ಹುಬ್ಬಳ್ಳಿ: ಮಂಗನಿಂದ ಮಾನವ ಅಂತೆವಿ... ಮಂಗನಾಟ ನೋಡಿದ್ರೆ ಇದಕ್ಕೆ ಕಣೀಕರನೇ ಇಲ್ವಾ ಅನ್ನೊದು ಸಹಜ... ಆದ್ರೆ ಈ ದೃಶ್ಯ ಮತ್ತು ಸಂಗತಿ ನೋಡಿದ್ರೆ... ಪ್ರತಿಯೊಬ್ಬರ ಕಣ್ಣಿನಲ್ಲೂ‌ ಕಣ್ಣೀರು ಬರುವುದು ಸಹಜ.... ಅಷ್ಟಕ್ಕೂ ಅದೇನಪ್ಪ ಸ್ಟೋರಿ ಅಂತಿರಾ ಇಲ್ಲಿದೆ ನೋಡಿ...


COMMERCIAL BREAK
SCROLL TO CONTINUE READING

ಹೌದು,,,,


ಒಬ್ಬ ತಾಯಿ ತನ್ನ ಮಗುವನ್ನು ಕಳೆದುಕೊಂಡಾಗ ಅದೆಷ್ಟೋ ಸಂಕಟ ಪಡುತ್ತಾಳೆ... ಅದೇ ರೀತಿ ಇಲ್ಲೊಂದು ಮಂಗ ತನ್ನ ಮಗುವನ್ನು ಕಳೆದುಕೊಂಡು ಅಷ್ಟೇ ರೋಧನೆ ಮಾಡುತ್ತಿದೆ. ಎಸ್...ವಿದ್ಯುತ್ ಸ್ಪರ್ಶದಿಂದ ಮರಿಮಂಗ ಸಾವನ್ನಪ್ಪಿದನ್ನು ಕಂಡು ತಾಯಿ ಮಂಗನ ರೋದನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಕಣ್ಣಂಚ್ಚಲ್ಲಿ ಕೂಡ ನೀರು ಜಿನುಗಿತು.


ಇದನ್ನೂ ಓದಿ: ಪಕ್ಕದ್ಮನೆ ಮಹಿಳೆ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದ ಕಾಮುಕನ ಬಂಧನ..!


ಇಂತಹ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ  ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ.  ದಿನಂಪ್ರತಿ ಗ್ರಾಮದಲ್ಲಿ ಮಂಗಗಳ ಹಿಂಡು ಪರಸ್ಪರ ಚಿನ್ನಾಟ ಆಡುತ್ತಾ , ಗೋಡೆ ಗೋಡೆಯಿಂದ ಜಿಗಿಯುತ್ತಿದ್ದವು. ಈ ವೇಳೆ ಮರಿ ಮಂಗ ಗೋಡೆಯಿಂದ ಗೋಡೆಗೆ ಜಿಗಿಯಲು ಹೋಗಿ ವಿದ್ಯುತ್ ಕಂಬದ ತಂತಿಗೆ ಸರ್ಶವಾಗಿದೆ. ಇದರಿಂದ ಕ್ಷಣಾರ್ಧದಲ್ಲೇ ನೆಲಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿತು. 


ಇದನ್ನೂ ಓದಿ: ವೇದಿಕೆ ಕಾರ್ಯಕ್ರಮ ತನಕ ರೋಡ್ ಶೋ ನಡೆಸಲಿರುವ ಸಿಎಂ ಸಿದ್ದರಾಮಯ್ಯ


ಇನ್ನು ಸತ್ತು ಮಂಗವನ್ನು ವಿಧಿ ಪ್ರಕಾರ ಶವಸಂಸ್ಕಾರ ಮಾಡಿದರಾಯಿತು ಎಂದುಕೊಂಡು ಗ್ರಾಮದ ಯುವಕರ ತಂಡ, ಅದನ್ನು ತಳ್ಳುಗಾಡಿಯಲ್ಲಿ ಹಾಕಿದ್ದರು. ಆದರೆ ಮಂಗ ತಾಯಿ ತನ್ನ ಮಗು ಸತ್ತು ಬಿದ್ದಿದ್ದನ್ನು ನೋಡಿ ಯುವಕರಿಗೆ ಹೆದರಿಸಿ ಸತ್ತು ಬಿದ್ದಿದ್ದ ಮಂಗನ ಶರೀರ ಅಲ್ಲಾಡಿಸಿ, ನೋಡಿದ ತಾಯಿ ಮಂಗಕ್ಕೆ ದುಃಖ ತಡೆದುಕೊಳ್ಳಲು ಆಗದೇ ಪ್ರಾರ್ಥಿವ ಶರೀರದ ಬಳಿ ಬಂದು ರೋಧಿಸಲು ಪ್ರಾರಂಭಿಸಿತು. ಕೊನೆಗೂ ಮರಿ ಮಂಗ ಏಳಲೇ ಇಲ್ಲ. ನಂತರ ಗ್ರಾಮಸ್ಥರು ಮಂಗನನ್ನು ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ಮಾಡಿದರು. ಈ ಮಂಗನ ದುಃಖ ನೋಡಿ‌ ಗ್ರಾಮಸ್ಥರು ಕಣ್ಣೀರು ತುಂಬಿಕೊಂಡರು.ಇದೊಂದು ನಿಜಕ್ಕೂ ಮಾನವೀಯ ಮಾಲ್ಯತೆಗೆ ಸಾಕ್ಷಿಯಾದ ಪ್ರಕರಣ ಎನ್ನಬಹುದು.