ನೀವು ಎಂದಾದರೂ `ಪಾರ್ಲೆ ಜಿ ಆಲೂ ಪಕೋಡಾ` ತಿಂಡಿದ್ದೀರಾ? ಮಹಿಳೆ ರೆಸೆಪಿ ಹಂಚಿಕೊಳ್ಳುತ್ತಲೇ ವಿಡಿಯೋ ಸಕತ್ ವೈರಲ್...!
Biscuit Aaloo Pakoda Viral Video: ಸಾಮಾಜಿಕ ಮಾಧ್ಯಮದಲ್ಲಿ ಪಾರ್ಲೆ ಜಿ ಆಲೂ ಪಕೋಡಾ ವಿಡಿಯೋವೊಂದು ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ, ಇದರಲ್ಲಿ ಮಹಿಳೆಯೊಬ್ಬರು ಬಿಸ್ಕೆಟ್ ಮತ್ತು ಆಲೂ ಮಸಾಲಾ ಬಳಸಿ ಪಕೋಡ ತಯಾರಿಸುತ್ತಿರುವುದು ಭಾರತೀಯ ಆಹಾರ ಪ್ರಿಯರ ಪಿತ್ತ ನೆತ್ತಿಗೇರಿಸಿದೆ. (Viral News In Kannada)
ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಪಾರ್ಲೆ ಜಿ ಆಲೂ ಪಕೋಡಾ ವಿಡಿಯೋವೊಂದು ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ, ಇದರಲ್ಲಿ ಮಹಿಳೆಯೊಬ್ಬರು ಬಿಸ್ಕೆಟ್ ಮತ್ತು ಆಲೂ ಮಸಾಲಾ ಬಳಸಿ ಪಕೋಡ ತಯಾರಿಸುತ್ತಿರುವುದು ಭಾರತೀಯ ಆಹಾರ ಪ್ರಿಯರನ್ನು ಬೆಚ್ಚಿಬೀಳಿಸಿದೆ. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಪಾರ್ಲೆ-ಜಿ ಬಿಸ್ಕೆಟ್‌ಗಳ ನಡುವೆ ಆಲೂಗಡ್ಡೆ ಬಳಸಿ ತಯಾರಿಸಲಾಗಿರುವ ಮಸಾಲವನ್ನು ಸೇರಿಸಲಾಗಿದೆ, ಈ ವಿಚಿತ್ರವಾದ ಖಾದ್ಯವನ್ನು ತಯಾರಿಸಲು ಅದನ್ನು ಡೀಪ್ ಫ್ರೈ ಮಾಡಲಾಗಿದೆ. ಸಿರಿಯಸ್ಸಾಗಿ ಈ ತಲೆತಿರುಕ ಕಲ್ಪನೆ ಯಾರ ತಲೆಗೆ ಬಂದಿರಬಹುದು? ಇಂತಹ ಸಂಯೋಜನೆಗಳನ್ನು ವಿಲಕ್ಷಣ ಆಹಾರ ಸಂಯೋಜನೆಗಳು ಎಂದು ಕರೆಯಲಾಗುತ್ತದೆ ಮತ್ತು ಆಗಾಗ ಇಂತಯ ವಿಯರ್ಡ್ ಫುಡ್ ಕಾಂಬಿನೇಷನ್ ತಯಾರಿಸುತ್ತಾರೆ. (Viral News In Kannada)
ಇದನ್ನೂ ಓದಿ-ಅಷ್ಟಕ್ಕೂ Rashmika Deepfake Video ನಲ್ಲಿರುವ ಬೋಲ್ಡ್ ಬಾಲೆ ಯಾರು?
