500 ರೂಪಾಯಿ ನೋಟಿನ ಕಂತೆಗಳನ್ನು ದಾರಿಯುದ್ದಕೂ ಎಸೆದ Youtuber? ಯಾರು ಗೊತ್ತಾ ಆ ಸಿರಿವಂತ ?
ಇಲ್ಲೊಬ್ಬ ಯೂಟ್ಯೂಬರ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ದಾರಿಯುದ್ದಕ್ಕೂ ಹಣದ ಕಂತೆಗಳನ್ನು ಎಸ್ಯುತ್ತಾ ಸಾಗಿದ ಈ ವ್ಯಕ್ತಿ ಯಾರು ಗೊತ್ತಾ ?
ಹೈದರಾಬಾದ್ : ಯೂಟ್ಯೂಬರ್‌ನ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ,ಹೈದರಾಬಾದ್ ಮೂಲದ ಯೂಟ್ಯೂಬರ್, ಬೈಕ್‌ನ ಹಿಂಬದಿಯಲ್ಲಿ ಸವಾರಿ ಮಾಡುತ್ತಾ, ಜನನಿಬಿಡ ರಸ್ತೆಯಲ್ಲಿ ನೋಟುಗಳ ಬಂಡಲ್‌ಗಳನ್ನು ಗಾಳಿಯಲ್ಲಿ ಎಸೆಯುವ ದೃಶ್ಯ ಕಂಡು ಬಂದಿದೆ.ಈ ವೀಡಿಯೊವನ್ನು ಸುಧಾಕರ್ ಉಡುಮುಲ @sudhakarudumula Xನಲ್ಲಿ ಹಂಚಿಕೊಂಡಿದ್ದಾರೆ.
ಈ ಯೂಟ್ಯೂಬರ್ ಯಾರು? :
ಮಾಧ್ಯಮವೊಂದರ ವರದಿಯ ಪ್ರಕಾರ, ಈ ಯೂಟ್ಯೂಬರ್ ನನ್ನು ಪವರ್ ಹರ್ಷ ಎಂದು ಗುರುತಿಸಲಾಗಿದೆ. ಅವರು ಆನ್‌ಲೈನ್‌ನಲ್ಲಿ "ಇಟ್ಸ್_ಮೀ_ಪವರ್" ಎಂದೇ ಖ್ಯಾತಿ ಹೊಂದಿದ್ದಾರೆ. ಅವರು ಕನಿಷ್ಠ ಮೂರು ರೀತಿಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.ಅಲ್ಲಿ ಜನ ಸಂದಣಿ ಇರುವ ಜಾಗದಲ್ಲಿ ಟ್ರಾಫಿಕ್‌ನಲ್ಲಿ ಗಾಳಿಯಲ್ಲಿ ಹಣವನ್ನು ಎಸೆಯುವುದನ್ನು ಕಾಣಬಹುದು.
ಇದನ್ನೂ ಓದಿ : ಕಾರಿನ ಈ LED ಇಂಡಿಕೇಟರ್ ಆನ್ ಆದರೆ ತಕ್ಷಣ ಅಲರ್ಟ್ ಆಗಿ !ಅನಾಹುತದ ಮುನ್ಸೂಚನೆ ಅದು !
ಜನರ ಪ್ರತಿಕ್ರಿಯೆ :
ಯೂಟ್ಯೂಬರ್‌ನ ಈ ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ.ಈ ವ್ಯಕ್ತಿ ತಾನು ಮಾಡಿರುವ ಕಾರ್ಯಕ್ಕೆ ತನ್ನ ಚಾನೆಲ್ ಮೂಲಕವೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈತನ ಖಾತೆಯನ್ನು ಸಾಮಾಜಿಕ ಜಾಲ ತಾಣದಿಂದ ಡಿಲೀಟ್ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!
ಇನ್ನು ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎನುವ ಒತ್ತಾಯವೂ ಕೇಳಿ ಬಂದಿದೆ.ಅವರ ಬ್ಯಾಂಕ್ ಖಾತೆಗಳೊಂದಿಗೆ ಯೂಟ್ಯೂಬ್ ಚಾನೆಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಯಾನ್ ಮಾಡಬೇಕು ಎಂದು ಬರೆದಿದ್ದಾರೆ.ಶಾಂತಿಯುತ ವಾತಾವರಣವನ್ನು ಕದಡುವ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಈ ಯೂಟ್ಯೂಬರ್‌ಗಳ ಬಗ್ಗೆ ಹೈದರಾಬಾದ್ ಪೊಲೀಸರು ಏಕೆ ಕರುಣೆ ತೋರಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz