ಹಸಿರು ಸಸ್ಯಗಳ ಮಧ್ಯೆ ಅಡಗಿ ಕುಳಿತಿದೆ ಹಾವು !ಈ ವಿಡಿಯೋದಲ್ಲಿರುವ ಸರ್ಪವನ್ನು ಹುಡುಕಿ ನೋಡೋಣ!ಕಂಡು ಹಿಡಿದರೆ ನಿಮ್ಮದು ಪಕ್ಕಾ ಹದ್ದಿನ ಕಣ್ಣು

Snake video : ಹಚ್ಚ ಹಸಿರಿನ ಎಲೆಗೊಂಚಲುಗಳಲ್ಲಿ ಮಧ್ಯೆ ಬಹಳ ಆರಾಮಾಗಿ ಕುಳಿತಿರುವ ಹಾವು ಈ ವಿಡಿಯೋದಲ್ಲಿ ಇದೆ.ಸುಮ್ಮನೆ ಹಾಗೆ ನೋಡಿದರೆ ಇಲ್ಲಿ ಒಂದು ಹಾವು ಇದೆ ಎನ್ನುವುದನ್ನು ಯಾರೂ ಅಂದಾಜಿಸಲು ಸಾಧ್ಯವೇ ಇಲ್ಲ.

Written by - Ranjitha R K | Last Updated : Oct 17, 2024, 11:56 AM IST
  • ಈ ಹಾವಿನ ವೀಡಿಯೊ ಲಕ್ಷಾಂತರ ವೀಕ್ಷಕರನ್ನು ಬೆರಗುಗೊಳಿಸಿದೆ.
  • ವಿಡಿಯೋದಲ್ಲಿ ಇರುವ ಹಾವನ್ನು ಹುಡುಕುವುದೇ ಸದ್ಯದ ಚಾಲೆಂಜ್.
  • ಈ ವಿಡಿಯೋದಲ್ಲಿರುವುದು ವೈನ್ ಸ್ನೇಕ್
ಹಸಿರು ಸಸ್ಯಗಳ ಮಧ್ಯೆ ಅಡಗಿ ಕುಳಿತಿದೆ ಹಾವು !ಈ ವಿಡಿಯೋದಲ್ಲಿರುವ ಸರ್ಪವನ್ನು ಹುಡುಕಿ ನೋಡೋಣ!ಕಂಡು ಹಿಡಿದರೆ ನಿಮ್ಮದು ಪಕ್ಕಾ ಹದ್ದಿನ ಕಣ್ಣು title=

Snake video : ಬಟಾಬಯಲಿನಲ್ಲಿ ಇದ್ದರೂ ಯಾರ ಕಣ್ಣಿಗೂ ಕಾಣಿಸದ ರೀತಿಯಲ್ಲಿ ಇರುವ ಈ ಹಾವಿನ  ವೀಡಿಯೊ ಲಕ್ಷಾಂತರ ವೀಕ್ಷಕರನ್ನು ಬೆರಗುಗೊಳಿಸಿದೆ.ವನ್ಯಜೀವಿ ಛಾಯಾಗ್ರಾಹಕ ಇಶಾನ್ ಶಾನವಾಸ್  ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇರುವ ಹಾವನ್ನು ಹುಡುಕುವುದೇ ಸದ್ಯಕ್ಕೆ ಎಲ್ಲರ ಮುಂದೆ ಇರುವ ಚಾಲೆಂಜ್. 

ಹಚ್ಚ ಹಸಿರಿನ ಎಲೆಗೊಂಚಲುಗಳಲ್ಲಿ ಮಧ್ಯೆ ಬಹಳ ಆರಾಮಾಗಿ ಕುಳಿತಿರುವ ಹಾವು ಈ ವಿಡಿಯೋದಲ್ಲಿ ಇದೆ. ಸುಮ್ಮನೆ ಹಾಗೆಯೇ ನೋಡಿದರೆ ಇಲ್ಲಿ ಒಂದು ಹಾವು ಇದೆ ಎನ್ನುವುದನ್ನು ಯಾರೂ ಅಂದಾಜಿಸಲು ಸಾಧ್ಯವೇ ಇಲ್ಲ.

