Alvar Fort: ಭಾರತದಲ್ಲಿ ಇಂತಹ ಹಲವು ಪುರಾತನ ಕೋಟೆಗಳಿವೆ, ಅವುಗಳು ಅತ್ಯಂತ ವಿಶೇಷವಾದ ಮತ್ತು ತಮ್ಮಲ್ಲಿಯೇ ನಿಗೂಢತೆಯಿಂದ ಕೂಡಿವೆ. ಅಂತಹ ಒಂದು ಕೋಟೆಯು ಅರಾವಳಿ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಈ ಕೋಟೆ ಯಾವುದು ಎನ್ನುವುದರ ಸಂಪೂರ್ಣ ಡಿಟೈಲ್ಸ್‌ ಈ ಸ್ಟೋರಿಯಲ್ಲಿದೆ. 


COMMERCIAL BREAK
SCROLL TO CONTINUE READING

ಈ ಕೋಟೆಯ ಗೋಡೆಯು ಹಚ್ಚ ಹಸಿರಿನ ಹೊಲಗಳ ಮೂಲಕ ಹಾದು ಹೋಗುವ 'ಆಳ್ವಾರ್ ಕೋಟೆ' ಸಂಪೂರ್ಣ ಬೆಟ್ಟದ ಮೇಲೆ ವ್ಯಾಪಿಸಿದೆ. ಈ ಕೋಟೆಯು ಎಷ್ಟು ಸುಂದರವಾಗಿ ಕಾಣುತ್ತದೆ ಎಂದರೆ ಇದನ್ನು ನೋಡಲು ದೂರದೂರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಕೋಟೆ ಪ್ರವೇಶಿಸಲು ಆ ಪ್ರದೇಶದ ಎಸ್ಪಿಯವರಿಂದ ಅನುಮತಿ ಪಡೆಯಬೇಕಾಗಿದ್ದ ಕಾಲವಿತ್ತು ಆದರೆ ಈಗ ಹಾಗಾಗುತ್ತಿಲ್ಲ. ಪ್ರವಾಸಿಗರು ಎಂಟ್ರಿ ಬಳಿ ಇರಿಸಲಾಗಿರುವ ರಿಜಿಸ್ಟರ್‌ನಲ್ಲಿ ತಮ್ಮ ಹೆಸರನ್ನು ಬರೆಯಬೇಕು. ಅದರ ನಂತರ ಅವರು ಈ ಭವ್ಯವಾದ ಕೋಟೆಯನ್ನು ಪ್ರವೇಶಿಸಬಹುದು.


ಇದನ್ನೂ ಓದಿDaily GK Quiz: ವಿಸ್ತೀರ್ಣದಲ್ಲಿ ಭಾರತದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು..?


ರಾಜಸ್ಥಾನದ ಅಲ್ವಾರ್‌ನಲ್ಲಿರುವ ಈ ಕೋಟೆಯನ್ನು 'ಬಾಲಾ ಕೋಟೆ' ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ಇದನ್ನು 'ಆಳ್ವಾರ್ ಕೋಟೆ' ಎಂದೂ ಕರೆಯುತ್ತಾರೆ. ನಾವು ಇಡೀ  ಆಳ್ವಾರ್  ಸ್ಟೋರಿಯ ಬಗ್ಗೆ ಕೇಳಿರುತ್ತಿವಿ, ಆದರೆ ಇಲ್ಲಿರುವ ಈ ಕೋಟೆಯು  ಅತ್ಯಂತ ಹಳೆಯ ಕಟ್ಟಡವಾಗಿದೆ. ಈ ಕೋಟೆಯ ನಿರ್ಮಾಣ ಕಾರ್ಯವನ್ನು ಕ್ರಿ.ಶ.1492 ರಲ್ಲಿ ಹಸನ್ ಖಾನ್ ಮೇವಾಟಿ ಪ್ರಾರಂಭಿಸಿದರು ಎಂದು ನಂಬಲಾಗಿದೆ. ಇದು ತನ್ನ ಭವ್ಯವಾದ ರಚನಾತ್ಮಕ ವಿನ್ಯಾಸಕ್ಕಾಗಿ ದೇಶದಾದ್ಯಂತ ಪ್ರಸಿದ್ಧವಾಗಿದೆ.  


