cow listening music: ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಕೊಳಲಿನ ರಾಗಕ್ಕೆ ಮನುಷ್ಯರು ಮಾತ್ರವಲ್ಲದೆ ಗೋವುಗಳು ತಲೆಯಾಡಿಸುತ್ತಾ ಕುಣಿಯುತ್ತಿದ್ದವು ಎಂಬುದನ್ನು ಪುರಾಣಗಳಲ್ಲಿ ನಾವು ಓದಿರುತ್ತೇವೆ. ಪ್ರಾಣಿಗಳಿಗೆ ಅದರಲ್ಲೂ ಗೋವುಗಳಿಗೆ ಸಂಗೀತವೆಂದರೆ ಪಂಚಪ್ರಾಣ. ಕೆಲವೊಂದು ಭಾಗಗಳಲ್ಲಿ ಇಂದಿಗೂ ದನ ಸಾಕಾಣಿಕೆ ಮಾಡುವ ಪ್ರದೇಶದಲ್ಲಿ ರೇಡಿಯೋವನ್ನು ಅಳವಡಿಸಲಾಗುತ್ತದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದೇವರೇ..! ಇವ ಎಂಥಾ ಹುಡುಗ.. ಕಡಿದ ಹಾವಿನ ಕುತ್ತಿಗೆಯನ್ನೇ ಕಚ್ಚಿ ಕೊಂದ


ನಿಮಗೆ ಇಂದು ವಿಡಿಯೋವೊಂದನ್ನು ತೋರಿಸಲಿದ್ದು, ಅದರಲ್ಲಿ ವಿದ್ವಾನ್ ಒಬ್ಬರ ಹಾಡಿಗೆ ಕೊಟ್ಟಿಗೆಯಲ್ಲಿರುವ ಗೋವು ತಲೆಯಾಡಿಸುತ್ತಾ, ನಿಂತಲ್ಲೇ ಪುಟ್ಟ ಪುಟ್ಟದಾಗಿ ಹೆಜ್ಜೆಯನ್ನಿಡುತ್ತಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.


ಕೇರಳದ ಶ್ರೀಗುರುಚರಣಗಳ ಸಮ್ಮುಖದಲ್ಲಿ ನಡೆದ ಸಂಗೀತ ಸಭೆಯಲ್ಲಿ ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಅವರ ಕಚೇರಿಯನ್ನು ಕೊಟ್ಟಿಗೆಯಲ್ಲಿದ್ದ ಗೋವು ಆಲಿಸುತ್ತಿರುವ ಪರಿಯನ್ನು ವಿಡಿಯೋದಲ್ಲಿ ಕಾಣಬಹುದು. ಗೋವನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಆರಾಧಿಸಲಾಗುತ್ತದೆ.


ಇದನ್ನೂ ಓದಿ: ಜ್ಯೂಸ್‌ನಲ್ಲಿ ಆಸಿಡ್‌ ಹಾಕಿ ಕುಡಿಸಿ ಲವರ್‌ ಕೊಂದ ಸುರ ಸುಂದರಿ..!


ಇನ್ನು ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಅವರ ಹಾಡುಗಳನ್ನು ಎಂಥವರೂ ಕೇಳಿದರೂ ಸಹ ಕರಗಿ ಹೋಗುವುದು ಖಂಡಿತ. ಮನಸ್ಸಿಗೆ ಮುದ ನೀಡುವ ಇವರ ಹಾಡಿಗೆ ಅದೆಷ್ಟೋ ಮಂದಿ ಅಭಿಮಾನಿಗಳಿದ್ದಾರೆ. ರಾಗದ ಗುಣಲಕ್ಷಣಗಳನ್ನು ಅದರ ಅಧಿಕೃತ ಸ್ವರೂಪವನ್ನು ತಿಳಿಸುವ ಅವರ ಸಾಮರ್ಥ್ಯವು ನೆರೆದಿರುವವರನ್ನು ಮಂತ್ರಮುಗ್ಧಗೊಳಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