Amazing Snake Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಆಶ್ಚರ್ಯಕರವಾಗಿದ್ದರೆ, ಇನ್ನೂ ಕೆಲವು ಭಯಾನಕವಾಗಿರುತ್ತವೆ. ಇತ್ತೀಚೆಗೆ ಹಾವಿನ ವಿಡಿಯೋವೊಂದು ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಹಾವುಗಳು ವಾಸ್ತವವಾಗಿ ತುಂಬಾ ಅಪಾಯಕಾರಿ ಪ್ರಾಣಿಗಳು. ಹೆಸರು ಕೇಳಿದೊಡನೆಯೇ ಅನೇಕರು ಭಯದಿಂದ ಓಡಿಹೋಗುತ್ತಾರೆ. ದೊಡ್ಡ ಹಾವನ್ನು ಹತ್ತಿರದಿಂದ ಕಂಡರೆ ಕೆಲವರು ಜೀವವೇ ಹೋದ ಹಾಗೇ ಆಡುತ್ತಾರೆ..  ಏಕೆಂದರೆ ಹಾವು ಸಾಧು ಪ್ರಾಣಿಯಲ್ಲ.. 


ಇತ್ತೀಚೆಗೆ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಒಂದು ಹಾವಿಗೆ ಒಬ್ಬ ವ್ಯಕ್ತಿ ತನ್ನ ಕೈಯಿಂದ ನೀರನ್ನು ಕುಡಿಸುತ್ತಿದ್ದಾನೆ... ಈ ವಿಡಿಯೋ ನೋಡಿದ್ರೆ.. ನಿಮಗೂ ಭಯ ಆಗುತ್ತೆ.. ಜೊತೆಗೆ ಹೃದಯ ಬಡಿತವೂ ಹೆಚ್ಚಾಗುತ್ತದೆ. ಈ ವೈರಲ್ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ..


ಇದನ್ನೂ ಓದಿ-ಈ ಸ್ಟಾರ್‌ ಹೀರೋಯಿನ್‌ ಅನ್ನು ಹುಚ್ಚರಂತೆ ಪ್ರೀತಿಸಿದ್ದರಂತೆ ಸೂಪರ್‌ಸ್ಟಾರ್‌ ರಜನಿಕಾಂತ್‌! ಮದುವೆ ಪ್ರಸ್ತಾಪಕ್ಕೆ ಹೋದಾಗ ಆಗಿದ್ದೇನು ಗೊತ್ತಾ?


 ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತನ್ನ ಅಂಗೈಯಲ್ಲಿ ನೀರನ್ನು ಸುರಿದು ಹಾವಿಗೆ ಕುಡಿಸುತ್ತಿರುವುದನ್ನು ನಾವು ಕಾಣಬಹದು.. ಸದ್ಯ ಇದಕ್ಕೆ ನೂರಾರು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಯಾರು ಇಂತಹ ಸಾಹಸ ಮಾಡಲು ಹೋಗುತ್ತಾರೆ ಎಂದು ನೆಟ್ಟಿಗರು ರಿಯಾಕ್ಟ್‌ ಮಾಡುತ್ತಿದ್ದಾರೆ.  


ಇದನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಇಷ್ಟಪಡುತ್ತಿದ್ದಾರೆ. 


ಇದಲ್ಲದೆ, ವಿವಿಧ ರೀತಿಯಲ್ಲಿ ಕಾಮೆಂಟ್ಗಳನ್ನು ಮಾಡಲಾಗುತ್ತಿದ್ದು, ಹಾವುಗಳು ಯಾವತ್ತೂ ಮನುಷ್ಯರ ಸ್ನೇಹಿತರಾಗುವುದಿಲ್ಲ.. ಇದು ಯಾವಾಗಲೂ ವಿಷಕಾರಿ ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾನೆ.. ಮತ್ತೊಬ್ಬ ಬಳಕೆದಾರರು ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೊವನ್ನು ಜೂನ್ 2020 ರಲ್ಲಿ ಹಂಚಿಕೊಳ್ಳಲಾಗಿದ್ದರೂ, ಅದು ಮತ್ತೆ ವೈರಲ್ ಆಗುತ್ತಿದೆ.


 


ಈ ಸ್ಟಾರ್‌ ಹೀರೋಯಿನ್‌ ಅನ್ನು ಹುಚ್ಚರಂತೆ ಪ್ರೀತಿಸಿದ್ದರಂತೆ ಸೂಪರ್‌ಸ್ಟಾರ್‌ ರಜನಿಕಾಂತ್‌! ಮದುವೆ ಪ್ರಸ್ತಾಪಕ್ಕೆ ಹೋದಾಗ ಆಗಿದ್ದೇನು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.