Narendra Modi : ಕೇದಾರನಾಥ ದರ್ಶನಕ್ಕೆ ವಿಶೇಷ ಉಡುಪು ಧರಿಸಿದ ಪ್ರಧಾನಿ ಮೋದಿ!

ಬಾಬಾ ಕೇದಾರನಾಥದ ಪುಣ್ಯಭೂಮಿಯನ್ನು ತಲುಪಿದ ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶದ ಸ್ಥಳೀಯ ವಿಶೇಷ ಉಡುಗೆಯನ್ನು ಧರಿಸಿ ಕೇದಾರನಾಥನ ದರ್ಶನಕ್ಕೆ ಹೋಗಿರುವುದು ತುಂಬಾ ವಿಶೇಷವಾಗಿತ್ತು.

Written by - Channabasava A Kashinakunti | Last Updated : Oct 21, 2022, 10:40 AM IST
  • ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ ಪ್ರವಾಸದಲ್ಲಿ ಪಿಎಂ
  • ಹಿಮಾಚಲದ ಮಹಿಳೆ ಕೈಯಿಂದ ಡ್ರೆಸ್ ಪಡೆದ ಪಿಎಂ
  • ಉತ್ತರಾಖಂಡಕ್ಕೆ 3400 ಕೋಟಿ ಯೋಜನೆಗಳ ಉಡುಗೊರೆ
Narendra Modi : ಕೇದಾರನಾಥ ದರ್ಶನಕ್ಕೆ ವಿಶೇಷ ಉಡುಪು ಧರಿಸಿದ ಪ್ರಧಾನಿ ಮೋದಿ! title=

PM Narendra Modi dress Kedarnath Temple : ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಇವರು ಮೊತ್ತ ಮೊದಲು ಭಾರಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಾಬಾ ಕೇದಾರನಾಥದ ಪುಣ್ಯಭೂಮಿಯನ್ನು ತಲುಪಿದ ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶದ ಸ್ಥಳೀಯ ವಿಶೇಷ ಉಡುಗೆಯನ್ನು ಧರಿಸಿ ಕೇದಾರನಾಥನ ದರ್ಶನಕ್ಕೆ ಹೋಗಿರುವುದು ತುಂಬಾ ವಿಶೇಷವಾಗಿತ್ತು.

ಹಿಮಾಚಲದ ಮಹಿಳೆ ಕೈಯಿಂದ ಡ್ರೆಸ್ ಪಡೆದ ಪಿಎಂ 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇದಾರನಾಥ ಪ್ರವಾಸದಲ್ಲಿ ಧರಿಸಿರುವ ಉಡುಪನ್ನು ಚೋಳ ಡೋರಾ ಎಂದು ಕರೆಯಲಾಗುತ್ತದೆ. ಇದನ್ನು ಹಿಮಾಚಲ ಪ್ರದೇಶದ ಕೈಮಗ್ಗ ಉದ್ಯಮದಲ್ಲಿ ತಯಾರಿಸಲಾಗಿದೆ. ಪ್ರಧಾನಿ ಮೋದಿ ಹಿಮಾಚಲದ ಚಂಬಾ ಪ್ರವಾಸಕ್ಕೆ ಹೋದಾಗ ಮಹಿಳೆಯೊಬ್ಬರು ತಮ್ಮ ಕೈಯಿಂದ ಈ ಉಡುಪನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ : ಮನೆ-ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಉಕ್ಕಿನ ದರದಲ್ಲಿ ಶೇ.40ರಷ್ಟು ಕುಸಿತ!

ಮಹಿಳೆಗೆ ನೀಡಿದ ಭರವಸೆಯನ್ನು ಈಡೇರಿಸಿದ ಪಿಎಂ ಮೋದಿ 

ಚಂಬಾ ಪ್ರವಾಸದ ವೇಳೆ ಉಡುಪನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಗೆ ಚಳಿ ಪ್ರದೇಶಕ್ಕೆ ಹೋದಾಗಲೆಲ್ಲಾ ಅದನ್ನು ಧರಿಸುವುದಾಗಿ ಭರವಸೆ ನೀಡಿದ್ದರು. ಕೇದಾರನಾಥ ದೇಗುಲವನ್ನು ತಲುಪಿದ ನಂತರ, ಪ್ರಧಾನಿ ಮೋದಿ ತಮ್ಮ ಭರವಸೆಯನ್ನು ಈಡೇರಿಸಿದರು ಮತ್ತು ಇಂದು ಪ್ರಧಾನಿ ಅದೇ ಉಡುಗೆಯನ್ನು ಧರಿಸಿ ಆಗಮಿಸಿದರು. ಈ ಉಡುಪನ್ನು ಉತ್ತಮ ಕರಕುಶಲತೆಯಿಂದ ತಯಾರಿಸಲಾಗಿದೆ.

ಉತ್ತರಾಖಂಡಕ್ಕೆ 3400 ಕೋಟಿ ಯೋಜನೆಗಳ ಉಡುಗೊರೆ

ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಬದರಿನಾಥಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿಗಳ ಕಚೇರಿ (PMO) ಪ್ರಕಾರ, ಪ್ರಧಾನಿ ಮೋದಿ ಅವರು ಈ ಭೇಟಿಯ ಸಮಯದಲ್ಲಿ ಉತ್ತರಾಖಂಡದಲ್ಲಿ 3400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕೇದಾರನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ಪ್ರಧಾನಿ ಮೋದಿ ಅವರು ಗೌರಿಕುಂಡ್ ಅನ್ನು ಕೇದಾರನಾಥದೊಂದಿಗೆ ಸಂಪರ್ಕಿಸುವ ರೋಪ್‌ವೇಗೆ ಶಂಕುಸ್ಥಾಪನೆ ಮಾಡಿದರು. ಕೇದಾರನಾಥ ರೋಪ್ ವೇ ಸುಮಾರು 9.7 ಕಿ.ಮೀ ಉದ್ದವಿರುತ್ತದೆ. ಇದು ಗೌರಿಕುಂಡವನ್ನು ಕೇದಾರನಾಥದೊಂದಿಗೆ ಸಂಪರ್ಕಿಸುತ್ತದೆ, ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6-7 ಗಂಟೆಗಳಿಂದ ಸುಮಾರು 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.

ಇದನ್ನೂ ಓದಿ : Diwali 2022: ದೀಪಾವಳಿಗೆ ದೇಶದ ಯುವಜನರಿಗೆ ಭಾರಿ ಉಡುಗೊರೆ ನೀಡಲು ಮುಂದಾದ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News