ಮಗನಿಗೆ ಹೊಡೆದ ಅಂತ ಶಿಕ್ಷಕನನ್ನೇ ಅಟ್ಟಾಡಿಸಿ ಥಳಿಸಿದ ತಂದೆ-ತಾಯಿ..!

Teacher Beaten video : ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಆರೋಪಿಸಿ ಶಿಕ್ಷಕನ ಮೇಲೆ ಪೋಷಕರು ಹಲ್ಲೆ ನಡೆಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ವರದಿ ಪ್ರಕಾರ, ಈ ಘಟನೆ ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯಲ್ಲಿನಡೆದಿದೆ ಎಂದು ತಿಳಿದು ಬಂದಿದೆ.

Written by - Krishna N K | Last Updated : Mar 22, 2023, 05:26 PM IST
  • ತಪ್ಪು ಮಾಡಿದ ವಿದ್ಯಾರ್ಥಿಗಳನ್ನು ದಂಡಿಸುವು ಶಿಕ್ಷಕರ ಜವಾಬ್ದಾರಿ.
  • ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಆರೋಪಿಸಿ ಶಿಕ್ಷಕನ ಮೇಲೆ ಪೋಷಕರು ಹಲ್ಲೆ.
  • ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.
ಮಗನಿಗೆ ಹೊಡೆದ ಅಂತ ಶಿಕ್ಷಕನನ್ನೇ ಅಟ್ಟಾಡಿಸಿ ಥಳಿಸಿದ ತಂದೆ-ತಾಯಿ..! title=

Teacher Beaten viral video : ಶಾಲೆಯಲ್ಲಿ ತಪ್ಪು ಮಾಡಿದ ವಿದ್ಯಾರ್ಥಿಗಳನ್ನು ದಂಡಿಸಿ ಅವರನ್ನು ಸರಿದಾರಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದೀಗ ತಪ್ಪು ಮಾಡಿದ ವಿದ್ಯಾರ್ಥಿಯನ್ನು ತಳಿಸಿದ್ದಕ್ಕಾಗಿ ಆತನ ಪೋಷಕರು ಶಿಕ್ಷಕನನ್ನೇ ಅಟ್ಟಾಸಿಕೊಂಡು ಹೊಡೆದ ಘಟನೆ ತಮಿಳುನಾಡಿನ ಶಾಲೆಯೊಂದರಲ್ಲಿ ನಡೆದಿದ್ದು, ವಿಡಿಯೋ ವೈರಲ್‌ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಎರಡನೆ ತರಗತಿ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ. 

ಎನ್‌ಡಿಟಿವಿ ವರದಿ ಪ್ರಕಾರ, ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಆರೋಪಿಸಿ ಶಿಕ್ಷಕನ ಮೇಲೆ ಪೋಷಕರು ಹಲ್ಲೆ ನಡೆಸಿದ್ದಾರೆ. ಶಿಕ್ಷಕ ಪೋಷಕರ ಆರೋಪವನ್ನು ತಳ್ಳಿಹಾಕಿದ್ದಾರೆ. ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕನನ್ನು ಆರ್ ಭರತ್ ಎಂದು ಗುರುತಿಸಲಾಗಿದೆ.  ಮೂರು ನಿಮಿಷಗಳ ವೀಡಿಯೊದಲ್ಲಿ ದಂಪತಿಗಳು ತರಗತಿಗೆ ನುಗ್ಗಿ ಶಿಕ್ಷಕರೊಂದಿಗೆ ಜಗಳವಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ದೆಹಲಿಯಲ್ಲಿ ಪ್ರಧಾನಿ ಮೋದಿ ವಿರೋಧಿ ಪೋಸ್ಟರ್ ಗಳು ಪ್ರತ್ಯಕ್ಷ, ನಾಲ್ವರ ಬಂಧನ

ಮಗುವನ್ನು ಹೊಡೆಯುವುದು ಕಾನೂನುಬಾಹಿರ, ನಿಮಗೆ ಯಾರು ಹಕ್ಕು ನೀಡಿದರು? ನಾನು ನನ್ನ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ವಿದ್ಯಾರ್ಥಿಯ ತಾಯಿ ಸೆಲ್ವಿ ಶಿಕ್ಷಕನಿಗೆ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು. ಇತರ ಮಕ್ಕಳು ನೋಡುತ್ತಿರುವಂತೆಯೇ, ವಿದ್ಯಾರ್ಥಿಯ ತಂದೆ ಶಿವಲಿಂಗಂ, ಶಿಕ್ಷಕನ್ನು ಹಿಂಬಾಲಿಸಿ ಅವರನ್ನು ಥಳಿಸಿದ್ದಾರೆ. ಅಲ್ಲದೆ, ಇಟ್ಟಿಗೆ, ಕಲ್ಲಿನಂತೆ ತೋರುವ ಸಣ್ಣ ವಸ್ತುವನ್ನು ಶಿಕ್ಷಕರ ಮೇಲೆ ಎಸೆಯಲು ಪ್ರಯತ್ನಿಸಿದ್ದಾನೆ. ಸದ್ಯ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ತರಗತಿಯಲ್ಲಿ ಗಮನ ಹರಿಸದ ಮತ್ತು ಇತರ ಮಕ್ಕಳೊಂದಿಗೆ ಜಗಳವಾಡುತ್ತಿದ್ದ ಏಳು ವರ್ಷದ ಮಗುವಿಗೆ ಸೀಟು ಬದಲಾಯಿಸುವಂತೆ ಶಿಕ್ಷಕಿ ಹೇಳಿದ್ದರು. ವಿದ್ಯಾರ್ಥಿ ಸೀಟು ಬದಲಾಯಿಸುತ್ತಿದ್ದಾಗ ಬಿದ್ದಿದ್ದಳು, ಆದ್ರೆ, ಮಗು ಮನೆಗೆ ತೆರಳಿ ಅಜ್ಜನಿಗೆ ಶಿಕ್ಷಕಿ ಥಳಿಸಿದ್ದಾಗಿ ತಿಳಿಸಿದ್ದಳು ಎಂದು ಅಧಿಕಾರಿಗಳು ಹೇಳುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News