ಶೋಕ ಸಭೆಯಾಗಿ ಮಾರ್ಪಟ್ಟ ಮದುವೆ ಸಮಾರಂಭ, ಮದುವೆಯ ವೇಳೆಯೇ ವರನಿಗೆ ಹೃದಯಾಘಾತ, ಸ್ಥಳದಲ್ಲೇ ಸಾವು!

Shocking Video: ಈ ವಿಡಿಯೋದಲ್ಲಿ ವಧು-ವರರು ಒಟ್ಟಿಗೆ ಕುಳಿತಿರುವುದನ್ನು ನೀವು ನೋಡಬಹುದು. ಅವರ ಸುತ್ತ ಕುಟುಂಬಸ್ಥರೂ ಕುಳಿತಿದ್ದಾರೆ. ಆಗ ಇದ್ದಕ್ಕಿದ್ದಂತೆ ವರನಿಗೆ ಹೃದಯಾಘಾತವಾಗುತ್ತದೆ ಮತ್ತು ಆತ ಸ್ಥಳದಲ್ಲಿಯೇ ಸಾವನ್ನಪ್ಪುತ್ತಾನೆ. (Viral News In Kannada)  

Written by - Nitin Tabib | Last Updated : Dec 20, 2023, 04:47 PM IST
  • ವೈರಲ್ ಆಗಿರುವ ವೀಡಿಯೋ ನೋಡಿದ ಜನರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ,
  • 'ಇದನ್ನು ನೋಡಿ ತುಂಬಾ ದುಃಖವಾಯಿತು' ಎಂದು ಬರೆದಿದ್ದಾರೆ.
  • ಇನ್ನೊಬ್ಬ ಬಳಕೆದಾರರು 'ನಂಬುವುದು ಕಷ್ಟ' ಎಂದು ಬರೆದರೆ, ಮತ್ತೊಬ್ಬ ಬಳಕೆದಾರರು 'ತುಂಬಾ ದುಃಖದ ಘಟನೆ' ಎಂದು ಬರೆದಿದ್ದಾರೆ.
ಶೋಕ ಸಭೆಯಾಗಿ ಮಾರ್ಪಟ್ಟ ಮದುವೆ ಸಮಾರಂಭ, ಮದುವೆಯ ವೇಳೆಯೇ ವರನಿಗೆ ಹೃದಯಾಘಾತ, ಸ್ಥಳದಲ್ಲೇ ಸಾವು! title=

ಪಾಕಿಸ್ತಾನ: ಹೃದಯಾಘಾತಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೆಲವೆಡೆ ನೃತ್ಯ ಮಾಡುವಾಗ ಹೃದಯಾಘಾತವಾದರೆ ಇನ್ನು ಕೆಲವೆಡೆ ಜಿಮ್‌ನಲ್ಲಿ ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿವೆ. ಈ ನಡುವೆ ಪಾಕಿಸ್ತಾನದ ವಿಡಿಯೋ ಒಂದು ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ಸಿಯಾಲ್‌ಕೋಟ್‌ನಲ್ಲಿ ನಡೆದ ಮದುವೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಜಿಯೋ ನ್ಯೂಸ್ ಪ್ರಕಾರ, ವೀಡಿಯೊ ಸಿಯಾಲ್‌ಕೋಟ್‌ನ ದಸ್ಕಾ ತಹಸಿಲ್‌ನಿಂದ ಬಂದಿದೆ. ವಿಡಿಯೋದಲ್ಲಿ ವಧು-ವರರು ಒಟ್ಟಿಗೆ ಕುಳಿತಿದ್ದಾರೆ. ಕುಟುಂಬದಲ್ಲಿ ಎಲ್ಲರೂ ತುಂಬಾ ಸಂತಸದ ವಾತಾವರಣದಲ್ಲಿದ್ದಾರೆ, ನಂತರ ಅವರ ಎಲ್ಲಾ ಸಂತೋಷವು ಇದ್ದಕ್ಕಿದ್ದಂತೆ ಶೋಕಕ್ಕೆ ಬದಲಾಗುತ್ತದೆ. (Viral News In Kannada)

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು-ವರರು ಒಟ್ಟಿಗೆ ಕುಳಿತಿರುವುದನ್ನು ನೀವು ನೋಡಬಹುದು. ಅವರ ಸುತ್ತ ಕುಟುಂಬಸ್ಥರೂ ಕುಳಿತಿದ್ದಾರೆ. ಆಗ ಇದ್ದಕ್ಕಿದ್ದಂತೆ ವರನಿಗೆ ಹೃದಯಾಘಾತ ಸಂಭವಿಸಿದೆ ಮತ್ತು ಆತ ತನ್ನ ಮುಂದೆ ಇರುವ ಮೇಜಿನ ಮೇಲೆ ಕುಸಿದು ಬೀಳುತ್ತಾನೆ. ಇದಾದ ನಂತರ ಎಲ್ಲರೂ ಅವನನ್ನು ಎತ್ತಲು ಪ್ರಯತ್ನಿಸುತ್ತಾರೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @MeAamAdmi ಎಂಬ ಬಳಕೆದಾರರಿಂದ ಹಂಚಿಕೊಳ್ಳಲಾಗಿದೆ. ಇದುವರೆಗೆ 3 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ವೀಡಿಯೊವನ್ನು ನೋಡಿದ ನಂತರ, ಜನರು ಸಾಕಷ್ಟು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅದನ್ನು ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ, ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ. ಜನರು ಕೂಡ ಈ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ.

ಇದನ್ನೂ ಓದಿ-ಹಣೆಯಿಂದ ತೆಂಗಿನ ಕಾಯಿ ಒಡೆದು ವಧು-ವರರಿಗೆ ಎಳನೀರು ಕೂಡಿಸಿದ ಬಾಹುಬಲಿ... ವಿಡಿಯೋ ನೋಡಿ!

ಜನರ ಪ್ರತಿಕ್ರಿಯೆ ಇಲ್ಲಿದೆ
ವೈರಲ್ ಆಗಿರುವ ವೀಡಿಯೋ ನೋಡಿದ ಜನರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಇದನ್ನು ನೋಡಿ ತುಂಬಾ ದುಃಖವಾಯಿತು' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು 'ನಂಬುವುದು ಕಷ್ಟ' ಎಂದು ಬರೆದರೆ, ಮತ್ತೊಬ್ಬ ಬಳಕೆದಾರರು 'ತುಂಬಾ ದುಃಖದ ಘಟನೆ' ಎಂದು ಬರೆದಿದ್ದಾರೆ.

ಇದನ್ನೂ ಓದಿ-'ನಾನು ಬೇರೊಬ್ಬನನ್ನು ಪ್ರೀತಿಸುತ್ತೇನೆ...' ಸಾರ್ವಜನಿಕರ ಏದುರೇ ಮದುವೆಯಾಗಲು ನಿರಾಕರಿಸಿದ ವಧು.. ವಿಡಿಯೋ ನೋಡಿ!

ಇಲ್ಲಿದೆ ಆ ಆಘಾತಕಾರಿ ವೈರಲ್ ವಿಡಿಯೋವನ್ನು

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News