ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಬಾಯ್ ಫ್ರೆಂಡ್ ಹಾಗೂ ಗರ್ಲ್ ಫ್ರೆಂಡ್ ಗೆ ಸಂಬಧಿಸಿದ ವಿಡಿಯೋ ಇದೀಗ ಭಾರಿ ಮೈಲೆಜ್ ಪಡೆದುಕೊಳ್ಳುತ್ತಿದೆ. ಈ ವಿಡಿಯೋದಲ್ಲಿ ಪೋರಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಗೆ ತನ್ನ ವಿರುದ್ಧ ಪಂಜಾ ಪಂದ್ಯವಾಡಲು ಹಟಕ್ಕೆ ಬಿದ್ದು ಆಹ್ವಾನಿಸುತ್ತಾಳೆ. ಆದರೆ, ಆಕೆಯ ಹಟ ಆಕೆಗೆ ನೀಡಿದ ಶಿಕ್ಷೆ ಆಕೆ ಜೀವನದಲ್ಲೇ ಮರೆಯದ ಪಾಠ ಕಲಿಸಿದೆ. ಅಷ್ಟೇ ಅಲ್ಲ ಆಕೆಯ ಹಟ ಆಕೆಗೆ ದೀರ್ಘಕಾಲದವರೆಗೆ ಆಸ್ಪತ್ರೆಯಲ್ಲಿ ಕಾಲ ಕಳೆಯುವಂತೆ ಮಾಡಿದೆ. ಪ್ರೇಮಿಯ ಜೊತೆಗೆ ಹಟಕ್ಕೆ ಬಿದ್ದು ಪಂಜಾಗಿಳಿದ ಈ ಯುವತಿಯ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದುವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನಟ್ಟಿಗರು ಈ ವಿಡಿಯೋಗೇ ತನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ (Viral News In Kannada). 


COMMERCIAL BREAK
SCROLL TO CONTINUE READING

ಬಾಯ್ ಫ್ರೆಂಡ್ ಜೊತೆ ಪಂಜಾಗಿಳಿದ ಪೋರಿ
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಜೋಡಿಯೊಂದು ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬರುತ್ತದೆ. ಆದರೆ ಯುವತಿಯ ಬಾಯ್ ಫ್ರೆಂಡ್ ಬಾಡಿ ಬಿಲ್ಡರ್ ಆಗಿರಬೇಕು ಎಂಬಂತೆ ತೋರುತ್ತಿದೆ. ಆತನ ಬಾಡಿ ನೋಡಿ ಪ್ರೇಯಸಿ ತುಂಬಾ ಖುಷಿಪಡುತ್ತಿದ್ದಾಳೆ ಎಂಬಂತೆ ತೋರುತ್ತಿದೆ. ಏತನ್ಮಧ್ಯೆ ಆಕೆ ಬಾಯ್ ಫ್ರೆಂಡ್ ಗೆ ತನ್ನೊಂದಿಗೆ ಪಂಜಾ ನಡೆಸುವಂತೆ ಹಟ ಮಾಡುತ್ತಾಳೆ. ಆಕೆಯ ಈ ಹಟ ಆಕೆಯ ಜೀವನವನ್ನೇ ಬದಲಾಯಿಸಲಿದೆ ಎಂಬುದು ಬಹುಶ ಆಕೆ ಊಹಿಸಿರಲಿಲ್ಲವೇನೋ. ಮೊದಮೊದಲಿಗೆ ಬಾಯ್ ಫ್ರೆಂಡ್ ಆಕೆಯ ಆಸೆಯನ್ನು ನಿರಾಕರಿಸುತ್ತಾನೆ. ಆದರೆ ಆಕೆ ಕೇಳುವುದಿಲ್ಲ ಮತ್ತು ಹಟಕ್ಕೆ ಬೀಳುತ್ತಾಳೆ. ಆಕೆ ಪಂಜಾಗಾಗಿ ತನ್ನ ಕೈಯನ್ನು ಚಾಚುತ್ತಾಳೆ. ಆಕೆಯ ಹಟಕ್ಕೆ ಮಣಿದ ಪ್ರೇಮಿ ಕೂಡ ತನ್ನ ಕೈ ಚಾಚುತ್ತಾನೆ. 
ಕೈ ಮೂಳೆಯೇ ಮುರಿಯುತ್ತದೆ


