ಕಿಸ್ ಮಾಡಲು ತಡೆದಿದ್ದಕ್ಕೆ ಬಾಯ್ ಫ್ರೆಂಡ್ ನನ್ನು ಹಿಗ್ಗಾಮುಗ್ಗಾ ಥಳಿಸಿದ ಗರ್ಲ್ ಫ್ರೆಂಡ್... ವಿಡಿಯೋ ನೋಡಿ!
Boyfriend-Girlfriend Viral Video: ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ನಡುವೆ ಪ್ರೀತಿ ಮತ್ತು ಘರ್ಷಣೆ ಎರಡೂ ನಡೆಯುತ್ತಿರುವುದನ್ನು ನೀವು ನೋಡಬಹುದು. ವಿಡಿಯೋದಲ್ಲಿ ಹುಡುಗಿ ಪ್ರೀತಿಯಿಂದ ಹುಡುಗನಿಗೆ ಮುತ್ತು ಕೊಡುತ್ತಾಳೆ ಮತ್ತು ಈ ಪ್ರೀತಿ ಹಿಗ್ಗಾಮುಗ್ಗಾ ಥಳಿತದೊಂದಿಗೆ ಅಂತ್ಯವಾಗುತ್ತದೆ. (Viral News In Kannada)
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅನೇಕ ಬಾರಿ ಹೊರಹೊಮ್ಮುವ ಕೆಲ ವಿಡಿಯೋಗಳು ಜನರನ್ನು ಭಾರಿ ಯೋಚನೆಗೀಡು ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ, ರೋಮ್ಯಾನ್ಸ್ ನಿಂದ ತುಂಬಿದ ವೀಡಿಯೊ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ. ಆದರೆ ಜೋಡಿಯ ನಡುವಿನ ರಾಸಲೀಲೆ ನಂತರ ಜಗಳದೊಂದಿಗೆ ಅಂತ್ಯವಾಗುತ್ತದೆ, ಇದು ಜನರನ್ನು ಯೋಚಿಸುವಂತೆ ಮಾಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು. ವಿಡಿಯೋ ವ್ಯಾಪಕವಾಗಿ ಶೇರ್ ಆಗುತ್ತಿದೆ. (Viral News In Kannada)
ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ದಂಪತಿ ನಡುವೆ ಪ್ರೀತಿ ಮತ್ತು ಘರ್ಷಣೆ ಎರಡನ್ನೂ ಕಾಣಬಹುದು. ವಿಡಿಯೋದಲ್ಲಿ ಹುಡುಗಿ ಪ್ರೀತಿಯಿಂದ ಹುಡುಗನಿಗೆ ಮುತ್ತು ಕೊಟ್ಟು ಕಪಾಳಮೋಕ್ಷ ಮಾಡುತ್ತಾಳೆ. ವಾಸ್ತವದಲ್ಲಿ, ಇಬ್ಬರೂ ಕೂಡಿದ ಮತ್ತಿನಲ್ಲಿದ್ದಾರೆ. ಹುಡುಗಿ ತನ್ನ ಕೈಯಲ್ಲಿ ಮದ್ಯದ ಬಾಟಲಿಯೊಂದಿಗೆ ಹುಡುಗನನ್ನು ಬಾತ್ರೂಮ್ಗೆ ಎಳೆದುಕೊಂಡು ಬರುತ್ತಾಳೆ.ಮೊದಲು ಇಬ್ಬರ ನಡುವೆ ಮುತ್ತಿನ ಸರಸ ನಡೆಯುತ್ತದೆ. ಆದರೆ ನಂತರ ಹುಡುಗಿ ಇದ್ದಕ್ಕಿದ್ದಂತೆ ಕೋಪಗೊಳ್ಳುತ್ತಾಳೆ ಎಂಬುದನ್ನು ನೀವು ನೋಡಬಹುದು.
ಇದನ್ನೂ ಓದಿ-ಶೋಕ ಸಭೆಯಾಗಿ ಮಾರ್ಪಟ್ಟ ಮದುವೆ ಸಮಾರಂಭ, ಮದುವೆಯ ವೇಳೆಯೇ ವರನಿಗೆ ಹೃದಯಾಘಾತ, ಸ್ಥಳದಲ್ಲೇ ಸಾವು!
ಕೆಲವೇ ಕ್ಷಣಗಳಲ್ಲಿ ಹುಡುಗ ಹುಡುಗಿಯನ್ನು ದೂರಕ್ಕೆ ತಳ್ಳಿ ರೇಗಾಡಲು ಆರಂಭಿಸುತ್ತಾನೆ. ಇದರ ಬಳಿಕ ಹುಡುಗಿಯ ಪಿತ್ತ ಕೂಡ ನೆತ್ತಿಗೇರಿ ಹುಡುಗನಿಗೆ ಭಾರಿ ಕಪಾಳಮೋಕ್ಷ ಮಾಡುತ್ತಾಳೆ. ಎರಡು ಅಥವಾ ಮೂರು ಬಾರಿ ಹೊಡೆದ ನಂತರ ಹುಡುಗಿ ಮತ್ತೆ ಹುಡುಗನಿಗೆ ಚುಂಬಿಸಲು ಮುಂದಾಗುತ್ತಾಳೆ. ಹುಡುಗ ಮತ್ತೊಮ್ಮೆ ಆಕೆಯನ್ನು ದೂರಕ್ಕೆ ತಳ್ಳಿ ರೇಗಾಡುತ್ತಾನೆ. ಇದಾದ ಬಳಿಕ ಹುಡುಗಿ ಹುಡುಗನ ಕೂದಲು ಹಿಡಿದು ಎಳೆದಾಡಿ ಕೆಳಕ್ಕೆ ಬೀಳಿಸಿ ಹಿಗ್ಗಾಮುಗ್ಗಾ ಒದೆತ ಕೊಡುತ್ತಾಳೆ ಇದರ ನಂತರ ಅವಳು ಮದ್ಯದ ಬಾಟಲಿಯೊಂದಿಗೆ ಹೊರಗೆ ಹೋಗುತ್ತಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಜನರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರೆ, 'ಪ್ರೀತಿ ಹೇಗೆ ಹಿಂಸೆಗೆ ತಿರುಗಿದೆ, ಏನಾಗಿರಬಹುದು' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು - ಇದು ನಿಜವಾದ ಪ್ರೀತಿ ಅಲ್ಲ.' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ-ಹಣೆಯಿಂದ ತೆಂಗಿನ ಕಾಯಿ ಒಡೆದು ವಧು-ವರರಿಗೆ ಎಳನೀರು ಕೂಡಿಸಿದ ಬಾಹುಬಲಿ... ವಿಡಿಯೋ ನೋಡಿ!
ವೈರಲ್ ಆಗುತ್ತಿರುವ ವೀಡಿಯೋ ಇಲ್ಲಿದೆ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