ಲವರ್ ಹುಟ್ಟುಹಬ್ಬಕ್ಕೆ Iphone ಗಿಫ್ಟ್ ನೀಡಲು, ತಾಯಿಯ..! ದೇಶವನ್ನೇ ಬೆಚ್ಚಿ ಬಿಳಿಸುತ್ತಿದೆ 9ನೇ ತರಗತಿ ವಿದ್ಯಾರ್ಥಿಯ ಕೃತ್ಯ
Viral news : ಈ ಪ್ರೀತಿ ಏನಾನನ್ನಾದರೂ ಮಾಡಿಸುತ್ತೆ ಅನ್ನೋದಕ್ಕೆ ಇಲ್ಲೋಂದು ಸ್ಪಷ್ಟ ಉದಾರಹಣೆ ಇದೆ. ದೆಹಲಿಯ 9ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಐಫೋನ್ ಖರೀದಿಸಲು ಮಾಡಿದ ಕೃತ್ಯ ದೇಶದ ಜನರ ಗಮನ ಸೆಳೆಯುತ್ತಿದೆ.. ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು..? ಬನ್ನಿ ನೋಡೋಣ..
ದೆಹಲಿ : ಪ್ರೀತಿಯಲ್ಲಿ ಬಿದ್ದವರಿಗೆ ಒಳ್ಳೆಯದು ಕೆಟ್ಟದ್ದು ಏನೂ ಕಾಣಲ್ಲ ಅಂತಾರಲ್ಲ.. ಹಾಗಯ್ತು ಈ ಬಾಲಕನ ಕಥೆ.. ಲವ್ ಮಾಡುವ ವಯಸ್ಸೇನು ಅಲ್ಲ, ಅದ್ರೂ ಪ್ರೇಮ ಪಾಶಕ್ಕೆ ಬಿದ್ದ 9ನೇ ತರಗತಿ ವಿದ್ಯಾರ್ಥಿ ತನ್ನ ಲವರ್ ಬರ್ತ್‌ಡೇಗೆ ಗಿಫ್ಟ್ ನೀಡಲು, ಮಾಡಿದ ಕೃತ್ಯ ಅವನಿಗೆ ಕಳ್ಳ ಎನ್ನುವ ಪಟ್ಟ ಕಟ್ಟಿದೆ..
ಹೌದು.. ಬಾಲಕನೊಬ್ಬ ತನ್ನ ಪ್ರೇಯಸಿಯ ಹುಟ್ಟು ಹಬ್ಬಕ್ಕೆ ಐಪೋನ್ ಗಿಫ್ಟ್ ಕೊಡಲು ತನ್ನ ತಾಯಿಯ ಚಿನ್ನಾಭರಣಗಳನ್ನು ಕದ್ದಿದ್ದಾನೆ.. ಈ ಘಟನೆ ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ನಡೆದಿದೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಹುಡುಗ ತನ್ನ ತಾಯಿಯಿಂದ ಐಫೋನ್ ಖರೀದಿಸಲು ಹಣವನ್ನು ಕೇಳಿದ್ದನಂತೆ. ಅವರು ನಿರಾಕರಿಸಿದಾಗ ಈ ಕೆಲಸ ಮಾಡಿದ್ದಾನೆ ಎಂದು ವರದಿಯಾಗಿದೆ..
ಇದನ್ನೂ ಓದಿ:ಪೆನ್ಸಿಲಿನ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು?
ತಂದೆಯ ಮರಣದ ನಂತರ ತಾಯಿ ಮನೆಯ ಭಾರ ಹೊತ್ತುಕೊಂಡಿದ್ದಳು. ಇಂತಹ ಪರಿಸ್ಥಿತಿಯಲ್ಲಿ ಐಫೋನ್ ಖರೀದಿಸಲು ಬಾಲಕ ಹಣ ಹೇಳಿದ್ದ.. ಅದಕ್ಕೆ ತಾಯಿ ನಿರಾಕರಿಸಿದ್ದರು.. ಇದರಿಂದ ಕೋಪಗೊಂಡು ತಾಯಿ ಚಿನ್ನದ ಸರ, ಕಿವಿಯೋಲೆ ಮತ್ತು ಉಂಗುರವನ್ನು ಕಳ್ಳತನ ಮಾಡಿದ್ದಾನೆ..
ಪೊಲೀಸರ ಎಫ್‌ಐಆರ್ ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮತ್ತು ತನಿಖೆ ನಂತರ ಮನೆಯಲ್ಲಿ ನಾಪತ್ತೆಯಾದ ಆಭರಣಗಳ ಹಿಂದೆ ಹೊರಗಿನವರ ಕೈವಾಡ ಇಲ್ಲದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.
ಇದನ್ನೂ ಓದಿ:ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಇನ್ನಿಲ್ಲ
ಅಲ್ಲದೆ, ಕಳ್ಳತನವಾಗಿರುವ ಬಗ್ಗೆ ವರದಿಯಾದ ಸ್ವಲ್ಪ ಹೊತ್ತಿನಲ್ಲೇ ವಿದ್ಯಾರ್ಥಿ ನಾಪತ್ತೆಯಾದಾಗ ಆತನ ಮೇಲೆ ಅನುಮಾನ ಮೂಡಿದೆ. ಈತ ಇತ್ತೀಚೆಗಷ್ಟೇ 50,000 ರೂಪಾಯಿ ಮೌಲ್ಯದ ಐಫೋನ್ ಖರೀದಿಸಿ, ತನ್ನ ತರಗತಿಯ ಹುಡುಗಿ ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಬುಧವಾರ ಸಂಜೆ ಬಾಲಕ ತನ್ನ ಮನೆಗೆ ಬಂದಾಗ ಬಂಧಿಸಿ, ಅವನಿಂದ ಐಫೋನ್ ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಅಂಕಿತ್ ಸಿಂಗ್, "ಆಗಸ್ಟ್ 3 ರಂದು, ಎರಡು ಚಿನ್ನದ ಸರಗಳು, ಒಂದು ಜೋಡಿ ಕಿವಿಯೋಲೆಗಳು ಮತ್ತು ಚಿನ್ನದ ಉಂಗುರಗಳು ನಾಪತ್ತೆಯಾಗಿರುವ ಬಗ್ಗೆ ದೂರು ಬಂತು. ಆಗಸ್ಟ್ 2 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ರ ನಡುವೆ ಕಳ್ಳತನ ಸಂಭವಿಸಿದೆ. ಐಪೋನ್ ಖರೀದಿಗೆ ಹಣ ನೀಡಲು ತನ್ನ ತಾಯಿ ನಿರಾಕರಿಸಿದ್ದಕ್ಕಾಗಿ ಅಸಮಾಧಾನಗೊಂಡ ಬಾಲಕ ಈ ಕೆಲಸ ಮಾಡಿದ್ದಾನೆ. ಸಧ್ಯ ತನಿಖೆ ನಡೆಯುತ್ತಿದೆ.. ಎಂದು ಮಾಹಿತಿ ನೀಡಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.