ಕಾರುಗಳ ನಡುವೆ ಭೀಕರ ಅಪಘಾತ: ತಲೆಗೆ ಗಂಭೀರ ಪೆಟ್ಟುಬಿದ್ದು MLC ನಿಧನ

PDF MLC Shaik Sabji Death: ಉಂಡಿ ಮಂಡಲದ ಚೆರುಕುವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಉಪಾಧ್ಯಾಯ ಕ್ಷೇತ್ರಗಳ ಪಿಡಿಎಫ್ ಎಂಎಲ್ಸಿ ಶೇಖ್ ಸಾಬ್ಜಿ ನಿಧನರಾಗಿದ್ದಾರೆ.

Written by - Bhavishya Shetty | Last Updated : Dec 15, 2023, 05:33 PM IST
    • ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತ
    • ಎಂಎಲ್ ಸಿ ಶೇಖ್ ಸಾಬ್ಜಿ ಮೃತ
    • ಏಲೂರಿನಿಂದ ಭೀಮಾವರಂಗೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತ
ಕಾರುಗಳ ನಡುವೆ ಭೀಕರ ಅಪಘಾತ: ತಲೆಗೆ ಗಂಭೀರ ಪೆಟ್ಟುಬಿದ್ದು MLC ನಿಧನ title=
MLC Sheikh Sabji death

PDF MLC Shaik Sabji Death: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎಂಎಲ್ ಸಿ ಶೇಖ್ ಸಾಬ್ಜಿ ಮೃತಪಟ್ಟಿದ್ದಾರೆ. ಉಂಡಿ ಮಂಡಲದ ಚೆರುಕುವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಉಪಾಧ್ಯಾಯ ಕ್ಷೇತ್ರಗಳ ಪಿಡಿಎಫ್ ಎಂಎಲ್ಸಿ ಶೇಖ್ ಸಾಬ್ಜಿ ನಿಧನರಾಗಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿ ಯಾರು ಗೊತ್ತಾ?

ಇನ್ನು ಘಟನೆಯಲ್ಲಿ ಎಂಎಲ್‌’ಸಿ ಕಾರು ಚಾಲಕ, ಗನ್‌ ಮ್ಯಾನ್ ಮತ್ತು ಪಿಎಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗನವಾಡಿ ನೌಕರರ ಮುಷ್ಕರದ ಅಂಗವಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂಎಲ್‌’ಸಿ ಸಾಬ್ಜಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಏಲೂರಿನಿಂದ ಭೀಮಾವರಂಗೆ ತೆರಳುತ್ತಿದ್ದ ವೇಳೆ ರಸ್ತೆ ಮಧ್ಯೆ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: Video: ಸೌತ್ ಆಫ್ರಿಕಾ ಬ್ಯಾಟರ್ ಔಟಾಗಿದ್ದರೂ ನಾಟ್ ಔಟ್ ಎಂದ ಅಂಪೈರ್: ಭಾರತಕ್ಕೆ ವಂಚನೆ!

ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಎಂಎಲ್‌ಸಿ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿಗಿದ್ದು, ಅಪಘಾತದ ವೇಳೆ ಎಂಎಲ್‌ಸಿ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ಎದೆ ಹಾಗೂ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿರುವುದಾಗಿ ಮೇಲ್ನೋಟಕ್ಕೆ ಗೋಚರಿಸುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News