Viral Video: ವಿಶ್ವದ ಅತ್ಯಂತ ವಿಷಕಾರಿ ಹಾವುಗಳಾದ ಕಿಂಗ್ ಕೋಬ್ರಾಗಳು, ಈ ಹಾವುಗಳು ಬೆಚ್ಚಗಿನ ಅಥವಾ ಮಳೆಯ ವಾತಾವರಣ ಇರುವ ಜಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಮರುಭೂಮಿಯಂತಹ ವಾತಾವರಣದಲ್ಲಿ ವಾಸಿಸಲು ಬಯಸುವ ಈ ಹಾವುಗಳಿಗೆ ಅಷ್ಟು ಸುಲಭವಾಗಿ ನೀರು ಸಿಗುವುದಿಲ್ಲ. ಇಂತಹದ್ದೆ ಪರಸ್ಥಿತಿಯಲ್ಲಿ ಸಿಲುಕಿದ್ದ ಹಾವಿಗೆ ಮುನುಷ್ಯನೊಬ್ಬ ಸಹಾಯ ಮಾಡಿದ್ದಾನೆ. ಹಾವಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾನೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾಗರಹಾವುಗಳನ್ನು ಸಾಮಾನ್ಯವಾಗಿ ಜನರು ಪೂಜಿಸುತ್ತಾರೆ ಏಕೆಂದರೆ ಅವುಗಳನ್ನು ಹಿಂದೂಗಳು ಪೂರ್ವಜರ ಆತ್ಮವನ್ನು ಹೊತ್ತವರು ಎಂದು ಪರಿಗಣಿಸುತ್ತಾರೆ. ಜನಪದ ಸಂಪ್ರದಾಯವು ಹಾವುಗಳು ತಾವು ಇರುವ ಪ್ರದೇಶವನ್ನು ರಕ್ಷಿಸುತ್ತದೆ ಎಂದು ಹೇಳುತ್ತದೆ. ಭಗವಾನ್ ಶಿವ ಭಕ್ತರು ಹಾವುಗಳನ್ನು ಪೂಜಿಸುತ್ತಾರೆ, ನಿರ್ದಿಷ್ಟವಾಗಿ ಕಿಂಗ್ ಕೋಬ್ರಾ, ಹಾವು ಯಾವಾಗಲೂ ದೇವರ ಕುತ್ತಿಗೆಗೆ ಸುತ್ತಿಕೊಂಡಿರುತ್ತದೆ.
ಹಾವುಗಳನ್ನು ದೇವರು ಎಂದು ಪೂಜಿಸುವ ಜನರು ಅವುಗಳು ಮನೆಯ ಬಳಿ ಬಂದರೆ ಭಯದಿಂದ ಅವುಗಳನ್ನು ಹೊಡೆದು ಕೊಲ್ಲುತ್ತಾರೆ ಆದರೆ, ದಾಹದಿಂದ ಮನೆಯ ಬಳಿ ಬಂದ ಹಾವಿಗೆ ಇಲ್ಲೊಬ್ಬ ವ್ಯಕ್ತಿ ನೀರುಣಿಸಿ ಮಾನವೀಯತೆ ಮೆರೆದಿದ್ದಾನೆ. ಇದು ಹಳೆಯ ವಿಡಿಯೋವಾಗಿದ್ದರೂ ಸಹ, ಮತ್ತೆ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಗರು ಈ ವ್ಯಕ್ತಿಯ ಸಾಹಸವನ್ನು ಮೆಚ್ಚಿ ಕೊಂಡಾಡಿದ್ದಾರೆ.
ಅಂದು ವಾತಾವರಣದ ಕಾರಣ ಹಾವು ಸಾಕಷ್ಟು ಬಿಸಿಯಾಗಿ ಬಾಯಾರಿಕೆಯಾಗಿದ್ದರಿಂದ ನೀರು ಅರಸಿ ವಸತಿ ಕಾಲೋನಿ ತಲುಪಿದೆ. ಸುತ್ತಲೂ ನೆರೆದಿದ್ದ ಜನರು ಆ ಹಾವನ್ನು ನೋಡಿ ಓಡಿ ಹೋಗುತ್ತಾರೆ. ಆದರೆ ಹಾವಿನ ಮನಸ್ಸನ್ನು ಅರಿತ ವ್ಯಕ್ತಿ ಒಬ್ಬ ಮುಂದೆ ಬರುತ್ತಾನೆ ಒಂದು ಬಕೆಟ್‌ನಲ್ಲಿ ನೀರನ್ನು ಹಿಡಿದು, ಹಾವಿಗೆ ಆ ನೀರನ್ನು ಕುಡಿಸಲು ಆರಂಭಿಸುತ್ತಾನೆ. ಹಾವು ಸಹ ಮನುಷ್ಯ ನೀರು ಕುಡಿಸುತ್ತಿದ್ದರೆ ಶಾಂತವಾಗಿ ನೀರು ಕುಡಿಯುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Summer time..
And who doesn’t like a nice head bath🙏Can be dangerous. Please don’t try. pic.twitter.com/ACJpJCPCUq
— Susanta Nanda (@susantananda3) May 24, 2020
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.