Crocodile Python Fight: ಕಾಡು ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿನ ಕೆಲ ವಿಡಿಯೋಗಳನ್ನು ನೋಡಿ ನಮ್ಮ ಮೈಮೇಲಿನ ರೋಮಗಳೇ ಎದ್ದುನಿಲ್ಲುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ವೀಡಿಯೊ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ, ಅದನ್ನು ನೋಡಿ ಒಂದು ಕ್ಷಣ ನೀವೂ ಕೂಡ ಬೆಚ್ಚಿಬೀಳುವಿರಿ. ಈ ವೀಡಿಯೊದಲ್ಲಿ, ದೈತ್ಯ ಹೆಬ್ಬವೊಂದು ಭಯಾನಕ ಮೊಸಳೆ ಕಾದಾಡುತ್ತಿರುವುದನ್ನು ನೀವು ನೋಡಬಹುದು.

COMMERCIAL BREAK
SCROLL TO CONTINUE READING

ಮೊಸಳೆ ಮತ್ತು ಹೆಬ್ಬಾವಿನ ಕಾದಾಟ
ಮೊಸಳೆ ನೀರಿನಲ್ಲಿ  ತನ್ನ ಬೇಟೆಗಾಗಿ ಕಾಯುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಏತನ್ಮಧ್ಯೆ, ಸುಮಾರು ಹತ್ತು ಅಡಿ ಉದ್ದದ ಹೆಬ್ಬಾವೊಂದು ಆಕಸ್ಮಿಕವಾಗಿ ನೀರಿಗೆ ಇಳಿಯುತ್ತದೆ. ಅದರ ನಂತರ ಸೃಷ್ಟಿಯಾಗುವ ದೃಶ್ಯವನ್ನು ನೀವು ಈ ಹಿಂದೆ ಎಂದು ನೋಡಿರಲಿಕ್ಕಿಲ್ಲ. ಹೆಬ್ಬಾವನ್ನು ಎದುರಿಗೆ ನೋಡಿದ ಮೊಸಳೆ ಅದನ್ನು ಒಂದು ಸುಲಭ ಬೇಟೆ ಎಂದು ಭಾವಿಸಿ, ತಪ್ಪು ಮಾಡಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಇದಾದ ನಂತರ ಮೊಸಳೆ ಹೆಬ್ಬಾವಿನ ಮೇಲೆ ದಾಳಿ ಮಾಡಿದೆ. ಆದರೆ, ಇದು ಮೊಸಳೆಗೆ ದುಬಾರಿಯಾಗಿ ಪರಿಣಮಿಸಿದೆ.


ಇದನ್ನೂ ಓದಿ-

ಮೊಸಳೆ ತನ್ನ ದವಡೆಯಲ್ಲಿ ಹೆಬ್ಬಾವನ್ನು ಹಿಡಿಯಲು ಯತ್ನಿಸಿದ್ದು, ಅದು ತಪ್ಪು ಎಂದು ನಂತರ ಅದರ ಅರಿವಿಗೆ ಬಂದಿದೆ. ಏಕೆಂದರೆ ಮೊಸಳೆ ಆ ಹೆಬ್ಬಾವನ್ನು ಬಾಯಿಗೆ ಹಿಡಿದ ತಕ್ಷಣ. ಹೆಬ್ಬಾವು ಕೂಡ ಆಕ್ರಮಣಕಾರಿಯಾಗಿದೆ. ಮೊದಲು ಹೆಬ್ಬಾವು ತನ್ನ ಬಾಯಿಯಿಂದ ಆ ಭಯಂಕರ ಮೊಸಳೆಯ ದವಡೆಯನ್ನು ಕಚ್ಚುವುದನ್ನು ನೀವು ನೋಡಬಹುದು ಮತ್ತು ನಂತರ ಅದು ಆ ಮೊಸಳೆಯನ್ನು ಸುತ್ತಿಕೊಳ್ಳಲು ಪ್ರಾರಂಭಿಸುತ್ತದೆ. ವೀಡಿಯೊ ನೋಡಿ-


Viral Video: ವಿಮಾನಕ್ಕೆ ಡಿಕ್ಕಿ ಹೊಡೆದ ಟೆಸ್ಲಾ ಕಾರು, ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ


ನಂತರ ಮೊಸಳೆಯ ಸ್ಥಿತಿ ಹದಗೆಟ್ಟಿದೆ
ಈ ಫೈಟ್ ಮುಂದುವರೆಯುತ್ತಿದ್ದಂತೆ ಹೆಬ್ಬಾವು ತನ್ನ ಬೇಟೆಯನ್ನು  ಹಿಡಿತಕ್ಕೆ ತೆಗೆದುಕೊಳ್ಳುವುದನ್ನು ನೀವು ನೋಡಬಹುದು. ಇದೇ ವೇಳೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಕೂಡ, ನೀರಿನಲ್ಲಿ ಮರಣದಂಡನೆ ನೀಡುವ ಮೊಸಳೆಗೆ ತನ್ನ ಬೇಟೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೆಬ್ಬಾವಿನ ಹಿಡಿತಕ್ಕೆ ಸಿಕ್ಕ ಮೊಸಳೆಗೆ ಅದರ ಅಜ್ಜಿ ನೆನಪಾಗಿದ್ದಾಳೆ ಎಂಬುದು ಮಾತ್ರ ನಿಜ. ojatro ಹೆಸರಿನ ಯೂಟ್ಯೂಬ್ ಖಾತೆ ಮೂಲಕ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ಎಷ್ಟು ಅದ್ಭುತವಾಗಿದೆ ಎಂದರೆ ಇದುವರೆಗೆ 13 ಕೋಟಿಗೂ ಹೆಚ್ಚು ಜನರು ಅದನ್ನು ವೀಕ್ಷಿಸಿದ್ದಾರೆ.


ಇದನ್ನೂ ನೋಡಿ-Shocking Video: ಪತ್ನಿಯೊಂದಿಗೆ ಜಗಳವಾಡಿದ ಪತಿ, ಬೆಡ್ ಮೇಲೆ ಪತ್ನಿ ಮಾಡಿದ ಕೆಲಸ ನೋಡಿ ನೀವೂ ಬೆಚ್ಚಿಬೀಳುವಿರಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.