ಪಕ್ಕದ್ಮನೆ ಮಹಿಳೆ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದ ಕಾಮುಕನ ಬಂಧನ..!

ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವಾಗ ಸ್ನಾನಗೃಹದಲ್ಲಿ ಇಣುಕಿ ನೋಡುತ್ತಿದ್ದ ವಿಕೃತ ಮನಸ್ಥಿತಿಯ ಕಾಮುಕನನ್ನು ಮಾರತ್ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಮಧ್ಯಾಹ್ನ ದೂರುದಾರ ಮಹಿಳೆ ಸ್ನಾನ ಮಾಡುತ್ತಿದ್ದಾಗ ಆರೋಪಿಯು ಕಿಟಕಿಯಿಂದ ಇಣುಕಿ ನೋಡುತ್ತಿದ್ದ ಎನ್ನಲಾಗಿದೆ.

Written by - Krishna N K | Last Updated : Jun 11, 2023, 12:03 PM IST
  • ರಾಜಧಾನಿಯಲ್ಲಿ ಕಾಮುಕರ ದುರ್ವತನೆ ಎಲ್ಲೆ ಮೀರುತ್ತಿದೆ.
  • ಮೊನ್ನೆ ಯುವತಿಯ ಮೇಲೆ ಎರಗಿದ್ದ ಯುವಕರಿಬ್ಬರು ಪೊಲೀಸರ ಅತಿಥಿಗಳಾಗಿದ್ದರು.
  • ಈಗ ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವಾಗ ಇಣುಕಿ ನೋಡಿದ ಕಾಮುಕನ ಬಂಧನವಾಗಿದೆ.
ಪಕ್ಕದ್ಮನೆ ಮಹಿಳೆ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದ ಕಾಮುಕನ ಬಂಧನ..! title=

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಾಮುಕರ ದುರ್ವತನೆ ಎಲ್ಲೆ ಮೀರುತ್ತಿದೆ. ಮೊನ್ನೆ ಮೊನ್ನೆತಾನೇ ಯುವತಿಯ ಮೇಲೆ ಯುವಕರಿಬ್ಬರು ಎರಗಿ ಪೊಲೀಸರ ಅತಿಥಿಗಳಾಗಿದ್ದಾರೆ. ಈಗ ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವಾಗ ಸ್ನಾನಗೃಹದಲ್ಲಿ ಇಣುಕಿ ನೋಡುತ್ತಿದ್ದ ವಿಕೃತ ಮನಸ್ಥಿತಿಯ ಕಾಮುಕನನ್ನು ಮಾರತ್ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌.

ನಿತಿನ್ ಬಂಧಿತ ಆರೋಪಿಯಾಗಿದ್ದಾನೆ. ಜೂನ್ 9ರಂದು ಮಧ್ಯಾಹ್ನ 1.35ರ ಸುಮಾರಿಗೆ ಮಾರತ್ ಹಳ್ಳಿಯ ಮುನ್ನೇಕೊಳಲುನಲ್ಲಿ ಘಟನೆ ನಡೆದಿತ್ತು. ಮಹಿಳೆ ವಾಸವಿದ್ದ ಮನೆಯ ಪಕ್ಕದಲ್ಲಿಯೇ ಆರೋಪಿ ನಿತಿನ್ ವಾಸವಿದ್ದ. ಮಧ್ಯಾಹ್ನ ದೂರುದಾರ ಮಹಿಳೆ ಸ್ನಾನ ಮಾಡುತ್ತಿದ್ದಾಗ ಆರೋಪಿಯು ಕಿಟಕಿಯಿಂದ ಇಣುಕಿ ನೋಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಸಿನಿಮಾ ನಿರ್ಮಿಸಲು ಸಾಲ ಪಡೆದ ಸಹೋದರನಿಂದ ಕೊಲೆ ಬೆದರಿಕೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಕ ನಟ 

ಈ ವೇಳೆ ಆರೋಪಿ ನಿತಿನ್ ನನ್ನು ಕಂಡು ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಮಹಿಳೆ ಕೂಗಿಕೊಂಡಿದ್ದನ್ನು ಕೇಳಿದ ಆಕೆಯ ಕುಟುಂಬಸ್ಥರು ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮಾರತ್ ಹಳ್ಳಿ ಪೊಲೀಸರು ಆರೋಪಿ ನಿತೀನ್ ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News