Viral Video: ವಿಮಾನಕ್ಕೆ ಡಿಕ್ಕಿ ಹೊಡೆದ ಟೆಸ್ಲಾ ಕಾರು, ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಆಟೋ ಪೈಲಟ್ ಮೂಲಕ ಚಲಾಯಿಸುತ್ತಿದ್ದ ಟೆಸ್ಲಾ ಕಾರೊಂದು ಲಕ್ಷಾಂತರ ಮೌಲ್ಯದ ಖಾಸಗಿ ಜೆಟ್ ವಿಮಾನಕ್ಕೆ ಡಿಕ್ಕಿಹೊಡೆಯುತ್ತಿರುವುದನ್ನು ನೀವು ಈ ವೀಡಿಯೊದಲ್ಲಿ ನೋಡಬಹುದು.  

Written by - Nitin Tabib | Last Updated : Apr 23, 2022, 10:10 PM IST
  • ವಿಮಾನಕ್ಕೆ ಡಿಕ್ಕಿ ಹೊಡೆದ ಟೆಸ್ಲಾ ಕಾರು
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
  • ಆಟೋ ಪೈಲೆಟ್ ಮೋಡ್ ನಲ್ಲಿ ವಿಮಾನ ಚಲಿಸುತ್ತಿತ್ತು
Viral Video: ವಿಮಾನಕ್ಕೆ ಡಿಕ್ಕಿ ಹೊಡೆದ ಟೆಸ್ಲಾ ಕಾರು, ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ title=
tesla plane crash

ನವದೆಹಲಿ: ಟೆಸ್ಲಾ ಕಾರುಗಳು ತುಂಬಾ ಖ್ಯಾತಿಯನ್ನು ಪಡೆದಿವೆ, ಆದರೆ ತಾಂತ್ರಿಕ ದೋಷಗಳಿಂದಾಗಿ, ಹಲವು ಬಾರಿ ಅವು ಕ್ರ್ಯಾಶ್ ಆಗಿರುವ ವರದಿಗಳನ್ನು ನೀವು ಓದಿರಬಹುದು. ಈ ಕುರಿತು ಇತ್ತೀಚೆಗಷ್ಟೇ ಮತ್ತೊಂದು ವಿಡಿಯೋ ಭಾರಿ ವೈರಲ್ ಆಗುತ್ತಿದ್ದು,  ಟೆಸ್ಲಾ ಕಾರುಗಳ ಬಗ್ಗೆ ದೊಡ್ಡ ಪ್ರಶ್ನೆಯನ್ನೇ ಹುಟ್ಟುಹಾಕಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ಈ ವೀಡಿಯೊನಲ್ಲಿ ಟೆಸ್ಲಾ ಕಾರೊಂದು ಖಾಸಗಿ ಜೆಟ್‌ ವಿಮಾನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ನೀವು ಗಮನಿಸಬಹುದು.

ವೈಮಾನಿಕ ವ್ಯಾಪಾರ ಪ್ರದರ್ಶನದಿಂದ ಹೊರಹೊಮ್ಮಿದ ಈ ವಿಡಿಯೋದಲ್ಲಿ ಆಟೋಪೈಲಟ್‌ನಲ್ಲಿ ಚಲಿಸುತ್ತಿರುವ ಟೆಸ್ಲಾ ಕಾರೊಂದು ಲಕ್ಷಾಂತರ ಮೌಲ್ಯದ ಖಾಸಗಿ ಜೆಟ್‌ಗೆ ಡಿಕ್ಕಿ ಹೊಡೆದಿದೆ. ವೀಡಿಯೊವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಂಚಿಕೊಂಡ ದಿನದಿಂದಲೇ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ಹರಡುತ್ತಿದೆ. ಇದುವರೆಗೆ ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆಗೆ ಒಳಗಾಗಿದೆ. ವಾಷಿಂಗ್ಟನ್‌ನ ಸ್ಪೋಕೇನ್‌ನಲ್ಲಿ ವಿಮಾನ ತಯಾರಕ ಕಂಪನಿ ಸಿರಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವಿಡಿಯೋ ಹಂಚಿಕೊಂಡ ಬಳಕೆದಾರ ಬರೆದುಕೊಂಡಿದ್ದಾರೆ.

