ಅಮೆರಿಕಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ ವಿಚಾರ ತಿಳಿದ 48 ಗಂಟೆಗಳಲ್ಲಿ ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಘಟನೆ ಹೇಗೆ ಸಾಧ್ಯ ಎಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video : ಆನೆಯ ಬೇಟೆಗಾಗಿ ಬಂದಿತ್ತು ಹುಲಿ.! ಗಜರಾಜ ತಿರುಗಿ ಬಿದ್ದಾಗ ನಡೆದದ್ದು...


23 ವರ್ಷದ ಪೇಟನ್ ಸ್ಟೋವರ್ ಅವರು ಒಮಾಹಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಮೊದ ಮೊದಲು ಕೆಲಸದ ಒತ್ತಡದಿಂದ ಯಾವಾಗಲೂ ಆಯಾಸವಾಗುತ್ತದೆ ಎಂದು ಭಾವಿಸಿದ್ದರು. ಆದರೆ ಯಾವಾಗ ದೇಹದಲ್ಲಿ ಬದಲಾವಣೆಯಾಗುವುದನ್ನು ಗಮನಿಸಿದರೋ ಅಂದು ವೈದ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವೈದ್ಯರು ನೀವು ಪ್ರೆಗ್ನೆಂಟ್ ಆಗಿದ್ದೀರಾ ಎಂದು ತಿಳಿಸಿದ್ದಾರೆ.


ಆದರೂ ದಂಪತಿ ಅನುಮಾನದಿಂದ ಮತ್ತೆ ಟೆಸ್ಟ್ ಮಾಡಿಸಿದ್ದು, ಅದರಲ್ಲಿ ದೃಢವಾಗಿದೆ. ಅಷ್ಟೇ ಅಲ್ಲದೆ, ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಮಗು ಇರುವುದನ್ನು ಕಂಡಿರುವುದಾಗಿ ದಂಪತಿ ತಿಳಿಸಿದ್ದಾರೆ.  


ಇದನ್ನೂ ಓದಿ: Viral Video:ವಿದೇಶಿ ಯುವತಿಗೆ ಪ್ರಪೋಸ್ ಮಾಡಲು ಭಾರತೀಯ ಹುಡುಗ ಹೇಗೆ ಸ್ಟಂಟ್ ಮಾಡಿದ್ದಾನೆ ನೋಡಿ!


ಆದರೆ ಆ ಬಳಿಕ ವೈದ್ಯರಿಗೆ ಕರೆ ಮಾಡಿದ ಪೇಟನ್ ಸ್ಟೋವರ್, ತನ್ನ ಕಿಡ್ನಿ ಮತ್ತು ಲಿವರ್ ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ. ತಕ್ಷಣವೇ ತನ್ನನ್ನು ಭೇಟಿಯಾಗುವಂತೆ ವೈದ್ಯರು ತಿಳಿಸಿದ್ದಾರೆ. ಆದರೆ ಅದಾಗಲೇ  ಗರ್ಭಿಣಿಯಾಗಿರುವ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.