Alien Viral Video: ಅಮೆರಿಕದಲ್ಲಿ ಪತ್ತೆಯಾದ ಏಲಿಯನ್ಗಳು.. ಅಚ್ಚರಿ ಮೂಡಿಸುವ ವಿಡಿಯೋ ವೈರಲ್!
Alien Viral Video: ಇತ್ತೀಚೆಗಷ್ಟೇ ಅಮೆರಿಕದ ಮಾಲ್ನಿಂದ ಏಲಿಯನ್ಗಳು ಹೊರಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Alien Viral Video: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಇತ್ತೀಚೆಗಷ್ಟೇ ಮಾಲ್ನಲ್ಲಿ ಅನ್ಯಗ್ರಹ ಜೀವಿಯೊಬ್ಬ ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಹಲವರಿಗೆ ಆಶ್ಚರ್ಯವಾಗಬಹುದು. ಈ ವಿಡಿಯೋ ಭೂಮಿಯ ಮೇಲೆ ಇನ್ನೂ ಅನ್ಯಗ್ರಹ ಜೀವಿಗಳು ಇದ್ದಾರೆಯೇ? ಎಂಬ ಚರ್ಚೆ ಹುಟ್ಟು ಹಾಕಿದೆ. ಆದರೆ ಈ ವಿಡಿಯೋದಲ್ಲಿ ನಿಜವಾಗಿಯೂ ಅನ್ಯಗ್ರಹ ಜೀವಿ ಸುತ್ತಾಡುತ್ತಿದೆಯೇ? ವೈರಲ್ ಆದ ವಿಡಿಯೋ ನಿಜವೇ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಇನ್ ಕೂಲ್ ಮೂಡ್..! ಫೋಟೋಸ್ ನೋಡಿ
ಅಮೆರಿಕದ ಮಾಲ್ನಿಂದ ಏಲಿಯನ್ ಹೊರ ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಅನ್ಯಗ್ರಹ ಜೀವಿ 10 ಅಡಿಗೂ ಹೆಚ್ಚು ಎತ್ತರವಿದ್ದು, ಮಾಲ್ ನ ಬಳಿಯಿದ್ದ ಜನರೆಲ್ಲ ಕಿರುಚಿಕೊಂಡು ಗಾಬರಿಗೊಂಡು ಓಡಿಹೋಗುವುದನ್ನ ಈ ವಿಡಿಯೋದಲ್ಲಿ ನೋಡಬಹುದು. ಅನ್ಯಲೋಕದ 10 ಅಡಿ ಎತ್ತರದ ವ್ಯಕ್ತಿ ಮಾಲ್ನಿಂದ ಹೊರಬರುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.
ಏರ್ಪ್ಲೇನ್ ಮೂಡ್ನಲ್ಲಿ ಇಂಟರ್ನೇಟ್ ಬಳಸಲು ಈ ಟ್ರೀಕ್ ಫಾಲೋ ಮಾಡಿ..
ಈ ಕುರಿತು ಮಿಯಾಮಿ ಪೊಲೀಸ್ ಇಲಾಖೆ ಹೇಳಿಕೆ ನೀಡಿದ್ದು, ಕೆಲವರು ಮಾಲ್ ನ ವಿಡಿಯೋವನ್ನು ಶೇರ್ ಮಾಡಿ ಅನ್ಯಗ್ರಹ ಜೀವಿಗಳು ಓಡಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಅನ್ಯಗ್ರಹ ಜೀವಿಗಳು ಅಲ್ಲಿಗೆ ಬಂದಿಲ್ಲ ಮತ್ತು ಮಾಲ್ನಿಂದ ಯಾರೂ ಓಡಿಹೋಗಿಲ್ಲ ಎಂದು ತಿಳಿಸಿದ್ದಾರೆ. ಕೆಲವರು ಜನರ ದಾರಿತಪ್ಪಿಸಲು ಇಂತಹ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಏಲಿಯನ್ಗಳು ಇದ್ದಾರೆ ಎಂಬ ನಂಬಿಕೆ ಇದೆ, ಆದರೆ ಇನ್ನೂ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.