ಇದನ್ನೂ ಓದಿ-Shocking Video: ಪತ್ನಿಯೊಂದಿಗೆ ಜಗಳವಾಡಿದ ಪತಿ, ಬೆಡ್ ಮೇಲೆ ಪತ್ನಿ ಮಾಡಿದ ಕೆಲಸ ನೋಡಿ ನೀವೂ ಬೆಚ್ಚಿಬೀಳುವಿರಿ

ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯಲಾಗಿರುವ ಈ ವೈರಲ್ ವೀಡಿಯೊದಲ್ಲಿ, ಕಾರು ಮಾಲೀಕರು ನೀಡಿದ ಸೂಚನೆಗಳನ್ನು ಅನುಸರಿಸಿ ಕಾರು ಸಿರಸ್ ವಿಷನ್ ಜೆಟ್‌ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಕಾರ್ ಮಾಲೀಕರು ಟೆಸ್ಲಾ ಕಾರಿನಲ್ಲಿ 'ಸ್ಮಾರ್ಟ್ ಸಮನ್ಸ್' ವೈಶಿಷ್ಟ್ಯವನ್ನು ಬಳಸುತ್ತಿದ್ದರು ಎನ್ನಲಾಗಿದೆ, ಈ ವೈಶಿಷ್ಟ್ಯ ಟೆಸ್ಲಾ ಕಾರಿನ ಮಾಲೀಕರನ್ನು ಅವರ ಸ್ಮಾರ್ಟ್‌ಫೋನ್ ಮತ್ತು ಜಿಪಿಎಸ್ ನ್ಯಾವಿಗೇಷನ್ ಬಳಸಿ ಅವರ ಗಮ್ಯ ಸ್ಥಾನಕ್ಕೆ ಕರೆದೊಯ್ಯಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವನ್ನು ಬಳಸುವ ಕಾರುಗಳು ಎಲ್ಲಾ ಅಡೆತಡೆಗಳನ್ನು ದಾಟಬಹುದು ಮತ್ತು ಅಗತ್ಯವಿರುವಾಗ ನಿಲ್ಲುವ ಸಾಮರ್ಥ್ಯ ಹೊಂದಿವೆ ಎಂದು ಟೆಸ್ಲಾ ಹೇಳಿಕೊಂಡಿದೆ, ಆದರೆ ರೆಡ್ಡಿಟ್ ನ ಈ ವೀಡಿಯೊದಲ್ಲಿ ಟೆಸ್ಲಾ ಕಂಪನಿಯ ಆ ಭರವಸೆ ಸುಳ್ಳಾದಂತೆ ತೋರುತ್ತಿರುವುದು ಮಾತ್ರ ನಿಜ.

ಇದನ್ನೂ ಓದಿ-Thief Dance Video: CCTV ಫೂಟೇಜ್ ನಲ್ಲಿ ಕಂಡ ಕಳ್ಳನ ವಿಶಿಷ್ಟ ಡಾನ್ಸ್, ನೀವೂ ನೋಡಿ

ವಿಶೇಷವೆಂದರೆ ಈ ವಿಡಿಯೋ ಟ್ವಿಟ್ಟರ್ ನಲ್ಲಿಯೂ ಕೂಡ ಸ್ಥಾನ ಪಡೆದುಕೊಂಡಿದೆ. ಟ್ವಿಟ್ಟರ್ ನಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಬಾರಿ ಇದು ವೀಕ್ಷಣೆಗೆ ಒಳಗಾಗಿದೆ. ಈ ಕಾರು ನಿಂತ ವಿಮಾನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿರುವುದನ್ನು ನೀವು ನೋಡಬಹುದು. ಸಮನ್ಸ್ ವೈಶಿಷ್ಟ್ಯ ಟೆಸ್ಲಾ ಕಾರಿನ ಒಟ್ಟು ಸೆಲ್ಫ್ ಡ್ರೈವಿಂಗ್ ಸೂಟ್ ನ ಒಂದು ಭಾಗವಾಗಿದೆ. ಇದನ್ನು 2019ರಲ್ಲಿ ರೊಲ್ ಔಟ್ ಮಾಡಲಾಗಿದೆ. ಆದರೆ, ಈ ವೈಶಿಷ್ಟ್ಯ ಬಳಸಿದ ಹಲವು ವಾಹನಗಳು ಅಪಘಾತಕ್ಕೀಡಾಗಿವೆ ಎನ್ನಲಾಗಿದೆ.

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News