Couple Dancing On Road Side: ನೃತ್ಯವು ಯಾವುದೇ ಓರ್ವ ವ್ಯಕ್ತಿಯ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಅತ್ಯಂತ ವಿಶಿಷ್ಟವಾದ ಮಾರ್ಗವಾಗಿದೆ ಮತ್ತು ನೃತ್ಯ ಮಾಡಲು ತಿಳಿದಿರುವ ಯಾರಾದರೂ ತಮ್ಮ ಪ್ರತಿಭೆಯನ್ನು ಒಂದಲ್ಲ ಒಂದು ರೂಪದಲ್ಲಿ ತೋರಿಸುತ್ತಾರೆ. ಕೆಲವರು ನೃತ್ಯಕ್ಕಾಗಿ ವೇದಿಕೆಯನ್ನು ಬಯಸಿದರೆ, ಇನ್ನುಳಿದವರು ಡಿಜೆಗಾಗಿ ಬಂಬಾಟ್ ಹೆಜ್ಜೆ ಹಾಕುತ್ತಾರೆ. ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ಪ್ರತಿಭೆಗಳ ಜೋಡಿಯೊಂದು ನಿರ್ಜನ ನಡು ರಸ್ತೆಯಲ್ಲಿಯೇ ಬೀದಿ ದೀಪಗಳ ಸಹಾಯವನ್ನು ತೆಗೆದುಕೊಂಡ ತುಂಬಾ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕುತ್ತಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ತೀವ್ರವಾಗಿ ವೈರಲ್ ಆಗುತ್ತಿದೆ, ಇದರಲ್ಲಿ ಹುಡುಗ ಮತ್ತು ಹುಡುಗಿ ನಡು ರಸ್ತೆಯಲ್ಲಿಯೇ ನೃತ್ಯ ಮಾಡುತ್ತಿದ್ದಾರೆ ಮತ್ತು ಈ ಇಬ್ಬರ ನೃತ್ಯವನ್ನು ಗಮನಿಸಿದರೆ, ಇವರು ತರಬೇತಿ ಪಡೆದಿದ್ದಾರೆಯೇ? ಎನ್ನುವಷ್ಟು ಪರ್ಫೆಕ್ಟ್ ಆಗಿದೆ.
ನಿರ್ಜನ ರಸ್ತೆಯಲ್ಲಿ ಬಂಬಾಟ್ ನೃತ್ಯ ಮಾಡುವ ಮೂಲಕ ಭಾರಿ ಸಂಚಲನ
ಪ್ರೇರಣಾ ಮಹೇಶ್ವರಿ ಎಂಬ ಬಳಕೆದಾರರು ಈ ವಿಡಿಯೋವನ್ನು ತಮ್ಮ ಟ್ವಿಟರ್‌ನಲ್ಲಿ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ರಸ್ತೆಯ ಬೀದಿ ದೀಪಗಳ ಕೆಳಗೆ ಹುಡುಗ ಮತ್ತು ಹುಡುಗಿ ನೃತ್ಯ ಮಾಡುವುದನ್ನು ನೀವು ಕಾಣಬಹುದು. ಪ್ರಮುಖವಾಗಿ, ಅವರಿಬ್ಬರ ನಿರಾತಂಕದ ಶೈಲಿಯು ಯಾರೋ ಶೂಟ್ ಮಾಡುತ್ತಿದ್ದಾರೆ ಎಂಬ ಕಲ್ಪನೆಯೂ ಅವರಿಗೋಲ್ಲ ಎಂಬಂತೆ ತೋರುತ್ತದೆ. ಈ ವೀಡಿಯೋವನ್ನು ಛಾವಣಿ ಅಥವಾ ಯಾವುಆದರೊಂದು ಕಟ್ಟಡದಿಂದ ಚಿತ್ರೀಕರಿಸಲಾಗಿದೆ. ಅಲ್ಲಿಂದ ಕೆಳಗಿನ ರಸ್ತೆಯಲ್ಲಿ ಈ ಜೋಡಿ ಡ್ಯಾನ್ಸ್ ಮಾಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿ ... ಗೊತ್ತಾಗುತ್ತದೆ..
