Wedding Viral Video : ಇದೀಗ ಮದುವೆಯ ಸೀಸನ್ ನಡೆಯುತ್ತಿದೆ. ಮದುವೆಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅಂಥದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ವೀಕ್ಷಕರು ಬೆಚ್ಚಿ ಬೀಳುವಂತಾಗಿದೆ. ಯಾಕೆಂದರೆ ಈ ವಿಡಿಯೋ ನೋಡಿವಾಗ ಇದು ನಿಜವಾಗಿಯೂ ಮದುವೆಯ ವಿಡಿಯೋನಾ ಅಥವಾ ಯಾವುದಾದರೂ ಕಬ್ಬಡ್ಡಿ ಆಟನಾ ಎಂದೆನಿಸುತ್ತಿದೆ. 


COMMERCIAL BREAK
SCROLL TO CONTINUE READING

ಮದುವೆ ಎಂದ ಕೂಡಲೇ ಸಾಮಾನ್ಯವಾಗಿ ಅಲ್ಲಿ ವಧು ವರರ ಮುಖದಲ್ಲಿ ನಗು ಕಂಡು ಬರುವುದು ಹೆಚ್ಚು. ಇನ್ನು ವಧು ಎಂದರೆ ನಯ, ನಾಜೂಕು , ವಿನಯ ಅನ್ನುವುದು ಸಾಮಾನ್ಯವಾಗಿ ಕಣ್ಣ ಮುಂದೆ ಬರುವ ದೃಶ್ಯ.  ಆದರೆ ಇಲ್ಲಿ ಕಂಡು ಬಂದ ದೃಶ್ಯ ಮಾತ್ರ ತದ್ವಿರುದ್ದ. 


ಇದನ್ನೂ ಓದಿ :Trending Video : ಚಲಿಸುವ ರೈಲಿನಲ್ಲಿಯೇ ರೊಮ್ಯಾನ್ಸ್‌.. ಪ್ರಾಣ ಪಣಕ್ಕಿಟ್ಟು ಇದೆಲ್ಲಾ ಮಾಡಬೇಕಾ?


ಈ ವಿಡಿಯೋದಲ್ಲಿ ಮದುವೆ ಶಾಸ್ತ್ರ ನಡೆಯುತ್ತಿರುವುದನ್ನು ಗಮನಿಸಬಹುದು. ಶಾಸ್ತ್ರ ನಡೆಯುತ್ತಿರುವ ಮಧ್ಯೆ ವರ ವಧುವಿನ ಕೆನ್ನೆಯನ್ನು ಸವರಿದ್ದಾನೆ. ಇಲ್ಲಿ ಇರುವ ನೆಪ ಇಷ್ಟೇ. ವಧುವಿಗೆ ಅದೇನನಿಸಿತೋ ಗೊತ್ತಿಲ್ಲ. ವರನ ಕೆನ್ನೆಗೆ ಬಾರಿಸಿ ಬಿಡುತ್ತಾಳೆ. ಇಲ್ಲಿ ವಧು ಒಮ್ಮೆ ಬಾರಿಸಿ ಸುಮ್ಮನಿರುವುದಿಲ್ಲ. ಒಂದೇ ಸಮನೆ ಹೊಡೆಯುವುದಕ್ಕೆ  ಆರಂಭಿಸಿ ಬಿಡುತ್ತಾಳೆ. ಅಷ್ಟೂ ಜನರ ಮುಂದೆ ವಧು ಹೀಗೆ ವರ್ತಿಸಬೇಕಾದರೆ ವರ ಸುಮ್ಮನಿರುತ್ತಾನೆಯೇ? ಅವನೂ ಕೂಡಾ ಶುರು ಮಾಡಿ ಬಿಡುತ್ತಾನೆ. ಒಟ್ಟಿನಲ್ಲಿ ಮದುವೆ ಮಂಟಪದಲ್ಲಿಯೇ ಉರುಳಾಡಿ ಹೊರಳಾಡಿ ಹೊಡೆದಾಡಿಕೊಳ್ಳುತ್ತಾರೆ ವಧು ಮತ್ತು ವರ. 


ವಧು - ವರರ ಹೊಡೆದಾಟದ ವಿಡಿಯೋ ಇಲ್ಲಿದೆ. 


 



ಇದನ್ನೂ ಓದಿ : Viral Video: ಹೋಳಿ ಗುಂಗಿನಲ್ಲಿ ಹಾಡುಹಗಲೇ ಹದ್ದು ಮೀರಿದ ಹುಡುಗ-ಹುಡುಗಿ, ಚಲಿಸುತ್ತಿರುವ ಬುಲೆಟ್ ಮೇಲೆಯೇ...!


ಮನೆ ಮಂದಿ ಎಷ್ಟು ಪ್ರಯತ್ನ ಪಟ್ಟರೂ ಇಬ್ಬರನ್ನೂ ಸಂಭಾಳಿಸುವುದು ಸಾಧ್ಯವಾಗುವುದಿಲ್ಲ. ವಧು-ವರರು ಹೀಗೆ ಬಡಿದಾಡಿಕೊಳ್ಳುತ್ತಿರುವ  ವೀಡಿಯೊವನ್ನು thegushti ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಕ್ಲಿಪ್ ನೇಪಾಳಿ ಜೋಡಿಯ ಮದುವೆಯದ್ದಾಗಿದೆ. ಈ ಜೋಡಿ ಎಲ್ಲಿಯದ್ದೇ ಆಗಲಿ ಮದುವೆ  ದಿನವೇ ಈ ರೀತಿ ನಡೆದುಕೊಂಡಿದೆ. ಇನ್ನು ಇಡೀ ಜೀವನ ಹೇಗೆ ಎನ್ನುವುದೇ ಈ ವಿಡಿಯೋ  ನೋಡಿದವರ ಪ್ರಶ್ನೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.