ಇದನ್ನೂ ಓದಿ-Viral Video: ಯಾವುದೇ ಸುರಕ್ಷತೆ ಇಲ್ಲದೆ ಟ್ರಾನ್ಸ್ಫಾರ್ಮರ್ ಗೆ ತಂತಿ ಜೋಡಿಸಿದ ಹುಡುಗ, ನೋಡಿ ದಂಗಾದ ನೆಟ್ಟಿಗರು!

ಇಬ್ಬರು ಪಂಜಾ ಪಂದ್ಯವಾಡಲು ಸಂಪೂರ್ಣ ಸಿದ್ಧರಾಗಿರುವುದನ್ನು ನೀವು ವಿಡಿಯೋದಲ್ಲಿ ಮುಂದಕ್ಕೆ ಗಮನಿಸುವಿರಿ. ಈಗ ಪಂದ್ಯವನ್ನು ಗೆಲ್ಲಲು ಹುಡುಗಿ ಒತ್ತಡವನ್ನು ಹಾಕುತ್ತಾಳೆ. ಆದರೆ, ಬಾಯ್ ಫ್ರೆಂಡ್ ಕೈ ಕಿಂಚಿತ್ತು ಅಲುಗಾಡುವುದಿಲ್ಲ. ಇದೀಗ ಬಾಯ್ ಫ್ರೆಂಡ್ ಒತ್ತಡ ಹಾಕಲು ಆರಂಭಿಸುತ್ತಾನೆ ಮತ್ತು ಎದೆ ಒಂದು ಕ್ಷಣ ಝಲ್ ಎನ್ನುವ ದೃಶ್ಯ ಕಣ್ಮುಂದೆ ಬರುತ್ತದೆ. ವಾಸ್ತವದಲ್ಲಿ ಪ್ರೇಮಿ ಒತ್ತಡಕ್ಕೆ ಯುವತಿಯ ಕೈ ಮೂಳೆಯೇ ಮುರಿಯುತ್ತದೆ. ಜೋರಾಗಿ ಮೂಳೆ ಮುರಿಯುವ ಸದ್ದನ್ನು ಕೂಡ ನೀವು ಕೇಳಬಹುದು. ಕೈ ಮೂಳೆ ಮುರಿಯುತ್ತಲೆ ಹುಡುಗಿಗೆ ಬುದ್ಧಿ ಬರುತ್ತದೆ. 


ಇದನ್ನೂ ಓದಿ-Viral Video: ಹಸಿವಾದಾಗ ಮಮ್ಮಿ ಹತ್ರ ಎಷ್ಟು ಮುದ್ದಾಗಿ ಆಹಾರ ಕೇಳುತ್ತಿದೆ ಈ ಗಿಳಿ ನೀವೇ ನೋಡಿ!

ಪ್ರೇಯಸಿಯ ಕೈಮೂಳೆ ಮುರಿದ ಕಾರಣ ಬಡಪಾಯಿ ಪ್ರೇಮಿ ಕೂಡ ಕಕ್ಕಾಬಿಕ್ಕಿಯಾಗುತ್ತಾನೆ. ತಕ್ಷಣವೇ ಆತ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ತಾನು ಮಾಡಿದ ದೊಡ್ಡ ತಪ್ಪು ಏನು ಎಂಬುದು ಇದೀಗ ಯುವತಿಗೂ ಅರ್ಥವಾಗಿರಬೇಕು. ಬಾಯ್ ಫ್ರೆಂಡ್-ಗರ್ಲ್ ಫ್ರೆಂಡ್ ಕುರಿತಾದ ಈ ವಿಡಿಯೋವನ್ನು dehset_videolr201 ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ, 


ವಿಡಿಯೋ ನೋಡಿ..



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