Viral marriage profile : ವಿವಾಹಿತ ಪತಿಯೊಂದಿಗೆ ಜಗಳವಾಡಿ ವಿಚ್ಛೇದನ ಪಡೆದು, ಇದೀಗ ಮಹಿಳೆ ಎರಡನೇ ಮದುವೆಯಾಗಲು ರೆಡಿಯಾಗಿರುವ ಈ ಮಹಿಳೆ ಆನ್‌ಲೈನ್‌ನಲ್ಲಿ ವರ ಬೇಕೆಂದು ಜಾಹೀರಾತು ನೀಡಿದ್ದಾಳೆ. ಇದರಲ್ಲಿ ಆಕೆಯ ನಿರೀಕ್ಷಿತ ವರ ಸಾಫ್ಟ್‌ವೇರ್ ಇಂಜಿನಿಯರ್, MBA, MS ಓದಿರಬೇಕು, ಕನಿಷ್ಠ ರೂ. 30 ಲಕ್ಷ ವಾರ್ಷಿಕ ಸಂಬಳ ಪಡೆಯುವನಾಗಿರಬೇಕು.. ಭಾರತ, ಯುಎಸ್ ಅಥವಾ ಯುರೋಪ್ನಲ್ಲಿ ಕೆಲಸ ಮಾಡಲು ರೆಡಿಯಾಗಿರಬೇಕು ಅಂತ ಡಿಟೈಲ್ಸ್‌ ನೀಡಿದ್ದಾಳೆ.. ಇದನ್ನ ನೋಡಿ ನೆಟ್ಟಿಗರು ಒಂದು ಕ್ಷಣ ದಂಗಾಗಿದ್ದಾರೆ.. ಅಲ್ಲದೆ ಇನ್ನೂ ಹಲವಾರು ಬೇಡಿಕೆ ಇಟ್ಟಿದ್ದಾಳೆ.. 


COMMERCIAL BREAK
SCROLL TO CONTINUE READING

ಭಾರತೀಯ ವಿವಾಹ ಪದ್ಧತಿಯಲ್ಲಿ ಮಿಶ್ರ ಎರಡು ಬಗೆಯ ಜನರಿದ್ದಾರೆ.. ಒಂದೆಡೆ ವರದಕ್ಷಿಣೆ ಬೇಡ ಮಗಳನ್ನು ಕೋಡಿ ಎನ್ನುವ ವರ ಇನ್ನೊಂದೆಡೆ, ತಮ್ಮ ಮಗಳನ್ನು ಕೊಡಲು ವರನಿಗೆ ಲಕ್ಷಗಟ್ಟಲೆ ಸಂಬಳ, ಕೋಟಿಗಟ್ಟಲೆ ಆಸ್ತಿ ಇರಲೇ ಬೇಕು ಎಂದು ಬೇಡುವ ವಧುವಿನ ಪೋಷಕರು.. ಈ ರೀತಿಯ ವಿವಿಧ ಜನರ ಬಗ್ಗೆ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ.


ಇದನ್ನೂ ಓದಿ:Daily GK Quiz: ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ?


ಈ ಪೈಕಿ ಇದೀಗ ಮಹಿಳೆಯೊಬ್ಬರು ತನ್ನ ಎರಡನೇ ಮದುವೆಗೆ ತಯಾರಿ ನಡೆಸಿದ್ದು, ವರ ಬೇಕು ಎಂದು ಪೋಸ್ಟ್ ಮಾಡಿದ್ದಾಳೆ.. ಅದರಲ್ಲಿ ಷರತ್ತುಗಳನ್ನು ನೀಡಿದ್ದಾಳೆ. ತನ್ನ ಭಾವಿ ಪತಿಗೆ ವರ್ಷಕ್ಕೆ 30 ಲಕ್ಷ ರೂಪಾಯಿ ಸಂಬಳ ಸಿಗಬೇಕು. 3 ಬಿಎಚ್‌ಕೆ ಮನೆ ಬೇಕು ಎಂದು ಪೋಸ್ಟ್‌ನಲ್ಲಿ ವಿವರಣೆ ನೀಡಿದ್ದಾಳೆ... ಸದ್ಯ ಈ ಪೋಸ್ಟ್ ನೆಟ್‌ನಲ್ಲಿ ಹರಿದಾಡುತ್ತಿದೆ.


ವರ ಬೇಕು ಎಂದು ಪೋಸ್ಟ್ ಮಾಡಿದ ಮಹಿಳೆ ಬಿಎಡ್ ಪದವಿ ಓದಿದ್ದಾರೆ. ವರ್ಷಕ್ಕೆ 1.3 ಲಕ್ಷ ಗಳಿಸುತ್ತಿದ್ದಾಳೆ. ಮೇಲಾಗಿ ಈ ಮೊದಲು ಮದುವೆಯಾಗಿ, ಪತಿಯೊಂದಿಗೆ ಜಗಳವಾಡಿ ವಿಚ್ಛೇದನ ಪಡೆದಿದಿದ್ದಾಳೆ. ಆದರೆ ಇದೀಗ ಮಹಿಳೆ ಎರಡನೇ ಮದುವೆಯಾಗಲು ಯತ್ನಿಸುತ್ತಿದ್ದಾಳೆ. ಅದಕ್ಕಾಗಿ ಆನ್‌ಲೈನ್‌ನಲ್ಲಿ ವರ ಬೇಕೆಂದು ಜಾಹೀರಾತು ನೀಡಿದ್ದಾಳೆ. 


ಇದನ್ನೂ ಓದಿ:ನಾಳೆ ರಾಜ್ಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ..! ಸೋಮವಾರವೂ ರಜೆ, ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು..?


ಅಷ್ಟೇ ಅಲ್ಲ, ವರನ ವೇತನ ರೂ. 30 ಲಕ್ಷ ಸಾಲದು.. ತಂದೆ-ತಾಯಿ ಬೇಡ.. ತಂದೆ-ತಾಯಿ ಇದ್ದರೆ ಮದುವೆಯಾದ ಮೇಲೆ ಅವರ ಜೊತೆ ಇರಬಾರದಂತೆ. ಸ್ವಂತ 3 ಬಿಎಚ್‌ಕೆ ಮನೆ ಇರಬೇಕು. ಮನೆಕೆಲಸಗಳನ್ನು ಮಾಡಲು ಸೇವಕಿ ಯಾವಾಗಲೂ ಲಭ್ಯವಿರಬೇಕು. ಅಂತಹ ಅರ್ಹತೆ ಇರುವ ವರ ಇದ್ದರೆ ಸಂಪರ್ಕಿಸಿ ಅಂತ ಮಹಿಳೆ ತಿಳಿಸಿದ್ದಾರೆ.. ನೋಡಿ ನೀವು ಟ್ರೈ ಮಾಡ್ತೀರಾ ಒಮ್ಮೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.