Viral Video: ರಾತ್ರಿಯಲ್ಲಿ ಆಕಾಶದಲ್ಲಿ ಹಠಾತ್ ನೀಲಿ ಬೆಳಕನ್ನು ನೀವು ಎಂದಾದರೂ ನೋಡಿದ್ದೀರಾ? ಇಂತಹ ಘಟನೆಗಳು ಅನೇಕ ಬಾರಿ ಸಂಭವಿಸುತ್ತವೆ ಆದರೆ ಎಲ್ಲರೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಇತ್ತೀಚೆಗಷ್ಟೆ ಮತ್ತೊಮ್ಮೆ ಇಂತಹ ಘಟನೆ ನಡೆದು ರಾತ್ರಿ ಆಕಾಶದಲ್ಲಿ ನೀಲಿ ಬಣ್ಣದ ಬೆಳಕು ಹರಿದಾಡುತ್ತಿದ್ದು ಕೆಲಕಾಲ ಕಪ್ಪು ಕವಿದಿದ್ದ ಬಾನು ನೀಲಿ ಬಣ್ಣದಲ್ಲಿ ಘೋಚರಿಸಿದೆ. ಈ  ಘಟನೆಯು ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ  ಸಂಭವಿಸಿದೆ.


COMMERCIAL BREAK
SCROLL TO CONTINUE READING

ಇಂತಹ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಕೆಲವು ಹೊಳೆಯುವ ವಸ್ತುವು ಆಕಾಶದಿಂದ ನೆಲದ ಕಡೆಗೆ ಬರುತ್ತಿರುವುದು ಕಂಡುಬಂದಿದೆ. ಇದು ಪ್ರಕಾಶಮಾನವಾದ ಬೆಳಕನ್ನು ಉತ್ಪಾದಿಸುತ್ತಿದ್ದು, ಈ ವಸ್ತು ಏನು ಎಂಬುದು ಎಲ್ಲರಲ್ಲೂ ಕತೂಹಲ ಹೆಚ್ಚಿಸಿದೆ. ಈ ವಸ್ತುವಿನಿಂದ ಹೊರಬಂದ ಬೆಳಕು ತುಂಬಾ ಪ್ರಕಾಶಮಾನವಾಗಿದ್ದು, ಈ ವಸ್ತು ಹಗಲಿನಂತೆ ಘೋಚರಿಸುತ್ತಿದೆ.   


ಇದನ್ನೂ ಓದಿ: Viral video: ದಾಹದಿಂದ ಬಂದ ಕಾಳಿಂಗ ಸರ್ಪಕ್ಕೆ ನೀರುಣಿಸಿದ ಭೂಪ..! ಮನುಷ್ಯನ ಸಹಾಯ ಮೆಚ್ಚಿ ದೈತ್ಯ ಸರ್ಪ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ


ಅನೇಕರು ಈ ಘಟನೆಯನ್ನು ತಮ್ಮ ಫೋನ್ ಮತ್ತು ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ಘಟನೆಗೆ  ಸ್ಪೇನ್ ಮತ್ತು ಪೋರ್ಚುಗಲ್‌ನ ಅನೇಕ ಪ್ರದೇಶಗಳಲ್ಲಿನ ಜನರು ಸಾಕ್ಷಿಯಾಗಿದ್ದಾರೆ. ಈ ಉಲ್ಕಾಶಿಲೆ ಎಲ್ಲಿ ಬಿದ್ದಿದೆ ಮತ್ತು ಅದರ ಪತನದಿಂದ ನೆಲದ ಮೇಲೆ ಏನಾದರೂ ಹಾನಿಯಾಗಿದೆಯೇ ಅಥವಾ ಇಲ್ಲವೇ ಮಾಹಿತಿ ಇಂದಿನ ವರೆಗೂ ಲಭ್ಯವಾಗಿಲ್ಲ. ಆದಾಗ್ಯೂ, ಉಲ್ಕಾಶಿಲೆ ನೋಡಿದ ನಂತರ ಜನರು ಆಶ್ಚರ್ಯಚಕಿತರಾದ ಅನೇಕ ವೀಡಿಯೊಗಳು ವೈರಲ್ ಆಗುತ್ತಿವೆ.


ಉಲ್ಕಾಶಿಲೆಗಳು ಬಾಹ್ಯಾಕಾಶ ಶಿಲೆಗಳು. ಅವು ಭೂಮಿಯ ಕಡೆಗೆ ಬಂದಾಗ, ವಾತಾವರಣದಲ್ಲಿ ಬಿಸಿಯಾದ ನಂತರವೇ ಉರಿಯಲು ಪ್ರಾರಂಭಿಸುತ್ತವೆ. ಇವು ಆಕಾಶಕ್ಕೆ ಬೀಳುವಾಗ ಬೆಳಕನ್ನು ಹೊತ್ತು ತರುತ್ತದೆ. ಸಾಮಾನ್ಯವಾಗಿ ಜನರು ಇದನ್ನು ಬೀಳುವ ನಕ್ಷತ್ರ ಎಂದೂ ಕರೆಯುತ್ತಾರೆ. ಕಲ್ಲಿನ ಉಲ್ಕೆಗಳು, ಕಬ್ಬಿಣದ ಉಲ್ಕೆಗಳು ಮತ್ತು ಕಲ್ಲು ಮತ್ತು ಕಬ್ಬಿಣದ ಉಲ್ಕೆಗಳಂತಹ ಹಲವಾರು ವಿಧದ ಉಲ್ಕೆಗಳಿವೆ.    


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.