ್ನು ಆರಂಭಿಸಿತ್ತು. ಈ ಅಪ್ಲಿಕೇಶನ್‌ನ ಸಹಾಯದಿಂದ, ರಚನೆಕಾರರು ತಮ್ಮ ವೀಡಿಯೊಗಳನ್ನು ಸುಲಭವಾಗಿ ಎಡಿಟ್ ಮಾಡಬಹುದು. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಅನ್ನು ಬಳಸುವ ಅವಶ್ಯಕತೆ ಇಲ್ಲ. ಇದಲ್ಲದೆ, ದೊಡ್ಡ ವೀಡಿಯೊಗಳನ್ನು ಎಡಿಟ್ ಮಾಡಲು ಅಪ್ಲಿಕೇಶನ್‌ನಲ್ಲಿ ಪ್ರೀಮಿಯಂ ಪರಿಕರಗಳನ್ನು ಒದಗಿಸಲಾಗಿದೆ.
ಇದನ್ನೂ ಓದಿ-ಇನ್ಮುಂದೆ ವಾಟ್ಸ್ ಆಪ್ ಖಾತೆ ನಿರ್ವಹಿಸಲು ಫೋನ್ ನಂಬರ್ ಬೇಕಿಲ್ಲ... ಬರುತ್ತಿದೆ ಜಬರ್ದಸ್ತ್ ವೈಶಿಷ್ಟ್ಯ!
ಯೂಟ್ಯೂಬ್ ಆರಂಭಿಸಿದೆ ಫಾರ್ ಯೂ ವಿಭಾಗ.
ವೀಕ್ಷಿಸಿದ ವೀಡಿಯೊಗಳಿಗೆ ಅನುಗುಣವಾಗಿಯೇ ಈ ವಿಭಾಗವು ಇತರ ವೀಡಿಯೊಗಳನ್ನು ಶಿಫಾರಸು ಮಾಡಲಿದೆ.
ಫಾರ್ ಯೂ ಸೆಕ್ಷನ್ ಕಂಟೆಂಟ್ ರಚನೆಕಾರರು ಮತ್ತು ವೀಕ್ಷಕರಿಗೆ ತುಂಬಾ ಸಹಕಾರಿಯಾಗಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