ಸಾಗರದಾಚೆಗೆ ʼನಮ್‌ ರೇಡಿಯೋʼ ಹವಾ: ಕನ್ನಡ ಕೇಳುಗರ ಮನಮುಟ್ಟಿದ ಅಂತರ್ಜಾಲ ರೇಡಿಯೋ

ಅಂತರ್ಜಾಲ ರೇಡಿಯೋಗಳು ಎಂಬ ವಿಚಾರ ಸದ್ಯ ಪ್ರಚಲಿತದಲ್ಲಿದ್ದು, ಇದರ ವಿಶೇಷವೆಂದರೆ ಯಾರೂ ಬೇಕಾದರೂ ಲಿಂಕ್‌ಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಕೇಳಬಹುದು.   

Written by - Bhavishya Shetty | Last Updated : May 2, 2022, 12:41 PM IST
  • ವಿದೇಶದಲ್ಲಿರುವ ಕನ್ನಡಿಗರಿಗಾಗಿ ಎಫ್‌ಎಂ ರೇಡಿಯೋ
  • ಬೆಂಗಳೂರು ಮೂಲದವರಿಂದ ನಮ್‌ ರೇಡಿಯೋ ಪ್ರಾರಂಭ
  • ಎನ್‌ಆರ್‌ಐಗಳಿಗಾಗಿ ನಿರ್ಮಾಣಗೊಂಡ ಅಂತರ್ಜಾಲ ರೇಡಿಯೋ
ಸಾಗರದಾಚೆಗೆ ʼನಮ್‌ ರೇಡಿಯೋʼ ಹವಾ: ಕನ್ನಡ ಕೇಳುಗರ ಮನಮುಟ್ಟಿದ ಅಂತರ್ಜಾಲ ರೇಡಿಯೋ title=
Namm Radio

ಎಫ್‌ಎಂ ರೇಡಿಯೋಗಳೆಂದರೆ ಅನೇಕರಿಗೆ ಪಂಚಪ್ರಾಣ. ಅದರಲ್ಲಿ ಬರುವ ಹಾಡುಗಳನ್ನು ಕೇಳಲು ಅನೇಕರು ರೇಡಿಯೋ ಬಳಕೆ ಮಾಡುತ್ತಾರೆ. ಇನ್ನು ದೇಶದಲ್ಲಿರುವ ಜನರು ಆಯಾಯ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ರೇಡಿಯೋ ವಾಹಿನಿಗಳನ್ನು ಕೇಳಬಹುದು. ಆದರೆ ವಿದೇಶದಲ್ಲಿರುವ ಜನರು ತಮ್ಮ ನೆಚ್ಚಿನ ಪ್ರದೇಶದ ರೆಡಿಯೋ ವಾಹಿನಿಯನ್ನು ಕೇಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಆ ಸಮಸ್ಯೆಗೆ ಪರಿಹಾರವೊಂದು ಸಿಕ್ಕಿದೆ. 

ಇದನ್ನು ಓದಿ: Akshaya Tritiya 2022: ಈ ನಾಲ್ಕು ರಾಶಿಗಳ ಜನರ ಮೇಲಿರಲಿದೆ ದೇವಿ ಲಕ್ಷ್ಮಿಯ ವಿಶೇಷ ಕೃಪೆ

ಅನೇಕ ಎಫ್‌ಎಂ ವಾಹಿನಿಗಳು ಕರ್ನಾಟಕದ ಮೂಲೆ ಮೂಲೆಯಲ್ಲಿ ಪ್ರಚಲಿತದಲ್ಲಿದೆ. ಆದರೆ ಅವುಗಳು ಕೇವಲ ಅಲ್ಲಿನ ಜನರಿಗಷ್ಟೇ ಕೇಳಲು ಸೀಮಿತವಾಗಿದೆ. ಆದರೆ ಅಂತರ್ಜಾಲ ರೇಡಿಯೋಗಳು ಎಂಬ ವಿಚಾರ ಸದ್ಯ ಪ್ರಚಲಿತದಲ್ಲಿದ್ದು, ಇದರ ವಿಶೇಷವೆಂದರೆ ಯಾರೂ ಬೇಕಾದರೂ ಲಿಂಕ್‌ಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಕೇಳಬಹುದು. ಇಲ್ಲಿ ಬರುವ ಅನೇಕ ಕಾರ್ಯಕ್ರಮಗಳು ರೆಕಾರ್ಡ್ ಆಗಿ ಕೇಳುಗರಿಗೆ ಲಭ್ಯವಾಗುತ್ತದೆ. 

