ತಂತ್ರಜ್ಞಾನದ ಪ್ರಗತಿಯೊಂದಿಗೆ ಪ್ರಸ್ತುತ ಆನ್‌ಲೈನ್ ಪೇಮೆಂಟ್ ಪ್ರವೃತ್ತಿ ಹೆಚ್ಚಾಗಿದೆ. ಹಿಂದೆಲ್ಲಾ ವಿದ್ಯುತ್ ಬಿಲ್,  ವಾಟರ್ ಬಿಲ್‌ಗಳನ್ನು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪಾವತಿಸಬೇಕಾಗಿತ್ತು. ಈಗಿನ ಡಿಜಿಟಲ್ ಯುಗದಲ್ಲಿ ಇಂತಹ ಬಹುತೇಕ ಕೆಲಸಗಳನ್ನು ಸದಾ ಕೈಯಲ್ಲೇ ಇರುವ ಸ್ಮಾರ್ಟ್‌ಫೋನ್‌ ಮುಖಾಂತರ ಸುಲಭವಾಗಿ ಮಾಡಬಹುದು. ಅದರಲ್ಲೂ, ಇದೀಗ ಜನಪ್ರಿಯ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಮೂಲಕವೂ ನೀವು ವಿದ್ಯುತ್ ಬಿಲ್ ಪಾವತಿಸಬಹುದು.