Elephant Viral video : ಆನೆಗಳು, ಮಂಗಗಳು ಮತ್ತು ಡಾಲ್ಫಿನ್‌ಗಳು ಅಸಾಧಾರಣ ಬುದ್ಧಿವಂತ ಜೀವಿಗಳು, ಇವುಗಳು ಎಲ್ಲಹ ಪ್ರಾಣಿಗಳಿಂದ ಬಲು ಭಿನ್ನವಾಗಿರುತ್ತವೆ ಎಂದು ಪ್ರಾಣಿ ಸಂಶೋಧಕರು ಹೇಳುತ್ತಾರೆ. ಆನೆಗಳು ನಮ್ಮಂತೆಯೇ ಆಲೋಚನೆ, ಭಾವನೆ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.. ಮರಿ ಆನೆಗಳನ್ನು ನೋಡುವುದೇ ಒಂದು ಖುಷಿ. ಅವುಗಳ ತುಂಟಾಟ, ಮಲಗುವುದಾಗಲಿ, ಸ್ನಾನ ಮಾಡುವುದಾಗಲಿ, ಊಟ ಮಾಡುವುದಾಗಲಿ, ಆಟವಾಡುವುದಾಗಲಿ ತುಂಬಾ ಕ್ಯೂಟಾಗಿ ಇರುತ್ತೆ.


COMMERCIAL BREAK
SCROLL TO CONTINUE READING

ಮರಿ ಆನೆಗಳು ಮಾಡುವ ಕೆಲವು ತಮಾಷೆಯ ಚೇಷ್ಟೆಗಳು ಹೃದಯಸ್ಪರ್ಶಿಯಾಗಿರುತ್ತವೆ. ಮರಿ ಆನೆಗಳ ಕಿಡಿಗೇಡಿತನದ ವಿಡಿಯೋಗಳು ಅಂತರ್ಜಾಲದಲ್ಲಿ ಆಗಾಗ ವೈರಲ್ ಆಗುತ್ತಿವೆ. ಆನೆಯ ತುಂಟಾಟ ನೊಂದ ಮನಸ್ಸನ್ನು ಹಗುರಗೊಳಿಸುತ್ತವೆ. ಇದೀಗ ಆನೆ ಜನಿಸಿದ ಕೆಲವೇ ಗಂಟೆಗಳಲ್ಲಿ ನಡೆಯಲು ಕಲಿಯುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ತಾಯಿ ಆನೆ ತನ್ನ ಮರಿಗೆ ನಿಲ್ಲುವುದನ್ನು ಕಲಿಸುತ್ತಿರುವುದನ್ನ ನೀವು ಕಾಣಬಹುದು. ತಾಯಿಯೇ ಮೊದಲ ಗುರು ಅಂತಾರಲ್ಲ ಈ ವಿಡಿಯೋ ನೋಡಿದ್ರೆ ಅದು ಸತ್ಯ ಅನಿಸುತ್ತೆ.


 


ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಏಪ್ರಿಲ್ 5 ರವರೆಗೆ ಮನೀಶ್ ಸಿಸೋಡಿಯಾ  ನ್ಯಾಯಾಂಗ ಬಂಧನ


ಆನೆ ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ. ಆನೆಯೊಂದು ಹುಟ್ಟುವಾಗ ಸರಾಸರಿ 200 ಪೌಂಡ್ ತೂಗುತ್ತದೆ. ಇದು 30 ನವಜಾತ ಶಿಶುಗಳ ತೂಕಕ್ಕೆ ಸಮನಾಗಿರುತ್ತದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಅದ್ಭುತ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ವೈರಲ್ ವೀಡಿಯೊವನ್ನು ಇತ್ತೀಚಿನ ದೃಶ್ಯಗಳು - ಕ್ಯೂಟ್ ಮತ್ತು ಕಡ್ಲಿ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಈಗಾಗಲೇ 508K ಜನರು ವೀಕ್ಷಿಸಿದ್ದಾರೆ. ಹಲವರು ತಮ್ಮ ಕಾಮೆಂಟ್‌ಗಳನ್ನೂ ಹಾಕಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.