Free... Free...Free.. ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಬಂಬಾಟ್ ಉಡುಗೊರೆ ನೀಡಿದೆ ಈ ಟೆಲಿಕಾಂ ಕಂಪನಿ!

Diwali 2023 Offer: ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಹಳೆಯ ಗ್ರಾಹಕರಿಗೆ 4G ಸಿಮ್ ಅಪ್‌ಗ್ರೇಡ್ ಆಫರ್ ಜಾರಿಗೆ ತಂದಿದೆ. ಈ ಕೊಡುಗೆಯ ಅಡಿಯಲ್ಲಿ, ಬಳಕೆದಾರರು ಉಚಿತ ಸಿಮ್ ಅಪ್‌ಗ್ರೇಡ್ ಮತ್ತು ಉಚಿತ ಡೇಟಾದ ಸೌಲಭ್ಯವನ್ನು ಪಡೆಯಲಿದ್ದಾರೆ.  ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋನ (Technology News In Kannada)

Last Updated : Nov 7, 2023, 06:32 PM IST
  • ಬಿಎಸ್ಎನ್ಎಲ್ ತನ್ನ ಅಧಿಕೃತ X ಹ್ಯಾಂಡಲ್‌ನಲ್ಲಿ 4G ಅಪ್‌ಗ್ರೇಡ್ ಸಿಮ್ ಕೊಡುಗೆಯನ್ನು ಪ್ರಕಟಿಸಿದೆ.
  • ಈ ಹೊಸ ಕೊಡುಗೆಗೆ ಸಂಬಂಧಿಸಿದ ಪ್ರಚಾರದ ಪೋಸ್ಟರ್ ಅನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
  • ಆಫರ್‌ಗೆ ಸಂಬಂಧಿಸಿದ ವಿವರಗಳನ್ನು ಈ ಪೋಸ್ಟರ್‌ನಲ್ಲಿ ಬಹಿರಂಗಪಡಿಸಲಾಗಿದೆ.
Free... Free...Free.. ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಬಂಬಾಟ್ ಉಡುಗೊರೆ ನೀಡಿದೆ ಈ ಟೆಲಿಕಾಂ ಕಂಪನಿ! title=

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಒಂದರ ಮೇಲೊಂದರಂತೆ ದೀಪಾವಳಿ ಹಬ್ಬದ ಪ್ರಯುಕ್ತ ಕೊಡುಗೆಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗೆ, ಸರ್ಕಾರಿ ಟೆಲಿಕಾಂ ಕಂಪನಿಯು ತನ್ನ ಅನೇಕ ಯೋಜನೆಗಳಲ್ಲಿ 3GB ಹೆಚ್ಚುವರಿ ಡೇಟಾ ಪ್ರಯೋಜನಗಳ ಕೊಡುಗೆಯನ್ನು ಪರಿಚಯಿಸಿದೆ. ಇದೇ ವೇಳೆ, ಇದೀಗ ಕಂಪನಿಯು ತನ್ನ 2G ಮತ್ತು 3G ಗ್ರಾಹಕರಿಗೆ 4G ಸಿಮ್ ಅಪ್‌ಗ್ರೇಡ್ ಕೊಡುಗೆಯನ್ನು ತಂದಿದೆ. ಈ ಕೊಡುಗೆಯ ಅಡಿಯಲ್ಲಿ, ಬಿಎಸ್ಎನ್ಎಲ್ 2G ಮತ್ತು 3G ಗ್ರಾಹಕರು ತಮ್ಮ ಸಿಮ್ ಅನ್ನು 4G ಗೆ ಅಪ್‌ಗ್ರೇಡ್ ಮಾಡಬಹುದು. ಅಡಾ ವಿವರಗಳು ಕೆಳಗಿನಂತಿವೆ (Technology News In Kannada)

 ಬಿಎಸ್ಎನ್ಎಲ್ 4G ಸಿಮ್ ಅಪ್‌ಗ್ರೇಡ್ ಆಫರ್
ಬಿಎಸ್ಎನ್ಎಲ್ ತನ್ನ ಅಧಿಕೃತ X ಹ್ಯಾಂಡಲ್‌ನಲ್ಲಿ 4G ಅಪ್‌ಗ್ರೇಡ್ ಸಿಮ್ ಕೊಡುಗೆಯನ್ನು ಪ್ರಕಟಿಸಿದೆ. ಈ ಹೊಸ ಕೊಡುಗೆಗೆ ಸಂಬಂಧಿಸಿದ ಪ್ರಚಾರದ ಪೋಸ್ಟರ್ ಅನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆಫರ್‌ಗೆ ಸಂಬಂಧಿಸಿದ ವಿವರಗಳನ್ನು ಈ ಪೋಸ್ಟರ್‌ನಲ್ಲಿ ಬಹಿರಂಗಪಡಿಸಲಾಗಿದೆ. ಕೊಡುಗೆಯ ಅಡಿಯಲ್ಲಿ, ಹಳೆಯ ಬಿಎಸ್ಎನ್ಎಲ್ ಗ್ರಾಹಕರು ತಮ್ಮ 2G ಮತ್ತು 3G ಸಿಮ್ ಅನ್ನು 4G ಗೆ ಅಪ್‌ಗ್ರೇಡ್ ಮಾಡಬಹುದು, ಅದು ಕೂಡ ಸಂಪೂರ್ಣವಾಗಿ ಉಚಿತವಾಗಿದೆ. ಉಚಿತ ಅಪ್‌ಗ್ರೇಡ್ ಸಿಮ್ ಮಾತ್ರವಲ್ಲ, ಈ ಕೊಡುಗೆಯ ಅಡಿಯಲ್ಲಿ ಬಳಕೆದಾರರು ಹೊಸ ಸಿಮ್‌ನಲ್ಲಿ 4GB ಉಚಿತ ಡೇಟಾವನ್ನು ಸಹ ಪಡೆಯಲಿದ್ದಾರೆ. ಉಚಿತ ಡೇಟಾ ಆಫರ್ 3 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಬಿಎಸ್ಎನ್ಎಲ್ ಕಂಪನಿಯು ತನ್ನ 4G ಸೇವೆಯನ್ನು ಹೆಚ್ಚಿಸಲು ಈ ಕೊಡುಗೆಯನ್ನು ಪ್ರಕಟಿಸಿದೆ ಎನ್ನಲಾಗುತ್ತಿದೆ.

