ರಿಲಯನ್ಸ್ ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್: ಕೈಗೆಟುಕುವ ಬೆಲೆಯಲ್ಲಿ 2 ರಿಚಾರ್ಜ್ ಪ್ಲಾನ್ ಘೋಷಣೆ

Jio Recharge Plan: ಭಾರತದ ಅತಿದೊಡ್ಡ ಟೆಲಿಕಾಂ ನೆಟ್ವರ್ಕ್ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಎರಡು ಅತ್ಯುತ್ತಮ ಕೈಗೆಟುಕುವ ಬೆಲೆಯ ಹೊಸ ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. 

Written by - Yashaswini V | Last Updated : Aug 22, 2024, 08:33 AM IST
  • ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸ ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.
  • ಇದು ಜಿಯೋ ನೀಡುವ ಅನಿಯಮಿತ 5G ಡೇಟಾ ಪ್ರವೇಶದೊಂದಿಗೆ ಅತ್ಯಂತ ಒಳ್ಳೆ ಪ್ರಿಪೇಯ್ಡ್ ಯೋಜನೆ
  • ಇದು JioTV, JioCinema ಮತ್ತು JioCloud ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.
ರಿಲಯನ್ಸ್ ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್: ಕೈಗೆಟುಕುವ ಬೆಲೆಯಲ್ಲಿ 2 ರಿಚಾರ್ಜ್ ಪ್ಲಾನ್ ಘೋಷಣೆ  title=

Affordable Jio Plans: ಏರ್​ಟೆಲ್, ವೋಡಾಫೋನ್-ಐಡಿಯಾ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿರುವ ಭಾರತದ ಅತಿದೊಡ್ಡ ಟೆಲಿಕಾಂ ನೆಟ್ವರ್ಕ್ ರಿಲಯನ್ಸ್ ಜಿಯೋ (Reliance Jio) ತನ್ನ ಬಳಕೆದಾರರಿಗಾಗಿ ಎರಡು ಕೈಗೆಟುಕುವ ಬೆಲೆಯ  ಪ್ರಿಪೇಯ್ಡ್  ರೀಚಾರ್ಜ್ ಯೋಜನೆಗಳನ್ನು (Prepaid Recharge Plans) ಘೋಷಿಸಿದೆ. ಗಮನಾರ್ಹವಾಗಿ ಈ ರಿಚಾರ್ಜ್ ಯೋಜನೆಗಳ ಬೆಲೆ 200 ರೂ.ಗಿಂತಲೂ ಕಡಿಮೆ. 

ಎದುರಾಳಿ ಟೆಲಿಕಾಂ ಕಂಪನಿಗಳಿಗೆ ಪ್ರಬಲ ಸ್ಪರ್ಧೆ ನೀಡಲು ಯೋಜಿಸಿರುವ ಮುಖೇಶ್ ಅಂಬಾನಿಯವರ (Mukesh Ambani) ರಿಲಯನ್ಸ್ ಜಿಯೋ ಜಬರ್ದಸ್ತ್ ಆಗಿರುವ ಕಡಿಮೆ ಬೆಲೆಯ ಎರಡು ಪ್ರಿಪೇಯ್ಡ್ ಯೋಜನೆಗಳನ್ನು (Prepaid Plans) ಬಿಡುಗಡೆ ಮಾಡಿದೆ. ಇವುಗಳ ಬೆಲೆ ಕೇವಲ 198 ರೂ. ಮತ್ತು 199 ರೂಪಾಯಿಗಳು. ಈ ಎರಡೂ ರಿಚಾರ್ಜ್ ಯೋಜನೆಗಳಲ್ಲಿ ಅನ್ಲಿಮಿಟೆಡ್ ಕಾಲ್ ಜೊತೆಗೆ ಹಲವು ಆಫರ್‌ಗಳನ್ನು ಕೂಡ ನೀಡಲಾಗಿದೆ. 

ಇದನ್ನೂ ಓದಿ- ವಾಟ್ಸಾಪ್‌ನಲ್ಲೂ ಬಂತು ಇನ್‌ಸ್ಟಾಗ್ರಾಮ್‌ನಂತ ಫೀಚರ್!

ರಿಲಯನ್ಸ್ ಜಿಯೋ 198 ರೂ.  ಪ್ಲಾನ್ (Reliance Jio 198 Rs. Plan): 
ರಿಲಯನ್ಸ್ ಜಿಯೋದ 198ರೂ. ರಿಚಾರ್ಜ್ ಪ್ಲಾನ್ (Reliance Jio 198 Rs. Plan), 14ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಅನ್ಲಿಮಿಟೆಡ್ ಕರೆ ಜೊತೆಗೆ ನಿತ್ಯ 2ಜಿಬಿ 5G ಡೇಟಾ ಮತ್ತು ಉಚಿತ ಎಸ್‌ಎಮ್‌ಎಸ್ ಸೌಲಭ್ಯವೂ ಸಹ ಸಿಗುತ್ತದೆ. ಇದಲ್ಲದೆ, ಜಿಯೋ ಆಪ್ ಮೂಲಕ ಹಲವು ಚಾನೆಲ್ಗಳಿಗೂ ಉಚಿತ ಪ್ರವೇಶ ಲಭ್ಯವಾಗಲಿದೆ. 

ಇದನ್ನೂ ಓದಿ- ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡಿದ ಗ್ರಾಹಕರು: 229 ರೂ. ರಿಚಾರ್ಜ್ ಪ್ಲಾನ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ರಿಲಯನ್ಸ್ ಜಿಯೋ 199 ರೂ. ಪ್ಲಾನ್ (Reliance Jio 199 Rs. Plan): 
ನೀವು ಹೆಚ್ಚಿನ ವ್ಯಾಲಿಡಿಟಿ ಬಯಸಿದರೆ 199 ರೂ. ರಿಚಾರ್ಜ್ ಪ್ಲಾನ್ (Reliance Jio 199 Rs. Plan) ನಿಮಗೆ ಪ್ರಯೋಜನಕಾರಿ ಆಗಿದೆ. ಈ ಯೋಜನೆಯು 18 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಗ್ರಾಹಕರಿಗೆ ಪ್ರತಿದಿನ ಅನಿಯಮಿತ ಕರೆಗಳ ಜೊತೆಗೆ 1.5ಜಿಬಿ 5G ಡೇಟಾ ಹಾಗೂ ನಿತ್ಯ 100 ಉಚಿತ ಎಸ್‌ಎಮ್‌ಎಸ್ ಸಿಗುತ್ತದೆ. ಇದು JioTV, JioCinema ಮತ್ತು JioCloud ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News