Wedding Viral Video : ಮದುವೆ ಅಂದ ಕೂಡಲೇ ತನ್ನ ಜೀವನದಲ್ಲಿ ಬರುವ ಸಂಗಾತಿ ಹೀಗೆ ಇರಬೇಕು ಎನ್ನುವ ಚಿತ್ರ ಪ್ರತಿಯೊಬ್ಬರ ಮನದಲ್ಲೂ ಮೂಡುತ್ತದೆ. ಮನದಲ್ಲಿ ಮೂಡುವ ಆಸೆ ನೆರೆವೇರುತ್ತದೆಯೋ , ಇಲ್ಲವೋ ಅದು ಬೇರೆ ವಿಷಯ. ಆದರೆ ಆಸೆ ಚಿಗುರೊಡೆಯುವುದು ಮಾತ್ರ ಸುಳ್ಳಲ್ಲ. ಯಾವುದೇ ಹೆಣ್ಣಿನ ಬಳಿ ನಿನಗೆಂಥಾ ಸಂಗಾತಿ ಬೇಕು ಎಂದು ಪ್ರಶ್ನಿಸಿದರೆ ಸಿಗುವ ಮೊದಲ ಉತ್ತರ ಎಲ್ಲಾ ಸಂದರ್ಭಗಳಲ್ಲಿಯೂ ಕೈ ಹಿಡಿದು ಕಾಪಾಡಬೇಕು ಎನ್ನುವಂಥದ್ದು.
ಹೌದು, ನೋಟ, ಹಣ, ಆಸ್ತಿ, ಇವೆನೇ ಇರಲಿ ಕಷ್ಟವನ್ನು ನಿಮ್ಮ ಬಳಿಯೂ ಸುಳಿಯಲು ಬಿಡದೇ ಕಾಪಾಡುವ ಗುಣವೇ ನಿಜಕ್ಕೂ ಶ್ರೇಷ್ಠ. ಇಲ್ಲೊಂದು ಮದುವೆ ದಿನವೇ ವರ ಜೀವನದಲ್ಲಿ ಏನೇ ಆದರೂ ತನ್ನ ಪತ್ನಿಯನ್ನು ಬಿಡದೇ ಕಾಯುತ್ತೇನೆ ಎನ್ನುವುದನ್ನು ನಿರೂಪಿಸಿ ಬಿಟ್ಟಿದ್ದಾನೆ. ಮದುವೆಯ ವೇಳೆ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ : Viral vidoe : 20 ಅಡಿ ಉದ್ದದ ಹೆಬ್ಬಾವಿಗೆ ನದಿಯಲ್ಲೇ ನಡೆಯಿತು ಪರೀಕ್ಷೆ !
ಮದುವೆಯ ವೇದಿಕೆಯಿಂದ ವಧುವನ್ನು ಎತ್ತಿಕೊಂಡು ವರ ಕೆಳಗಿಳಿದು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ವರ ಕಾಲು ಜಾರಿ ಬೀಳುತ್ತಾನೆ. ಬಿದ್ದ ರಭಸಕ್ಕೆ ವರನ ಬೆನ್ನಿಗೆ ಏಟು ಕೂಡಾ ಆಗಿದೆ ಎನ್ನುವುದನ್ನು ಬಿದ್ದ ರಭಸದಿಂದಲೇ ತಿಳಿಯುತ್ತದೆ. ಆದರೆ, ವರ ತಪ್ಪಿಯೂ ವಧುವನ್ನು ಕೆಳಗೆ ಬಿಡುವುದಿಲ್ಲ. ಅಲ್ಲದೆ ಮತ್ತೆ ವಧುವಿನ ಕೆನ್ನೆಗೆ ಮುತ್ತು ನೀಡಿ ತನಗೆ ಏನೂ ಆಗಿಲ್ಲ ಎಂದು ಸಂತೈಸುತ್ತಾನೆ. ಅಲ್ಲಿ ನೆರೆದಿದ್ದವರು ಎಲ್ಲರೂ ವರನಿಗೆ ವಧುವನ್ನು ಕೆಳಗಿಳಿಸುವಂತೆ ಸೂಚಿಸುತ್ತಾರೆ. ಆದರೆ ವರ ಅದಕ್ಕೆ ಒಪ್ಪುವುದಿಲ್ಲ. ಪೂರ್ವ ನಿಗಧಿಯಂತೆ ವಧುವನ್ನು ಎತ್ತಿಕೊಂಡೇ ನಡೆಯುತ್ತಾನೆ.
ಇದನ್ನೂ ಓದಿ : Snake Video : ಲೋಟದಲ್ಲಿರುವ ನೀರನ್ನು ಗಟ ಗಟನೆ ಕುಡಿಯುವ ಹಾವು.! ಅಪರೂಪದ ವಿಡಿಯೋ ವೈರಲ್
joyajaan816 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು 80 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 30 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.