1 Crore for Dog Caretaker : ಜಗತ್ತಿನಲ್ಲಿ ಅನೇಕ ಪ್ರಾಣಿ ಪ್ರಿಯರಿದ್ದಾರೆ. ನಾಯಿಗಳನ್ನು ಪ್ರೀತಿಸುವವರಿಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಭಾರತದಲ್ಲಿ 100 ಜನರಲ್ಲಿ ಕನಿಷ್ಠ 20 ಜನರು ನಾಯಿಗಳನ್ನು ಹೊಂದಿರುತ್ತಾರೆ. ಮನೆ ಮಕ್ಕಳಿಗಿಂತಲೂ ಸಹ ಹೆಚ್ಚಾಗಿ ಅವರುಗಳನ್ನು ಹಾರೈಕೆ ಮಾಡುತ್ತಿರುತ್ತಾರೆ. ಇದೀಗ ಅಂತಹ ಶ್ರೀಮಂತ ವ್ಯಕ್ತಿಯೊಬ್ಬ ತಮ್ಮ ನಾಯಿಯನ್ನು ನೋಡಿಕೊಳ್ಳುವ ಪಾಲಕರಿಗೆ ಒಳ್ಳೆಯ ಸಂಬಳ ಜೊತೆಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಸಾಕು ನಾಯಿಗಳ ಮೇಲೆ ಪ್ರೀತಿ ಇರುವ ಜನರು ಹಣದ ಬಗ್ಗೆ ಯಾವುತ್ತೂ ಚಿಂತೆ ಮಾಡಲ್ಲ, ತಾವು ಸರಿಯಾಗಿ ಊಟ ಮಾಡಿಲ್ಲ ಅಂದ್ರೂ ಪರವಾಗಿಲ್ಲ, ಅವುಗಳಿಗೆ ಬೇಕಾದ ದುಬಾರಿ ಆಹಾರವನ್ನು ಖರೀದಿಸುತ್ತಾರೆ. ಇದಲ್ಲದೆ, ವಿವಿಧ ರೀತಿಯ ಬಟ್ಟೆಗಳನ್ನು ಸಹ ಖರೀದಿಸಲಾಗುತ್ತದೆ. ಮಗನನ್ನೂ ಸಹ ಅಷ್ಟು ಚನ್ನಾಗಿ ನೋಡಿಕೊಳ್ತಾರೋ ಇಲ್ಲ ಗೊತ್ತಿಲ್ಲ, ಅಷ್ಟು ಕಾಳಜಿ ಸಾಕು ನಾಯಿಯ ಮೇಲೆ ಇರುತ್ತದೆ.


ಇದನ್ನೂ ಓದಿ: 80, 100, 120kmph! ಪ್ರತಿ ರಸ್ತೆಗೆ ಪ್ರತ್ಯೇಕ ವೇಗ ಮಿತಿ.. ನಿಮಗೂ ತಿಳಿದಿರಲಿ!


ಸದ್ಯ ಲಂಡನ್ ಮೂಲದ ಕೋಟ್ಯಾಧಿಪತಿಯೊಬ್ಬರು ತಮ್ಮ ನಾಯಿಯನ್ನು ನೋಡಿಕೊಳ್ಳಲು ಒಂದು ಕೋಟಿ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ಉದ್ಯೋಗ ಘೋಷಣೆ ಮಾಡಿದ್ದಾರೆ. ಆತನಿಗೆ ತನ್ನ ನಾಯಿಗಳೆಂದರೆ ತುಂಬಾ ಇಷ್ಟ. ಈಗ ಇರುವ ಎರಡು ನಾಯಿಗಳನ್ನು ಸಾಕಿದರೆ ಕೋಟಿ ರೂ. ಪ್ಯಾಕೇಜ್ ನೀಡಲು ಮುಂದಾಗಿದ್ದಾರೆ. ಇದಲ್ಲದೇ ಶ್ವಾನಗಳನ್ನು ಕೊಂಡೊಯ್ಯುವ ಸ್ಥಳಗಳಿಗೆ ಐಷಾರಾಮಿ ಜೆಟ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡಿದ್ದಾರೆ.


ಜೊತೆಗೆ ನಾಯಿಗಳ ಆರೈಕೆ ಮಾಡುವವರಿಗೆ 42 ದಿನಗಳ ರಜೆ ಇದೆ. ಈ ಪ್ರಯಾಣದ ಭಾಗವಾಗಿ ಊಟದ ಜೊತೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಈ ಕೆಲಸದ ಭಾಗವಾಗಿ ನಾಯಿಗಳಿಗೆ ಪ್ರತಿದಿನ ಆಹಾರ ನೀಡುವುದರಿಂದ ಅವುಗಳ ಆರೈಕೆ ಮಾಡುವುದು ಒಳಗೊಂಡಿರುತ್ತದೆ.


ಇದನ್ನೂ ಓದಿ: ಇಷ್ಟು ದಿನ ಮೆಟ್ರೋದಲ್ಲಿ ಹಗ್‌, ಕಿಸ್‌ ಆಯ್ತು..ಇದೀಗ ಬಿಗ್ ಫೈಟಿಂಗ್; ವಿಡಿಯೋ ವೈರಲ್‌!


ಮೇಲಾಗಿ ಶ್ವಾನಗಳಿಗೆ ಕಾಯಿಲೆ ಬಂದಾಗ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.. ದಿನವೂ ಸ್ನಾನ ಮಾಡಿಸಬೇಕು. ಪ್ರತಿ ದಿನ, ನಾಯಿಗಳ ಅಗತ್ಯ ಕೆಲಸವನ್ನು ಮಾಡಬೇಕು. ಆದರೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಷರತ್ತುಗಳನ್ನು ಸಹ ನೀಡಲಾಗಿದೆ. ಈ ಕೆಲಸ ಮಾಡುವವರು ನಾಯಿಗಳ ಬಗ್ಗೆ ತಿಳಿದಿರಬೇಕು ಮತ್ತು ಅವು ತಿನ್ನುವ ಆಹಾರದ ಬಗ್ಗೆ ಸಂಪೂರ್ಣ ತಿಳುವಳಿಕೆ ಹೊಂದಿರಬೇಕು ಎಂದು ಹೇಳಿದ್ದಾರೆ. ಇದಲ್ಲದೆ, ಈ ಕೆಲಸವನ್ನು ಪಡೆಯುವವರು ತಮ್ಮ ಜೀವಕ್ಕಿಂತ ಹೆಚ್ಚಾಗಿ ನಾಯಿಗಳಿಗೆ ಆದ್ಯತೆ ನೀಡಬೇಕು ಎಂದು ರೂಲ್ಸ್‌ ಹಾಕಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.