This ❤️🫶🏻 pic.twitter.com/msaur0JvyF
— Prerna Maheshwari (@prernadaga21) September 5, 2022
ಇದನ್ನೂ ಓದಿ-Video : ವ್ಹೀಲ್‌ಚೇರ್ ಮೇಲೆ ಫುಡ್ ಡೆಲಿವರಿ ಮಾಡುವ Swiggy Delivery Girl
ಇವರಿಬ್ಬರು ಯಾರು ಎಂಬುದರ ಗುರುತು ಇನ್ನೂ ಪತ್ತೆಯಾಗಿಲ್ಲ.ಆದರೆ ಇವರ ಡ್ಯಾನ್ಸ್ ನೋಡಿದ್ರೆ ಮಾತ್ರ, ಇವರು ತರಬೇತಿ ಪಡೆದ ಡಾನ್ಸರ್ ಗಳಿಗಿಂತ ಕಮ್ಮಿಯೇನಿಲ್ಲ ಎಂಬುದನ್ನು ನೀವೂ ಕೂಡ ಹೇಳಬಹುದು. ಇಬ್ಬರ ಡಾನ್ಸ್ ಮೂವ್ಮೆಂಟ್ಸ್ ಪರಿಪೂರ್ಣ ಸಿಂಕ್‌ನಲ್ಲಿವೆ ಮತ್ತು ಹಾಡಿನ ಟ್ಯೂನ್‌ಗೆ ನೃತ್ಯ ಮಾಡುವುದನ್ನು ಸಹ ಕಾಣಬಹುದು. ಸುಮಾರು 16 ಸೆಕೆಂಡ್ ಗಳ ಈ ವಿಡಿಯೋ 12 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಇದಲ್ಲದೆ, ವೀಡಿಯೊವನ್ನು 1500 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ ಮತ್ತು ಇದುವರೆಗೆ ಅದು ಸುಮಾರು 2.5 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಜೋಡಿಯ ನೃತ್ಯಕ್ಕೆ ಮನಸೋತ ಸಾಮಾಜಿಕ ಮಾಧ್ಯಮ ಬಳಕೆದಾರರು
ವೀಡಿಯೊ ಕುರಿತು ಬಂದ ಕಾಮೆಂಟ್ ಗಳ ಕುರಿತು ಹೇಳುವುದಾದರೆ, ಹೆಚ್ಚಿನ ಬಳಕೆದಾರರು ಇಬ್ಬರೂ ಯಾವುದಾದರೊಂದು ನೃತ್ಯ ಕ್ರಾರ್ಯಕ್ರಮಕ್ಕಾಗಿ ಅಭ್ಯಾಸ ನಡೆಸುತ್ತಿದ್ದಾರೆ ಮತ್ತು ಇದೇ ಕಾರಣಕ್ಕೆ ಅವರು ನೃತ್ಯದಲ್ಲಿ ಇಷ್ಟೊಂದು ಮುಳುಗಿಹೋಗಿದ್ದಾರೆ ಎಂದು ಬರೆದಿದ್ದಾರೆ. ಕೆಲವರು ಇದೊಂದು ಅದ್ಭುತ ಜೋಡಿ ಎಂದು ಹೇಳುತ್ತಿದ್ದರೆ, ಇನ್ನುಳಿದವರು ಸಹೋದರ ಸಹೋದರಿಯರ ಜೋಡಿ ಇದಾಗಿದೆ ಎಂದುಕೊಳ್ಳುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ಖಂಡಿತವಾಗಿಯೂ ಅವರ ನೃತ್ಯದ ಶೈಲಿಯ ಬಗ್ಗೆ ತುಂಬಾ ಕ್ರೇಜಿಯಾಗಿರುವುದು ಮಾತ್ರ ನಿಜ. ಅಂತರ್ಜಾಲದಲ್ಲಿ ಪ್ರಕಟಗೊಳ್ಳುವ ಇಂತಹ ಕೆಲವು ಟ್ವೀಟ್‌ಗಳು ನಿಮ್ಮ ಇಡೀ ದಿನವನ್ನೇ ಆಹ್ಲಾದಕರವಾಗಿಸುತ್ತವೆ ಮತ್ತು ನಿಮ್ಮಲ್ಲಿಯೂ ಸಹ ಅಂತಹ ಪ್ರತಿಭೆ ಇದ್ದರೆ ಅವರ ನೃತ್ಯವನ್ನು ನೋಡಿ, ನಿಮ್ಮ ಪಾದಗಳು ಕೂಡ ನಿಮಗೆ ಅರಿವಿಲ್ಲದಂತೆ ಹೆಜ್ಜೆ ಹಾಕಲು ಆರಂಭಿಸುತ್ತವೆ ಎಂಬುದು ನಿಜ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.