ಈ ರೀತಿ ಸಿಮ್ ಅಪ್‌ಗ್ರೇಡ್‌ಗೆ ಅರ್ಜಿ ಸಲ್ಲಿಸಿ
ಬಿಎಸ್ಎನ್ಎಲ್ ನ ಹೊಸ ಕೊಡುಗೆಯ ಅಡಿಯಲ್ಲಿ, ನಿಮ್ಮ 2G ಮತ್ತು 3G ಸಿಮ್ ಅನ್ನು ಅಪ್‌ಗ್ರೇಡ್ ಮಾಡಲು, ನೀವು ಬಿಎಸ್ಎನ್ಎಲ್ ನ ಗ್ರಾಹಕ ಸೇವಾ ಕೇಂದ್ರಕ್ಕೆ ಸಂಪರ್ಕಿಸಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಬಿಎಸ್ಎನ್ಎಲ್ ಸ್ಟೋರ್‌ಗೆ ಹೋಗಬಹುದು. ಇದಲ್ಲದೆ, ನೀವು 1503/ 18001801503 ಸಂಖ್ಯೆಗೆ ಕರೆ ಮಾಡುವ ಮೂಲಕ ಕೊಡುಗೆಯ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ-ಇನ್ಮುಂದೆ ವಾಟ್ಸ್ ಆಪ್ ಖಾತೆ ನಿರ್ವಹಿಸಲು ಫೋನ್ ನಂಬರ್ ಬೇಕಿಲ್ಲ... ಬರುತ್ತಿದೆ ಜಬರ್ದಸ್ತ್ ವೈಶಿಷ್ಟ್ಯ!

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಮೇ ತಿಂಗಳಲ್ಲಿ 4G ನೆಟ್‌ವರ್ಕ್ ರೋಲ್‌ಔಟ್ ಬಗ್ಗೆ ಮಾಹಿತಿಯನ್ನು ನೀಡಿದೆ. ಆಗ ಡಿಸೆಂಬರ್ ವೇಳೆಗೆ 4ಜಿ 5ಜಿಗೆ ಅಪ್ ಗ್ರೇಡ್ ಆಗಲಿದೆ ಎಂದು ಹೇಳಲಾಗಿತ್ತು. ಆದಾಗ್ಯೂ, ಇಂಡಿಯಾ ಮೊಬೈಲ್ ಕಾಂಗ್ರೆಸ್ 2023 ರ ಸಮಯದಲ್ಲಿ, ಕಂಪನಿಯ ಅಧ್ಯಕ್ಷ ಪಿ ಕೆ ಪುರ್ವಾರ್ ಅವರು ಡಿಸೆಂಬರ್‌ನಲ್ಲಿ 4G ಸೇವೆಯನ್ನು ಪ್ರಾರಂಭಿಸುವುದಾಗಿ ಮತ್ತು ನಂತರ ಅದನ್ನು ಕ್ರಮೇಣ ಜೂನ್ 2024 ರಲ್ಲಿ ಎಲ್ಲಾ ನಗರಗಳಲ್ಲಿ ಹೊರತರುವುದಾಗಿ ಹೇಳಿದ್ದರು. ಇದೇ ವೇಳೆ, ಜೂನ್ ನಂತರ ಅದನ್ನು 5G ಗೆ ಅಪ್‌ಗ್ರೇಡ್ ಮಾಡಲಾಗುವುದು ಎಂದಿದ್ದರು.

ಇದನ್ನೂ ಓದಿ-ತನ್ನ ಈ 2 ರೀಚಾರ್ಜ್ ಯೋಜನೆಗಳಲ್ಲಿ 3 ಜಿಬಿ ಹೆಚ್ಚುವರಿ ಡೇಟಾ ನೀಡುವುದಾಗಿ ಘೋಷಿಸಿದ ಟೆಲಿಕಾಂ ಕಂಪನಿ!

ಬಿಎಸ್ಎನ್ಎಲ್ 3GB ಡೇಟಾ ಆಫರ್
ಇತ್ತೀಚೆಗೆ ಬಿಎಸ್ಎನ್ಎಲ್ ದೀಪಾವಳಿ ಕೊಡುಗೆ ಅಡಿಯಲ್ಲಿ 5 ಯೋಜನೆಗಳ ಅಡಿಯಲ್ಲಿ 3GB ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ಈ ಯೋಜನೆಗಳು 251, 299, 398, 499 ಮತ್ತು 599 ರೂ.ಗಳ ಯೋಜನೆಗಳಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News