ವಿಚಿತ್ರ ಪಾರ್ಲೆ ಜಿ ಆಲೂ ಪಕೋಡ ತಯಾರಿಸಿದ ಮಹಿಳೆ
ಮಹಿಳೆಯೊಬ್ಬರು ಇಂತಹ ಹೊಸ ರೀತಿಯಲ್ಲಿ ಆಲೂ ಪಕೋಡಾ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ವೀಡಿಯೊದಲ್ಲಿ, ಮಹಿಳೆ ದೊಡ್ಡ ಬಾಣಲೆಯ ಪಕ್ಕದಲ್ಲಿ ಕುಳಿತಿದ್ದಾಳೆ. ಆಕೆ ಪಾರ್ಲೆ-ಜಿ ಬಿಸ್ಕತ್ತುಗಳನ್ನು ಬೇಳೆ ಹಿಟ್ಟು ಮತ್ತು ಮಸಾಲೆಗಳ ಮಿಶ್ರಣದಲ್ಲಿ ಅದ್ದಿ ಮತ್ತು ಅವುಗಳನ್ನು ಡೀಪ್-ಫ್ರೈಸ್ ಮಾಡುತ್ತಿದ್ದಾಳೆ. ಆಕೆ ಆಲೂಗಡ್ಡೆಯನ್ನು ಕುದಿಸಿ, ಸಿಪ್ಪೆ ಸುಲಿದು ಅವುಗಳಿಗೆ ಮಸಾಲೆಗಳನ್ನು ಸೇರಿಸುತ್ತಾಳೆ. ಮಹಿಳೆಯ ಈ ವಿಡಿಯೋವನ್ನು ಕೆಲವರು ಇಷ್ಟಪಡುತ್ತಿದ್ದರೆ, ಈ ರೆಸೆಪಿ ಉಳಿದವರ ಪಿತ್ತ ನೆತ್ತಿಗೇರಿಸುತ್ತಿದೆ. ಅನೇಕ ಜನರು ಇದನ್ನು ಆಸಕ್ತಿದಾಯಕ ಮತ್ತು ಅತ್ಯುತ್ತಮ ಪ್ರಯೋಗ ಎಂದು ಕರೆಯುತ್ತಿದ್ದಾರೆ. ಕೆಲವರು ಇದನ್ನು ಆಲೂಗಡ್ಡೆ ಮತ್ತು ಬಿಸ್ಕತ್ತು ಪಕೋಡಾದ ವಿಶಿಷ್ಟ ಸಂಯೋಜನೆ ಎಂದು ಕರೆಯುತ್ತಿದ್ದಾರೆ.
ಇದು ಗುಜರಾತ್ ನ ಖಾದ್ಯ ಎಂದು ಹೇಳಲಾಗುತ್ತಿದೆ.
ಎರಡು ಪಾರ್ಲೆ-ಜಿ ಬಿಸ್ಕತ್ತುಗಳ ನಡುವೆ ಆಲೂಗೆಡ್ಡೆ ಹೂರಣವನ್ನು ಹಾಕಿ ಅದನ್ನು ಬೇಳೆ ಹಿಟ್ಟಿನಲ್ಲಿ ಅದ್ದಿ ಡೀಪ್ ಫ್ರೈ ಮಾಡಿದಾಗ ವಿಚಿತ್ರ ಟ್ವಿಸ್ಟ್ ಬರುತ್ತದೆ. ಅಂತಿಮವಾಗಿ, ಈ ಪಕೋಡದೊಂದಿಗೆ ಚಟ್ನಿಯನ್ನು ಬಿಸಿಯಾಗಿ ಬಡಿಸಲಾಗುತ್ತದೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಆದರೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ ವ್ಯಕ್ತಿ ಇದು ಗುಜರಾತ್‌ನದು ಎಂದು ಹೇಳಿಕೊಂಡಿದ್ದು, ಜನರು ಅದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಕೆಲವರು ಇದನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಲೈಕ್ ಮಾಡಿದ್ದರೆ, ಅದನ್ನು ಇಷ್ಟಪಡದ ಅನೇಕರು ಮತ್ತು ಜನರು ಆಕ್ರೋಶಗೊಂಡಿದ್ದಾರೆ. ಈ ವೀಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಿಮ್ಮ ಪ್ರತಿಕ್ರಿಯೆಯನ್ನು ನೀವು ಹೇಳಲು ಮರೆಯಬೇಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