ಮಧ್ಯಪ್ರದೇಶ: ಏಕಕಾಲದಲ್ಲಿಯೇ ಮೂವರು ಮಹಿಳೆಯರನ್ನು ವ್ಯಕ್ತಿಯೊಬ್ಬ ಬುಡಕಟ್ಟು ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾನೆ. ಈ ಮದುವೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್‌ನ ಮೋರಿ ಫಾಲಿಯಾ ಗ್ರಾಮದಲ್ಲಿ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Viral Video: ಚಾಲಕನಿಲ್ಲದ ಕಾರನ್ನು ನಿಲ್ಲಿಸಲು ಕಿಟಕಿಯೊಳಗೆ ಹಾರಿದ ಯುವಕ!


ಮದುವೆಯಾದ ವ್ಯಕ್ತಿಯ ಹೆಸರು ಮೌರ್ಯ. ಈತ ಭೋಪಾಲ್‍ನಿಂದ ಸುಮಾರು 400ಕಿ.ಮೀ ದೂರದಲ್ಲಿರುವ ನಾನ್‌ಪುರ ಗ್ರಾಮದ ಮಾಜಿ ಸರ್‌ಪಂಚ್‌ ಆಗಿದ್ದ. ಒಂದೇ ಮಂಟಪದಲ್ಲಿ ನಾನಾಬಾಯಿ, ಮೇಳ ಮತ್ತು ಸಕ್ರಿ ಎಂಬ ಮೂವರು ಮಹಿಳೆಯರನ್ನು ವರಿಸಿದ್ದಾನೆ.  


2003ರಲ್ಲಿ ನಾನಾಬಾಯಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೌರ್ಯ ಬಳಿಕ ಒಟ್ಟಿಗೆ ವಾಸವಾಗಿದ್ದರು. ಇವರ ಜೊತೆ ಮತ್ತಿಬ್ಬರು ಸಹ ಕಳೆದ 15 ವರ್ಷದಿಂದ ವಾಸವಾಗಿದ್ದರಂತೆ. ಇದೀಗ ಮೌರ್ಯ ಮೂವರನ್ನು ಸಹ ಬುಡಕಟ್ಟು ಪದ್ಧತಿಯ ಪ್ರಕಾರ ಏಕಕಾಲದಲ್ಲಿ ವಿವಾಹವಾಗಿದ್ದಾನೆ. 


ಈ ಮದುವೆ ಸಮಾರಂಭದಲ್ಲಿ ಮೂವರು ಮಹಿಳೆಯರ ಆರು ಮಕ್ಕಳು ಸಹ ಪಾಲ್ಗೊಂಡಿದ್ದರು. ಸದ್ಯ ಮದುವೆಯ ಫೋಟೋ ಮತ್ತು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಬುಡಕಟ್ಟು ಜನಾಂಗದ ಪದ್ಧತಿಯ ಪ್ರಕಾರ ವಿಜೃಂಭಣೆಯಿಂದ ವಿವಾಹ ಕಾರ್ಯಕ್ರಮ ನಡೆದಿದೆ. 


ಇದನ್ನು ಓದಿ: Knowledge Story: OK ಎಂಬುದರ ಪೂರ್ಣ ರೂಪ ನಿಮಗೆ ತಿಳಿದಿದೆಯೇ? ಆಸಕ್ತಿಕರ ಮಾಹಿತಿ ಇಲ್ಲಿದೆ


ಇನ್ನು ಮದುವೆಯ ಬಗ್ಗೆ ಮೌರ್ಯ ಮಾತನಾಡಿದ್ದು, "ಈ ಸಂಬಂಧಗಳು ಪ್ರಾರಂಭವಾದಾಗ ನನ್ನ ಆರ್ಥಿಕ ಸ್ಥಿತಿಗತಿ. ಹೀಗಾಗಿ ನಾನು ಸಂಬಂಧದಿಂದ ಮಕ್ಕಳನ್ನು ಪಡೆದರೂ ಸಹ ಮದುವೆಯಾಗಲು ಸಾಧ್ಯವಾಗಲಿಲ್ಲ. ಈಗ ನಾವು ಮದುವೆ ಆಗಿದ್ದೇವೆ" ಎಂದು ಹೇಳಿದ್ದಾನೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.