ಈ ಕೋಟೆಯನ್ನು ಮೊಘಲರಿಂದ ಹಿಡಿದು ಮರಾಠರು ಮತ್ತು ಜಾಟರುಗಳವರೆಗೆ ಎಲ್ಲರೂ ಆಳಿದ್ದಾರೆ. ಕೋಟೆಯ ಗೋಡೆಗಳಲ್ಲಿ 446 ರಂಧ್ರಗಳಿದ್ದು, ಶತ್ರುಗಳ ಮೇಲೆ ಗುಂಡುಗಳನ್ನು ಹಾರಿಸಲು ವಿಶೇಷವಾಗಿ ಮಾಡಲಾಗಿದೆ. ಈ ರಂಧ್ರಗಳ ಮೂಲಕ 10 ಅಡಿಯ ಬಂದೂಕನ್ನು ಕೂಡ ಹಾರಿಸಬಹುದು. ಇದಲ್ಲದೇ ಶತ್ರುಗಳ ಮೇಲೆ ಕಣ್ಣಿಡಲು ಕೋಟೆಯಲ್ಲಿ 15 ದೊಡ್ಡ ಹಾಗೂ 51 ಚಿಕ್ಕ ಕೊತ್ತಲಗಳನ್ನು ನಿರ್ಮಿಸಲಾಗಿದೆ.


ಇದನ್ನೂ ಓದಿ: Viral Video: ಊಟದಲ್ಲಿ ಪನೀರ್ ಇಲ್ಲದ ಕಾರಣ ಮದುವೆ ಮನೆಯಲ್ಲಿ ಹೊಡೆದಾಟ!


ಅತ್ಯಂತ  ಅಚ್ಚರಿ ವಿಶೇಷವೆಂದರೆ ಇತಿಹಾಸದಲ್ಲಿ ಈ ಕೋಟೆಯ ಮೇಲೆ ಯುದ್ಧವೇ ನಡೆದಿಲ್ಲ. ಈ ಕಾರಣಕ್ಕಾಗಿ ಇದನ್ನು 'ಕುನ್ವಾರ ಕಿಲಾ' ಎಂದೂ ಕರೆಯುತ್ತಾರೆ. ಈ ಕೋಟೆಯು ಐದು ಕಿಲೋಮೀಟರ್ ಉದ್ದ ಮತ್ತು ಸುಮಾರು 1.5 ಕಿಲೋಮೀಟರ್ ಅಗಲವಿದೆ. ಕೋಟೆಯನ್ನು ಪ್ರವೇಶಿಸಲು ಜೈ ಪೋಲ್, ಸೂರಜ್ ಪೋಲ್, ಲಕ್ಷ್ಮಣ್ ಪೋಲ್, ಚಾಂದ್ ಪೋಲ್, ಕೃಷ್ಣ ಪೋಲ್ ಮತ್ತು ಅಂಧೇರಿ ಪೋಲ್ ಎಂಬ ಒಟ್ಟು ಆರು ಬಾಗಿಲುಗಳನ್ನು ನಿರ್ಮಿಸಲಾಗಿದೆ.  


ಮೊಘಲ್ ದೊರೆಗಳಾದ ಬಾಬರ್ ಮತ್ತು ಜಹಾಂಗೀರ್ ಕೂಡ ಈ ಕೋಟೆಯಲ್ಲಿ ತಂಗಿದ್ದರು ಎಂದು ಹೇಳಲಾಗುತ್ತದೆ. ಬಾಬರ್ ಇಲ್ಲಿ ಕೇವಲ ಒಂದು ರಾತ್ರಿ ಕಳೆದರು. ಕೋಟೆಯೊಳಗೆ ಜಹಾಂಗೀರ್ ತಂಗಿದ್ದ ಕೋಣೆಯನ್ನು ಇಂದು 'ಸಲೀಂ ಮಹಲ್' ಎಂದು ಕರೆಯಲಾಗುತ್ತದೆ. ಈ ಕೋಟೆಯೊಳಗೆ ಅಮೂಲ್ಯವಾದ ನಿಧಿ ಅಡಗಿದೆ ಎಂದು ಹೇಳಲಾಗುತ್ತದೆ. ಸಂಪತ್ತಿನ ದೇವರಾದ ಕುಬೇರನಿಗೆ ಈ ನಿಧಿ ಸೇರಿದೆ ಎಂದು ನಂಬಲಾಗಿದೆ, ಆದರೆ ಈ ನಿಧಿಯು ನಿಗೂಢವಾಗಿಯೇ ಉಳಿದಿದೆ ಏಕೆಂದರೆ ಇಲ್ಲಿಯವರೆಗೆ ಯಾರೂ ಅದನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.