ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಇನ್‌ ಕೂಲ್‌ ಮೂಡ್‌..! ಫೋಟೋಸ್‌ ನೋಡಿ

PM Narendra Modi visit Lakshadweep : ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ, ಅಲ್ಲಿ ಅವರು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ.. ಸಮುದ್ರದ ದಡದಲ್ಲಿ ಕುಳಿತು ವಿಶ್ರಾಂತಿ ಪಡೆದರು. ಅಲ್ಲದೆ, ಸಮುದ್ರದಲ್ಲಿ ಸ್ನಾರ್ಕ್ಲಿಂಗ್ ಮಾಡಿ, ಸಾಗರದಾಳದಲ್ಲಿನ ಜೀವಿಗಳನ್ನು ಕಣ್ತುಂಬಿಕೊಂಡರು. ಈ ಕುರಿತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1 /6

ಲಕ್ಷದ್ವೀಪದ ಸೊಬಗನ್ನು, ಅಲ್ಲಿನ ಜನರ ಆತಿಥ್ಯವನ್ನು ನೋಡಿ ಈಗಲೂ ಬೆರಗಾಗಿದ್ದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.   

2 /6

ಈ ದ್ವೀಪಗಳು ತಮ್ಮ ನೈಸರ್ಗಿಕ ಸೌಂದರ್ಯ ಮತ್ತು ಶಾಂತಿಯುತ ವಾತಾವರಣದಿಂದ ಮೋಡಿಮಾಡುತ್ತವೆ ಎಂದು ನಮೋ ಹೇಳಿಕೊಂಡಿದ್ದಾರೆ.   

3 /6

ಈ ಪರಿಸರವು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಹೇಗೆ ಶ್ರಮಿಸಬೇಕು ಎಂಬುದನ್ನು ಕಲಿಸಿದೆ ಎಂದು ಮೋದಿ ಲಕ್ಷದ್ವೀಪದ ಶಾಂತಿಯುತ ಪ್ರಕೃತಿ ಸೌಂದರ್ಯವನ್ನು ಹೊಗಳಿದ್ದಾರೆ.  

4 /6

ಸಾಹಸ ಪ್ರಿಯರೇ ನಿಮ್ಮ ಪಟ್ಟಿಗೆ ಲಕ್ಷದ್ವೀಪವನ್ನೂ ಸೇರಿಸಿಕೊಳ್ಳಿ ಅಂತ ಪ್ರವಾಸಿಗರಿಗೆ ಸಲಹೆ ನೀಡಿದ್ದಾರೆ ಪ್ರಧಾನಿ.    

5 /6

ಕಳೆದೆರಡು ದಿನಗಳಿಂದ ಪ್ರಧಾನಿ ಮೋದಿ ಕೇರಳ, ತಮಿಳುನಾಡು, ಲಕ್ಷದ್ವೀಪ ಪ್ರವಾಸ ಕೈಗೊಂಡಿದ್ದಾರೆ. ಲಕ್ಷದ್ವೀಪದ ಕಡಲತೀರದಲ್ಲಿ ಅಡ್ಡಾಡಿದರು.     

6 /6

ಸ್ನಾರ್ಕ್ಲಿಂಗ್ ಮಾಡಿದ ನರೇಂದ್ರ ಮೋದಿ, ಸಮುದ್ರದಾಳದಲ್ಲಿನ ಜೀವಿಗಳನ್ನು ಕಂಡು ಖುಷಿಯಾದರು.