ಇನ್ನು ಬ್ರಿಟನ್‌ನಲ್ಲಿ ಸುಮಾರು ಮೂರರಿಂದ ನಾಲ್ಕು ಅಂತರ್ಜಾಲ ರೇಡಿಯೋಗಳು ಪ್ರಾರಂಭವಾಗಿದೆ. ರೇಡಿಯೋ ಗಿರ್ಮಿಟ್ ಕೆಲವು ವರ್ಷಗಳಿಂದ ಪ್ರಚಲಿತವಿದೆ. ಅದರ ಜೊತೆಗೆ ರಂಗೋಲಿ ರೇಡಿಯೋ, ಬೊಲ್ಟನ್ ಹಿಂದೂ ಕಮ್ಯೂನಿಟಿ ರೇಡಿಯೋ ಹೀಗೆ ಹಲವಾರು ಅಂತರ್ಜಾಲ ರೇಡಿಯೋಗಳು ಸಹ ಇಂದು ಇಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.

2016ರಲ್ಲಿ ವಿದೇಶದಲ್ಲಿರುವ ರೇಡಿಯೋ ಕೇಳುಗರಿಗಿರುವ ಸಮಸ್ಯೆಗಳನ್ನು ಪರಿಗಣಿಸಿ, ʼನಮ್‌ ರೇಡಿಯೋʼ ಎಂಬ ಅಂತರ್ಜಾಲ ರೇಡಿಯೋವನ್ನು ಹುಟ್ಟು ಹಾಕಲಾಯಿತು. ಇದನ್ನು ಪ್ರಾರಂಭಿಸಿದವರು ಬೆಂಗಳೂರು ಮೂಲದ ಅವನಿಧರ್‌ ಮತ್ತು ಪೂಜಾ ಎಂಬವರು. 

ಏನಿದು ʼನಮ್‌ ರೇಡಿಯೋʼ:
ನಮ್‌ ರೇಡಿಯೋ ಎಂದರೆ, ಆಪ್ ಆಧಾರಿತ ಅಂತರ್ಜಾಲದ ಮೂಲಕ ಪ್ರಸಾರವಾಗುವ ರೇಡಿಯೋ. ಇದರಲ್ಲಿ ಕನ್ನಡ ಹಾಡುಗಳು, ಭಕ್ತಿಗೀತೆ, ಭಾವಗೀತೆ, ಮಾಹಿತಿಗಳು, ಸಂಸ್ಕೃತಿ ಹೀಗೆ ಹಲವಾರು ವಿಚಾರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ. ಈ ರೇಡಿಯೋ ಕೇಳಬೇಕಾದರೆ ಗೂಗಲ್ ಸ್ಟೋರ್ ಅಥವಾ ಐಫೋನ್ ಸ್ಟೋರ್ ಮೂಲಕ ʼನಮ್ ರೇಡಿಯೋʼ ಎಂಬ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಮೂಲಕ ನೀವು ರೇಡಿಯೋ ಬಳಕೆ ಮಾಡಬಹುದು. 

ಇದನ್ನು ಓದಿ: ದಾರಿಯಲ್ಲಿ ಸಿಗುವ ಹಣ ಶುಭವೋ/ಅಶುಭವೋ?

ಹೊರ ದೇಶಗಳಲ್ಲಿ ನೆಲೆಸಿರುವ ಅನೇಕ ಕನ್ನಡಿಗರಿಗೆ ನಮ್‌ ರೇಡಿಯೋ ಮೂಲಕ ಕನ್ನಡ ಕಾರ್ಯಕ್ರಮಗಳನ್ನು ಕೇಳುವ ಅವಕಾಶವನ್ನು ಹೇಳುವ ಅವಕಾಶ ಲಭಿಸಿದೆ ಎನ್ನಬಹುದು. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News