Girl Dance Video: ಮದುವೆಗಳಲ್ಲಿ ವಧು-ವರರ ಸಹೋದರ ಸಹೋದರಿಯರು ಮತ್ತು ಸ್ನೇಹಿತರು ಸಖತ್‌ ಎಂಜಾಯ್‌ ಮಾಡುತ್ತಾರೆ. ಮದುವೆಯಲ್ಲಿ ವಧು - ವರರಿಗಿಂತ ಅವರೇ ಹೆಚ್ಚು ಸಂಭ್ರಮಿಸುತ್ತಿರುತ್ತಾರೆ.  ಕೆಲವೊಮ್ಮೆ ಮಾತುಗಳಿಂದ ಮತ್ತು ಕೆಲವೊಮ್ಮೆ ನೃತ್ಯದಿಂದ ಅವರು ಅತಿಥಿಗಳ ಹೃದಯವನ್ನು ಗೆಲ್ಲುತ್ತಾರೆ. ಇದೀಗ ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್‌ ಆಗಿದ್ದು, ವಧುವಿನ ತಂಗಿ ನೆರೆದವರ ಹೃದಯಗೆದ್ದಿದ್ದಾರೆ. ವೇದಿಕೆಯ ಮೇಲೆ ‘ರಾಂಝಾನಾ’ ಚಿತ್ರದ ಹಾಡಿಗೆ ಅದ್ಭುತವಾದ ನೃತ್ಯ ಮಾಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Shocking News: ಓಡಿಹೋಗಿದ್ದ ಆಂಟಿ-ಯುವಕ ಶವವಾಗಿ ಪತ್ತೆ..!


ಮದುವೆ ಮನೆಯಿಂದ ಹೊರಬಂದಿರುವ ಈ ವಿಡಿಯೋದಲ್ಲಿ ವಧುವಿನ ಸಹೋದರಿ ಡ್ಯಾನ್ಸ್‌ ಮಾಡಿದ್ದಾರೆ. ವಧು ಸೇರಿದಂತೆ ಎಲ್ಲಾ ಸಂಬಂಧಿಕರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದಾರೆ. ನಂತರ 'ರಾಂಝಾನಾ' ಚಿತ್ರದ ಹಾಡು ಪ್ಲೇ ಆಗಲು ಪ್ರಾರಂಭಿಸುತ್ತದೆ ಮತ್ತು ವಧುವಿನ ಸಹೋದರಿ ಅದ್ಭುತವಾದ ನೃತ್ಯವನ್ನು ಮಾಡಲು ಪ್ರಾರಂಭಿಸುತ್ತಾರೆ. ನೃತ್ಯದ ಜೊತೆಗೆ ಆಕೆಯ ಮುಖದಲ್ಲಿನ ಎಕ್ಸ್‌ಪ್ರೆಷನ್‌ ಎಲ್ಲರ ಮನಸೂರೆಗೊಂಡಿತು. ಈ ವೇಳೆ ವಧುವಿನ ತಂದೆ ಡ್ಯಾನ್ಸ್ ವಿಡಿಯೋವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.


 



 


ಈ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಂದ ಕೂಡಲೇ ಹವಾ ಕ್ರಿಯೇಟ್ ಮಾಡುತ್ತಿದೆ. ಇದನ್ನು mumbaidancersandindiandanceinstitute ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಬಗ್ಗೆ ನೆಟಿಜನ್‌ಗಳು ಕೂಡ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಸುಂದರ ಯುವತಿಯ ಡ್ಯಾನ್ಸ್‌ ಯುವಕರ ಮನಸೆಳೆಯುತ್ತಿದೆ. 


ಇದನ್ನೂ ಓದಿ : ವಿಗ್ರಹವೂ ಇಲ್ಲ, ಅರ್ಚಕರೂ ಇಲ್ಲ.. ಗಡಿಯಾರ ಕೊಟ್ರೆ ದರಿದ್ರ ದೂರವಾಗುತ್ತೆ! ದೇವಾಲಯದ ಕಥೆಯೇ ಬಲು ರೋಚಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.