ಇದನ್ನೂ ಓದಿ : Viral video: ಸರ್ಪದೊಂದಿಗೆ ಸ್ನೇಹ ಸಾಧ್ಯವೇ?.. ಹಾದಿಯಲ್ಲಿ ಎದುರಾದ ಹಾವಿಗೆ ಮುತ್ತಿಟ್ಟ ಗೋಮಾತೆ! ಮುಂದೆನಾಯ್ತು ಅಂತ ನೀವೇ ನೋಡಿ!! ವಿಡಿಯೋ ವೈರಲ್‌

ಈ ವಿಡಿಯೋದಲ್ಲಿರುವ ಹಾವನ್ನು ವೈನ್ ಸ್ನೇಕ್ ಎಂದು ಕರೆಯುತ್ತಾರೆ.ಈ ಹಾವುಗಳು ತೆಳ್ಳಗಿನ ದೇಹ ಮತ್ತು ತಮ್ಮ ಗಾಢವಾದ ಬಣ್ಣಕ್ಕೆ ಹೆಸರುವಾಸಿಯಾಗಿದೆ. ಈ ಹಾವಿನ ಬಣ್ಣವೇ ಹಸಿರು.ಹಾಗಾಗಿಯೇ ಇದು ಗಿಡ ಬಳ್ಳಿಗಳ ಮಧ್ಯೆ ಕುಳಿತು ಜನರನ್ನು ಬಹಳ ಸುಲಭವಾಗಿ ಮೋಸ ಮಾಡುತ್ತದೆ. 

ಈ ವಿಡಿಯೋವನ್ನು ಸಮ್ಮನೆ ಹಾಗೆಯೇ ನೋಡಿದರೆ ಏನು ಕೂಡಾ ಕಾಣಿಸದು.ಆದರೆ   ಸ್ವಲ್ಪ ದಿಟ್ಟಿಸಿ ನೋಡಿದರೆ ಸುಂದರವಾದ ಹಸಿರು ವೈನ್ ಸ್ನೇಕ್ ಕಾಣಿಸುತ್ತದೆ. 

 

ಇದನ್ನೂ ಓದಿ : ಕೇಬಲ್ ಟಿವಿಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರ..! ಬೆಚ್ಚಿಬಿದ್ದ ಸಿರೀಯಲ್‌ ನೋಡುತ್ತಿದ್ದ ಜನ.. ವಿಡಿಯೋ ಇಲ್ಲಿದೆ

ಈ ವಿಡಿಯೋ ಹಂಚಿಕೊಂಡಾಗಿನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಮಿಲಿಯನ್ ಗಟ್ಟಲೆ ಜನ ವೀಕ್ಷಿಸಿದ್ದಾರೆ.ಈ ವಿಡಿಯೋ ನೋಡಿ ವಿಧ ವಿಧದ ಕಾಮೆಂಟ್ ಗಳನ್ನೂ ಮಾಡಿದ್ದಾರೆ. ಇನ್ನು ಕೆಲವರಿಗೆ ಈ ಹಾವು ವಿಷಕಾರಿಯೇ ಎಂದು ತಿಳಿದುಕೊಳ್ಳುವ ಕುತೂಹಲ. 

ಅಂದ ಹಾಗೆ ಈ ಹಾವು ವಿಷಕಾರಿಯೇ. ಆದರೆ ಇದು ಮಧ್ಯಮ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.ಈ ಹಾವು ಕಚ್ಚಿ ಸಾಯುವ ಮಟ್ಟಿಗೆ ವಿಷ ಏರುವುದಿಲ್ಲ ಎನ್ನಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News