ಮದುವೆ ಎಂದರೆ ಸಂತೋಷದ ವಾತಾವರಣ ಮನೆ ಮಾಡಿರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಮದುವೆಯ ಫೋಟೋಶೂಟ್‌ಗಳು, ವಿಡಿಯೋಗಳನ್ನು ನೋಡಿದರೆ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಅಂತಹ ವಿಚಾರಗಳ ನಡುವೆ ಕೆಲವೊಂದು ವೈರಲ್‌ ವಿಡಿಯೋಗಳು ತಮಾಷೆಯಾಗಿ ಕಾಣಿಸುತ್ತವೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ವಿಡಿಯೋ ಒಂದು ವೈರಲ್‌ ಆಗಿದ್ದು, ಆ ವಿಡಿಯೋದಲ್ಲಿ ವಧು ವರ ಇಬ್ಬರು ಸಹ ಕಿತ್ತಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: CSK vs SRH: ಚೆನ್ನೈ-ಹೈದರಾಬಾದ್‌ ಹಣಾಹಣಿ: ಧೋನಿ ನಾಯಕತ್ವದಲ್ಲಿ ಗೆಲ್ಲುತ್ತಾ ಚೆನ್ನೈ!


ವಿಡಿಯೋದಲ್ಲಿ ಏನಿದೆ: 
ವಧು ವರನಿಗೆ ಸಿಹಿ ತಿನಿಸಲು ಮುಂದಾದಾಗ ಆತ ಸಿಟ್ಟಿನಿಂದ ಬೇರೆಡೆಗೆ ನೋಡುತ್ತಿರುತ್ತಾನೆ. ಈ ವೇಳೆ ವಧು ಆತನ ಮುಖಕ್ಕೆ ಕೈಯಲ್ಲಿದ್ದ ಸಿಹಿಯನ್ನು ಕೋಪದಿಂದ ಒರೆಸುತ್ತಾರೆ. ಇದಕ್ಕೆ ಮತ್ತೆ ಸಿಟ್ಟು ಮಾಡಿಕೊಂಡ ವರ ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ. ಪ್ರತ್ಯುತ್ತರವಾಗಿ ಆಕೆಯೂ ವರನ ಕೆನ್ನೆಗೆ ಬಾರಿಸಿದ್ದಾಳೆ. ಹೀಗೆ ಮುಂದುವರೆದ ಜಗಳ ತಾರಕಕ್ಕೇರಿದೆ. ಈ ವಿಡಿಯೋಗೆ ಆನಿಮೇಟೆಡ್‌ ಸೌಂಡ್‌ನ್ನು ಹಾಕಿ ಎಡಿಟ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದೆ.  



 


ಇನ್ನು ವಿಡಿಯೋವನ್ನು ಪ್ರಸಿದ್ಧ ಹಾಸ್ಯನಟ ಸುನಿಲ್ ಗ್ರೋವರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಶೀರ್ಷಿಕೆಯನ್ನು ನೀಡಿರುವ ಅವರು, "ಗುಸ್ಸಾ ನಾ ಕಿಯಾ ಕರೋ! ಅಭಿ ತೋ ಲೈಫ್ ಶುರು ಹುಯಿ ಹೈ. ವೈಸೆ 36 ಕೆ 36 ಗುಣ್‌ ಮಿಲ್ತೆ ಹೇ ಇನ್ಕೆ(ಕೋಪ ಮಾಡ್ಕೊಬೇಡಿ. ಈಗಷ್ಟೇ ಜೀವನ ಶುರುವಾಗಿದೆ. ಇಬ್ಬರ 36 ಗುಣಗಳು ಒಂದಕ್ಕೊಂದು ಮ್ಯಾಚ್‌ ಆಗಿದೆ)" ಎಂದು ಬರೆದುಕೊಂಡಿದ್ದಾರೆ. 


ಈ ವಿಡಿಯೋ ವೈರಲ್‌ ಆದ ಕೆಲವೇ ದಿನಗಳಲ್ಲಿ 3.8 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನು ಮದುವೆ ಮನೆಗೆ ಆಗಮಿಸಿದ್ದ ವಧು ವರರ ಸಂಬಂಧಿಕರು ಈ ಬಗ್ಗೆ ಏನು ಮಾಡಬೇಕೆಂದು ತೋಚದೆ ಸುಮ್ಮನಾಗಿದ್ದಾರೆ. 


ಇದನ್ನು ಓದಿ: Viral Video: ಬೃಹತ್ ಬಂಡೆಕಲ್ಲು ಅಪ್ಪಳಿಸಿ ಬೈಕ್ ಸವಾರ ಸಾವು, ಭಯಾನಕ ವಿಡಿಯೋ ಮೊಬೈಲ್‍ನಲ್ಲಿ ಸೆರೆ


ಸಂಭ್ರಮದಿಂದ ಕೂಡಿರಬೇಕಾಗಿದ್ದ ವಧು ವರರು ಈ ರೀತಿ ಕಿತ್ತಾಡಿಕೊಂಡಿದ್ದು ತಮಾಷೆಯಾಗಿ ಮೇಲ್ನೋಟಕ್ಕೆ ಕಂಡರೂ ಸಹ, ವಿಪರ್ಯಾಸ ಸಂಗತಿ ಎನಿಸುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.