video : ಬೈಕ್ ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಪ್ರೇಮಿಯನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಬೇರೊಂದು ವಾಹನದಲ್ಲಿ ಹೊರಟ ಪ್ರಿಯತಮೆ
Lovers Viral Video : ಪ್ರೇಮಿಗಳೆಂದರೆ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ. ಒಬ್ಬರ ಕಷ್ಟ ನೋಡಿ ಇನ್ನೊಬ್ಬರು ಸಹಿಸುವುದಿಲ್ಲ. ಕಷ್ಟ ಸುಖ ಏನೇ ಇರಲಿ ಜೊತೆಯಾಗಿರುತ್ತಾರೆ ಎನ್ನುವುದನ್ನು ಕತೆ, ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಕೆಲವು ಸಲ ವಾಸ್ತವ ಭಿನ್ನವಾಗಿರುತ್ತದೆ.
Lovers Viral Video : ಕಳೆದ ಎರಡು ದಿನಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಕಣ್ಣು ಹಾಯಿಸಿದಲ್ಲೆಲ್ಲಾ ನೀರು ತುಂಬಿಕೊಂಡಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಅದೆಷ್ಟೋ ಜನರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನು ಕೆಲವರ ವಾಹನಗಳು ನೀರಿನಲ್ಲಿ ಸಿಲುಕಿ ಮುಂದೆ ಹೋಗಲಾಗದೆ ಪರದಾಡುವಂತಾಗಿತ್ತು. ಇದೀಗ ಇಂಥದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ. ಆದರೆ ಇದು ಪ್ರೇಮಿಗಳಿಗೆ ಸಂಬಂಧಪಟ್ಟ ವಿಡಿಯೋ ಆಗಿದೆ.
ಪ್ರೇಮಿಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳನ್ನು ನಾವು ನೋಡುತ್ತಿರುತ್ತೇವೆ. ಪ್ರೇಮಿಗಳಿಗೆ ಸಂಬಂಧಪಟ್ಟ ಅನೇಕ ಕತೆಗಳನ್ನೂ ಕೇಳುತ್ತಿರುತ್ತೇವೆ. ಪ್ರೇಮಿಗಳೆಂದರೆ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ. ಒಬ್ಬರ ಕಷ್ಟ ನೋಡಿ ಇನ್ನೊಬ್ಬರು ಸಹಿಸುವುದಿಲ್ಲ. ಕಷ್ಟ ಸುಖ ಏನೇ ಇರಲಿ ಜೊತೆಯಾಗಿರುತ್ತಾರೆ ಎನ್ನುವುದನ್ನು ಕತೆ, ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಕೆಲವು ಸಲ ವಾಸ್ತವ ಭಿನ್ನವಾಗಿರುತ್ತದೆ. ಇಲ್ಲಿ ನಾನು ಎನ್ನುವುದು ಮೊದಲಾದರೂ ಆಶ್ಚರ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದರೆ ಇದು ಅರ್ಥವಾಗುತ್ತದೆ.
ಇದನ್ನೂ ಓದಿ : Viral Video : ಪ್ರೇಯಸಿ ಮದುವೆಗೆ ಬಂದ ಮಾಜಿ ಲವರ್ ಮಾಡಿದ್ದೇನು?
ಪ್ರೇಮಿಗಳಿಬ್ಬರು ಬೈಕ್ ನಲ್ಲಿ ಹೊರಟಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ, ರಸ್ತೆಯುದ್ದಕ್ಕೂ ಅಪಾರ ಪ್ರಮಾಣದ ನೀರು ಇರುವುದರಿಂದ ಬೈಕ್ ಅರ್ಧಕ್ಕೆ ನೀರಿನಲ್ಲಿ ಮುಂದೂ ಸಾಗದೆ ಹಿಂದೆಯೂ ಬಾರದೆ ಸಿಕ್ಕಿ ಹಾಕಿಕೊಳ್ಳುತ್ತದೆ. ಅಷ್ಟರಲ್ಲಿ ಅಲ್ಲಿ ಎದುರುಗಡೆಯಿಂದ ಒಂದು ವಾಹನ ಬರುತ್ತಿರುತ್ತದೆ. ಆ ವಾಹನವನ್ನು ಕಂಡ ತಕ್ಷಣ ಹುಡುಗಿ ಆ ವಾಹನವನ್ನೇರಿ ಬಂದು ಬಿಡುತ್ತಾಳೆ. ತೊಂದರೆಯಲ್ಲಿ ಸಿಲುಕಿರುವ ತನ್ನ ಹುಡುಗನನ್ನು ಅಲ್ಲಿಯೇ ಬಿಟ್ಟು ಹುಡುಗಿ ಹೊರಟು ಹೋಗುತ್ತಾಳೆ.
ಇದನ್ನೂ ಓದಿ : Viral Video : ಮದುಮಗನಾದ 102 ವರ್ಷದ ವೃದ್ಧ, ಬಾರಾತ್‌ನಲ್ಲಿ ಕಂಗೊಳಿಸಿದ್ದು ಹೀಗೆ
ಈ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ giedde and gieddee ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ನೆಟಿಜನ್‌ಗಳು ಈ ವಿಡಿಯೋಗೆ ತೀವ್ರ ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್
ಮಾಡಿ.