Brown Bread Making Viral video: ಇದು ಮಾರ್ಕೆಟಿಂಗ್ ಯುಗವಾಗಿದೆ. ತಿನ್ನುವ ಆಹಾರವೂ ಸೈಲೆಂಟ್‌ ಕಿಲ್ಲರ್‌ ಆಗುತ್ತಿದೆ. ಒಂದು ವಸ್ತುವು ಹೆಚ್ಚು ಬ್ರಾಂಡ್ ಆಗಿದ್ದರೆ ಅದರ ಮಾರಾಟ ಕೂಡ ಹೆಚ್ಚುತ್ತದೆ. ಆರೋಗ್ಯಕರ ಎಂದು ಕೆಲವರು ಅನಾರೋಗ್ಯಕರ ಆಹಾರಗಳನ್ನು ಒಂಡಷ್ಟು ಜನ ಮಾರುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಜನರು ತೂಕ ಇಳಿಕೆಗೆ ಎಂದು ಬ್ರೌನ್‌ ಬ್ರೆಡ್ ಸೇವಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವು ಕಡೆಗಳಲ್ಲಿ ಆರೋಗ್ಯಕರ ರೀತಿಯಲ್ಲೇ ಬ್ರೌನ್‌ ಬ್ರೆಡ್ ತಯಾರಾಗುತ್ತಿರಬಹುದು. ಬ್ರೌನ್‌ ಬ್ರೆಡ್ ಅನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ ಎಂದು ತಿಳಿದಿದ್ದಾರೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.


ಇದನ್ನೂ ಓದಿ: ಉದ್ಯಮಿಯ ಮನೆಯಲ್ಲಿ ʼಮೂತ್ರʼದಿಂದ ಅಡುಗೆ ಮಾಡುತ್ತಿದ್ದ ಮಹಿಳೆ; CCTVಯಲ್ಲಿ ಶಾಕಿಂಗ್‌ ದೃಶ್ಯ ಸೆರೆ!


ಫಿಟ್ನೆಸ್ ಫ್ರೀಕ್‌ ಆದವರು ತೂಕ ನಿಯಂತ್ರಣಕ್ಕೆ ಬ್ರೌನ್‌ ಬ್ರೆಡ್ ತಿನ್ನುತ್ತಾರೆ. ಬ್ರೌನ್‌ ಬ್ರೆಡ್ ಆರೋಗ್ಯಕರವಾಗಿದೆ ಎಂಬ ನಂಬಿಕೆ ಅನೇಕರಲ್ಲಿದೆ. ಜನರ ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಬ್ರೌನ್ ಬ್ರೆಡ್ ತಯಾರಿಸುವ ಕಾರ್ಖಾನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. 


 



 


ಬ್ರೌನ್ ಬ್ರೆಡ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಕಾರ್ಮಿಕರು ಬ್ರೌನ್‌ ಬ್ರೆಡ್ ಮಾಡಲು ಮೈದಾ ಹಿಟ್ಟನ್ನೇ ಈ ವಿಡಿಯೋದಲ್ಲಿ ಬಳಸಿದ್ದಾರೆ. ಬಿಳಿ ಬ್ರೆಡ್ ತಯಾರಿಕೆಯಲ್ಲಿ ಬಳಸುವ ಎಲ್ಲಾ ಪದಾರ್ಥಗಳನ್ನು ಹಾಕಲಾಗಿದೆ. ಇದರಲ್ಲಿ ಎಣ್ಣೆಯಿಂದ ಹಿಡಿದು ಮೈದಾವರೆಗೆ ಎಲ್ಲವೂ ಸೇರಿದೆ. 


ಇದಕ್ಕೆ ಕಂದು ಬಣ್ಣ ನೀಡಲು ಬಣ್ಣವನ್ನು ಬಳಸಿದ್ದಾರೆ. ನೀವು ಖರೀದಿಸುವ ಮತ್ತು ಆರೋಗ್ಯಕರ ಎಂದು ಭಾವಿಸುವ ಬ್ರೌನ್‌ ಬ್ರೆಡ್ ತಯಾರಿಸುವ ವಿಡಿಯೋ ಇದು. (ಗಮನಿಸಿ: ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಖಚಿತಪಡಿಸುವುದಿಲ್ಲ.)


ಇದನ್ನೂ ಓದಿ: ಹಸಿರು ಸಸ್ಯಗಳ ಮಧ್ಯೆ ಅಡಗಿ ಕುಳಿತಿದೆ ಹಾವು !ಈ ವಿಡಿಯೋದಲ್ಲಿರುವ ಸರ್ಪವನ್ನು ಹುಡುಕಿ ನೋಡೋಣ!ಕಂಡು ಹಿಡಿದರೆ ನಿಮ್ಮದು ಪಕ್ಕಾ ಹದ್ದಿನ ಕಣ್ಣು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.