snake biting itself to death viral video: ಭೂಮಿ ಮೇಲೆ ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಹಾವು ಕೂಡ ಸೇರಿವೆ. ಹಾವುಗಳು ವಿಷಪೂರಿತವಾಗಿದ್ದು, ಕಚ್ಚಿದರೆ ನಿಮಿಷಗಳಲ್ಲಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಷ್ಟೊಂದು ಅಪಾಯಕಾರಿ ಜೀವಿ ಹಾವುಗಳು. ಹಾವು ಸಾಮಾನ್ಯವಾಗಿ ಮನುಷ್ಯರು ಅಥವಾ ಇತರ ಜೀವಿಗಳನ್ನು ಕಚ್ಚುವುದನ್ನು ನೋಡಿರುತ್ತೇವೆ, ಅದರ ಬಗ್ಗೆ ಕೇಳಿರುತ್ತೇವೆ. ಆದರೆ ಎಂದಾದರೂ ಹಾವು ಹಾವನ್ನೇ ಕಚ್ಚಿ ಸಾವಿನ ಸುಳಿಗೆ ತನ್ನನ್ನು ತಾನು ದೂಡುವ ಬಗ್ಗೆ ಕೇಳಿದ್ದೀರಾ? ಇಲ್ಲವಾದರೆ ಈ ವರದಿಯನ್ನೊಮ್ಮೆ ನೋಡಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದೇಶದ ಜನರಿಗೆ ಸಂತಸದ ಸುದ್ದಿ! ಸೆಪ್ಟೆಂಬರ್‌ 1 ರಿಂದ ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌, ಡಿಸೆಲ್‌ ಬೆಲೆಯಲ್ಲಿ ಭಾರಿ ಇಳಿಕೆ?


ಹಾವು ಹಾವನ್ನೇ ಕಚ್ಚಿದರೆ ಏನಾಗುತ್ತದೆ? ಹಾವಿಗೂ ಅದೇ ವಿಷ ಮಾರಕವಾಗುತ್ತಾ? ಹೀಗೆಲ್ಲಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡಬಹುದು. ವರದಿಗಳ ಪ್ರಕಾರ, ಹಾವಿನ ವಿಷವು ಲಾಲಾರಸ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಬೇಟೆಯನ್ನು ಕೊಲ್ಲಲು ಮತ್ತು ಜೀರ್ಣಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.


ವಿಷದಲ್ಲಿನ ಪ್ರಮುಖ ಅಂಶವೆಂದರೆ ಅದರಲ್ಲಿ ಇರುವ ಪ್ರೋಟೀನ್. ವಿಷವು ಪಾಲಿಪೆಪ್ಟೈಡ್‌ʼಗಳನ್ನು ಹೊಂದಿರುತ್ತದೆ, ಇದು ಇನ್ನಷ್ಟು ಅಪಾಯಕಾರಿ. ಹಾವುಗಳು ತಮ್ಮ ಬೇಟೆಯನ್ನು ಕಚ್ಚಲು ಹಲ್ಲುಗಳನ್ನು ಬಳಸುತ್ತವೆ ಮತ್ತು ಅದರ ಮೂಲಕ ವಿಷವನ್ನು ಹೊರಬಿಡುತ್ತದೆ. ಆದರೆ ವಿಷದಲ್ಲಿರುವ ಪಾಲಿಪೆಪ್ಟೈಡ್‌ಗಳು ರಕ್ತದ ಮೇಲೆ ಮಾತ್ರ ಪರಿಣಾಮ ಬೀರುವುದರಿಂದ ವಿಷವು ರಕ್ತದೊಂದಿಗೆ ಬೆರೆತಾಗ ಅಪಾಯಕಾರಿಯಾಗುತ್ತದೆ.


ಹಾವು ವಿಷವನ್ನು ನುಂಗಿದರೆ, ಅದು ನೇರವಾಗಿ ಬಾಯಿಯ ಮೂಲಕ ಹೊಟ್ಟೆಗೆ ಹೋಗುತ್ತದೆ. ಈ ಪರಿಸ್ಥಿತಿಯಲ್ಲಿ, ಹೊಟ್ಟೆಯೊಳಗಿನ ರಾಸಾಯನಿಕಗಳು ಅದನ್ನು ಜೀರ್ಣಿಸಿಕೊಳ್ಳುವುದರಿಂದ ಹಾವು ಸಾಯುವುದಿಲ್ಲ. ಆದರೆ ಹಾವು ತನ್ನನ್ನು ತಾನೇ ಕಚ್ಚಿದಾಗ, ಆ ವಿಷವು ನೇರವಾಗಿ ರಕ್ತಪ್ರವಾಹಕ್ಕೆ ಸೇರಿದರೆ, ಅದು ಹಾವಿಗೂ ಮಾರಕವಾಗುತ್ತದೆ.


ಇದನ್ನೂ ಓದಿ:ಇವರ ಪ್ರೀತಿಗೆ ಅಡ್ಡವಾಗಿಲ್ಲ ಧರ್ಮದ ಗೋಡೆ! ಅನ್ಯಧರ್ಮಿಯರನ್ನು ವರಿಸಿ ಸುಖಸಂಸಾರ ನಡೆಸುತ್ತಿರುವ ಭಾರತದ ಲೆಜೆಂಡರಿ ಕ್ರಿಕೆಟಿಗರಿವರು


ವೈಜ್ಞಾನಿಕ ವರದಿಗಳ ಪ್ರಕಾರ, ಹಾವುಗಳು ಖಿನ್ನತೆ, ಹಸಿವು ಅಥವಾ ಹಠಮಾರಿ ಸ್ವಭಾವವನ್ನು ಹೊಂದಿದಾಗ ತಮ್ಮ ಬಾಲವನ್ನು ಕಚ್ಚಿಕೊಂಡು ಸಾಯುತ್ತವೆ. ಅಂತಹ ವಿಡಿಯೋವನ್ನು ನೀವಿಲ್ಲಿ ನೋಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.