Viral Video: ಊಟದಲ್ಲಿ ಪನೀರ್ ಇಲ್ಲದ ಕಾರಣ ಮದುವೆ ಮನೆಯಲ್ಲಿ ಹೊಡೆದಾಟ!

Marriage Fight Viral Video: ಈ ಮದುವೆ ಊಟದಲ್ಲಿ ಮಟರ್ ಪನೀರ್ ವಿಶೇಷವಾಗಿತ್ತು. ಮದುವೆಗೆ ಆಗಮಿಸಿದ ಬಂಧು-ಬಳಗದವರು ಊಟಕ್ಕೆ ಕುಳಿತಾಗ ಮಟರ್ ಪನೀರ್ ಬಡಿಸಲಾಗಿದೆ. ಆದರೆ ಮಟರ್ ಪನೀರ್‍ನಲ್ಲಿ ಒಂದೇ ಒಂದು ತುಂಡು ಪನೀರ್ ಕಂಡುಬಂದಿಲ್ಲ. ಇದು ಊಟಕ್ಕೆ ಕುಳಿತವರ ಕಣ್ಣು ಕೆಂಪಗಾಗಿಸಿದೆ. ಇದೇ ವಧು-ವರನ ಕಡೆಯವರ ಜಗಳಕ್ಕೆ ಕಾರಣವಾಗಿದೆ.

Written by - Puttaraj K Alur | Last Updated : Dec 20, 2023, 07:49 PM IST
  • ಊಟದಲ್ಲಿ ಪನೀರ್ ಇಲ್ಲದ ಕಾರಣ ಮದುವೆ ಮನೆಯಲ್ಲಿ ಹೊಡೆದಾಟ!
  • ಊಟದಲ್ಲಿ ಪನೀರ್ ಇಲ್ಲವೆಂದು ಹೊಡೆದಾಡಿಕೊಂಡ ವಧು-ವರನ ಕಡೆಯವರು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಊಟದಲ್ಲಿ ಪನೀರ್ ಇಲ್ಲದ ಕಾರಣ ಮದುವೆ ಮನೆಯಲ್ಲಿ ಹೊಡೆದಾಟ! title=
ಮದುವೆ ಮನೆಯಲ್ಲಿ ಹೊಡೆದಾಟ!

ನವದೆಹಲಿ: ಮದುವೆಯ ಅನೇಕ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಇಂಟರ್ನೆಟ್‍ನಲ್ಲಿ ಮದುವೆಯ ಹಲವಾರು ಫನ್ನಿ ಫನ್ನಿ ವಿಡಿಯೋಗಳನ್ನು ಕಂಡು ನೀವು ಸಹ ನಕ್ಕಿರುತ್ತೀರಿ. ಮದುವೆಯಲ್ಲಿ ವಧು-ವರರ ತಮಾಷೆಯ ಪ್ರಸಂಗಗಳು, ಬಂಧು-ಬಳಗ ಮತ್ತು ಸ್ನೇಹಿತರ ಅವಾಂತರಗಳು. ವರದಕ್ಷಿಣೆ, ಊಟದಲ್ಲಿ ಅದು ಇಲ್ಲ, ಇದು ಇಲ್ಲವೆಂದು ಜಗಳವಾಡುವುದು ಹೀಗೆ ಅನೇಕ ಮದುವೆಯ ವಿಡಿಯೋಗಳನ್ನು ನೀಡು ನೋಡಿರುತ್ತೀರಿ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಮದುವೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಊಟದಲ್ಲಿ ಪನೀರ್ ಇಲ್ಲವೆಂದು ವಧು-ವರನ ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ಸೌಂಡ್ ಮಾಡುತ್ತಿದೆ. ಅಂದಹಾಗೆ ಘಟನೆ ಹೇಗಾಯ್ತು ಅಂತೀರಾ..? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Viral Video: ಚಲಿಸುತ್ತಿರುವ ರೈಲಿನಲ್ಲಿಯೇ ಮದುವೆಯಾದ ಜೋಡಿ..!

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ವಧು-ವರನ ಕಡೆಯವರು ಹೊಡೆದಾಡುತ್ತಿರುವ ದೃಶ್ಯವನ್ನು ನೀವು ಕಾಣಬಹುದು.  @gharkekalesh ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘Kalesh b/w groom side and bride side people's during marriage over no pieces of paneer inside matar paneer’ ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ಅಂದಹಾಗೆ ಈ ಮದುವೆ ಊಟದಲ್ಲಿ ಮಟರ್ ಪನೀರ್ ವಿಶೇಷವಾಗಿತ್ತು. ಮದುವೆಗೆ ಆಗಮಿಸಿದ ಬಂಧು-ಬಳಗದವರು ಊಟಕ್ಕೆ ಕುಳಿತಾಗ ಮಟರ್ ಪನೀರ್ ಬಡಿಸಲಾಗಿದೆ. ಆದರೆ ಊಟ ಮಾಡುವವರಿಗೆ ನೀಡಿದ್ದ ಮಟರ್ ಪನೀರ್‍ನಲ್ಲಿ ಒಂದೇ ಒಂದು ತುಂಡು ಪನೀರ್ ಕಂಡುಬಂದಿಲ್ಲ. ಇದು ಊಟಕ್ಕೆ ಕುಳಿತವರ ಕಣ್ಣು ಕೆಂಪಗಾಗಿಸಿದೆ. ಇದೇ ವಧು-ವರನ ಕಡೆಯವರ ಜಗಳಕ್ಕೆ ಕಾರಣವಾಗಿದೆ.  

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಥೀಮ್‌ನಲ್ಲಿ 5000 ಡೈಮಂಡ್‌ಗಳ ನೆಕ್ಲೇಸ್:‌ ವಿಡಿಯೋ ವೈರಲ್‌!

ಊಟಕ್ಕೆ ಕುಳಿತವರು ತಮಗೆ ಬಡಿಸಿದ ಮಟರ್ ಪನೀರ್‍ನಲ್ಲಿ ಪನೀರೇ ಇಲ್ಲವೆಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ನೋಡ ನೋಡುತ್ತಿದ್ದಂತೆಯೇ ವಧು-ವರನ ಕಡೆಯವರು ಹೊಡೆದಾಡಿಕೊಂಡಿದ್ದಾರೆ. ತುಂಡು ಪನೀರ್‍ಗಾಗಿ ಮದುವೆ ಊಟಕ್ಕೆಂದು ಹಾಕಿದ್ದ ಚೇರ್‍ಗಳಲ್ಲೇ ಚೂರುಚೂರಾಗಿವೆ. ಸದ್ಯ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News