ನವದೆಹಲಿ: ಮದುವೆ ಸೀಸನ್‍ನಲ್ಲಿ ಫನ್ನಿ ಫನ್ನಿ ವಿಡಿಯೋಗಳು ಇಂಟರ್ನೆಟ್‍ನಲ್ಲಿ ಹರಿದಾಡುತ್ತವೆ. ಮದುವೆಯ ವಿವಿಧ ರೀತಿಯ ವಿಡಿಯೋಗಳು ನೋಡುಗರ ಮೊಗದಲ್ಲಿ ನಗು ತರಿಸುತ್ತದೆ. ಪ್ರಪಂಚದಲ್ಲಿ ಚಿತ್ರ- ವಿಚಿತ್ರವಾಗಿ ಮದುವೆಯಾದವರನ್ನು ನೀವು ನೋಡಿರಬೇಕು. ಆದರೆ ಇಲ್ಲೊಂದು ಜೋಡಿ ಚಲಿಸುತ್ತಿರುವ ರೈಲಿನಲ್ಲಿಯೇ ಮದುವೆಯಾಗಿ ಗಮನ ಸೆಳೆಯುತ್ತಿದೆ.


COMMERCIAL BREAK
SCROLL TO CONTINUE READING

ಹೌದು, ಚಲಿಸುತ್ತಿದ್ದ ರೈಲಿನಲ್ಲಿಯೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ಜೋಡಿ ಚಲಿಸುವ ರೈಲಿನಲ್ಲಿಯೇ ಮದುವೆಯಾಗಲು ನಿರ್ಧರಿಸಿತ್ತಂತೆ. ಅದೇ ರೀತಿ ತಮ್ಮ ಇಷ್ಟದಂತೆ ಮದುವೆಯಾಗುವ ಮೂಲಕ ಗಮನ ಸೆಳೆದಿದೆ.


ಇದನ್ನೂ ಓದಿ: ಕೇರಳದಲ್ಲಿ ಕೋರೋನಾ ಸಬ್ ವೇರಿಯಂಟ್ JN.1 ಪತ್ತೆ ಖಚಿತ, ಹೆಚ್ಚಾಗಲಿದೆಯಾ ಟೆನ್ಷನ್?


ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಈ ಜೋಡಿ ಸಹಪ್ರಯಾಣಿಕರ ಸಮ್ಮುಖದಲ್ಲಿ ಮದುವೆಯಾಗಿದೆ. ಪ್ರಯಾಣಿಕರ ಮುಂದೆಯೇ ಯುವಕ ಯುವತಿಗೆ ತಾಳಿ ಕಟ್ಟಿದ್ದಾನೆ. ಬಳಿಕ ಜೋಡಿ ಪರಸ್ಪರ ಹಾರ ಬದಲಾಯಿಸಿಕೊಂಡು ಸತಿಪತಿಗಳಾಗಿದ್ದಾರೆ. ಈ ವೇಳೆ ಯುವತಿ ಯುವಕನನ್ನು ತಬ್ಬಿಕೊಂಡು ಬಳಿಕ ಆತನ ಕಾಲು ಮುಟ್ಟಿ ನಮಸ್ಕರಿಸಿದ್ದಾಳೆ. ಈ ವೇಳೆ ನೆರೆದಿದ್ದ ಜನರು ಸಹ ದಂಪತಿಗೆ ಶುಭ ಹಾರೈಸಿದ್ದಾರೆ.


 

 

 

 

 



ಈ ವಿಶಿಷ್ಟವಾದ ಮದುವೆಗೆ ನೂರಾರು ಪ್ರಯಾಣಿಕರು ಸಾಕ್ಷಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ‘ಚಲಿಸುವ ರೈಲಿನಲ್ಲಿ ಮದುವೆ, ವಾವ್.. ವಾವ್…” ಎಂಬ ಕ್ಯಾಪ್ಶನ್ ನೀಡಲಾಗಿದೆ.


ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಬಿಜೆಪಿ ಶಾಸಕನಿಂದ ಅತ್ಯಾಚಾರ, 25 ವರ್ಷ ಜೈಲು ಶಿಕ್ಷೆ..!


ಈ ವಿಡಿಯೋ ನೋಡಿದ ಅನೇಕರು ‘ಹೀಗೂ ಮದುವೆಯಾಗಬಹುದಾ..?’ ಅಂತಾ ಕಾಮೆಂಟ್ ಮಾಡಿದ್ದಾರೆ. ವಿಡಿಯೋ ನೋಡಿದ ಬಹುತೇಕರು ನವದಂಪತಿಗೆ ಶುಭ ಹಾರೈಸಿದ್ದಾರೆ. ಅದೇ ರೀತಿ ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಈ ಜೋಡಿ ರೈಲಿನಲ್ಲೇ ಏಕೆ ಮದುವೆಯಾಯ್ತು ಅನ್ನೋದರ ಬಗ್ಗೆ ಅನೇಕರು ತಲೆಕೆಡಿಸಿಕೊಂಡಿದ್ದಾರೆ.


https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T