ನಿರ್ಮಾಣ ಹಂತದಲ್ಲಿರುವ ರಸ್ತೆಯನ್ನೇ ಕದ್ದ ಗ್ರಾಮಸ್ಥರು..ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತ ಗುತ್ತಿಗೆದಾರ ...ವಿಡಿಯೋ ನೋಡಿ!

Viral Video:  ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಗ್ರಾಮಸ್ಥರು ಯಾವ ರೀತಿ ನಿರ್ಮಾಣ ಹಂತದಲ್ಲಿರುವ ರಸ್ತೆಯನ್ನೇ ಕದಿಯುತ್ತಿರುವುದನ್ನು ನೀವು ನೋಡಬಹುದು. ಇನ್ನೊಂದೆಡೆ ಅದನ್ನು ಕಂಡು ಗುತ್ತಿಗೆದಾರ ಕಕ್ಕಾಬಿಕ್ಕಿಯಾಗಿದ್ದಾನೆ. (Viral News In Kannada)

Written by - Nitin Tabib | Last Updated : Nov 5, 2023, 04:56 PM IST
  • ಮಾಧ್ಯಮ ವರದಿಗಳ ಪ್ರಕಾರ ಜಹಾನಾಬಾದ್ ನ ಮಖದ್ದುಮ್ ಪುರದ ಔದಾನಾ ಭೀಗಾ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿ ರಸ್ತೆ ನಿರ್ಮಾಣ ನಡೆಯಬೇಕಿತ್ತು.
  • ಅನುಮತಿ ದೊರೆತ ಬಳಿಕ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
  • ಗ್ರಾಮದ ಯಾವ ಭಾಗಗಳಲ್ಲಿ ಕಾಂಕ್ರೀಟ್ ಹಾಕಬೇಕಿತ್ತೋ, ಆ ಜಾಗವನ್ನು ಗುರುತಿಸಲಾಗಿದೆ. ಗುತ್ತಿಗೆದಾರನ ಉಪಸ್ಥಿತಿಯಲ್ಲಿ ಆ ಜಾಗಗಳಲ್ಲಿ ಕಾಂಕ್ರೀಟ್ ಹಾಕಲಾಗಿದೆ.
ನಿರ್ಮಾಣ ಹಂತದಲ್ಲಿರುವ ರಸ್ತೆಯನ್ನೇ ಕದ್ದ ಗ್ರಾಮಸ್ಥರು..ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತ ಗುತ್ತಿಗೆದಾರ ...ವಿಡಿಯೋ ನೋಡಿ! title=

ನವದೆಹಲಿ: ಕಳ್ಳತನಕ್ಕೆ ಸಂಬಂಧಿಸಿದ ಬೆಚ್ಚಿಬೀಳಿಸುವ ಘಟನೆಗಳನ್ನು ನಾವು ಆಗಾಗ ಕೇಳುತ್ತದೆ ಇರುತ್ತೇವೆ ಮತ್ತು ಕೆಲವೊಮ್ಮೆ ವಿಡಿಯೋಗಳ ಮೂಲಕ ಸಾಕ್ಷಿ ಕೂಡ ಆಗುತ್ತವೆ. ಇಂತಹ ಘಟನೆಗಳಲ್ಲಿ ಕಳ್ಳರು ಎಷ್ಟೊಂದು ಚಾಕಚಕ್ಯತೆಯಿಂದ ತಮ್ಮ ಕೃತ್ಯಕ್ಕೆ ಅಂತ್ಯ ಹಾಡುತ್ತಾರೆ ಎಂಬುದನ್ನೂ ನೀವು ನೋಡಿರಬಹುದು. ಕೆಲವೊಮ್ಮೆ ಕಳ್ಳತನದ ಇಂತಹ ಘಟನೆ ಕಂಡು ನಮ್ಮ ಕಣ್ಣುಗಳ ಮೇಲೆ ನಮ್ಮ ವಿಶ್ವಾಸವೇ ಹೊರಟುಹೋಗುತ್ತದೆ. ಇಂತಹುದೇ ಒಂದು ಘಟನೆ ಬೆಳಕಿಗೆ ಬಂದಿದ್ದು, ಇದರಲ್ಲಿ ಗ್ರಾಮಸ್ಥರು ನಿರ್ಮಾಣ ಹಂತದಲ್ಲಿರುವ ರಸ್ತೆಯನ್ನೇ ಕದ್ದಿದ್ದಾರೆ. ಕೇಳಲು ವಿಚಿತ್ರ ಎನಿಸಿದರು ಇದು ಸತ್ಯ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಬಿಹಾರದ ಜಹಾನಾಬಾದ್ ನಿಂದ ಹೊರಹೊಮ್ಮಿದೆ ಎನ್ನಲಾದ ಈ ವಿಡಿಯೋದಲ್ಲಿ ಗ್ರಾಮಸ್ಥರು ರಸ್ತೆ ನಿರ್ಮಾಣಗೊಳ್ಳುತ್ತಲೇ ಅದನ್ನು ಕದಿಯುತ್ತಿರುವುದನ್ನು ನೀವು ನೋಡಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲ ಸಮಯದ ನಂತರ ರಸ್ತೆ ಗುತ್ತಿಗೆದಾರ ಸ್ಥಳಕ್ಕೆ ತಲುಪಿದಾಗ ಅಲ್ಲಿ ಕಂಡ ದೃಶ್ಯವನ್ನು ನೋಡಿ ಆತ ಕಕ್ಕಾಬಿಕ್ಕಿಯಾಗಿದ್ದಾನೆ. (Viral News In Kannada)

ಏನಿದು ಸಂಪೂರ್ಣ ಪ್ರಕರಣ?
ಮಾಧ್ಯಮ ವರದಿಗಳ ಪ್ರಕಾರ ಜಹಾನಾಬಾದ್ ನ ಮಖದ್ದುಮ್ ಪುರದ ಔದಾನಾ ಭೀಗಾ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿ ರಸ್ತೆ ನಿರ್ಮಾಣ ನಡೆಯಬೇಕಿತ್ತು. ಅನುಮತಿ ದೊರೆತ ಬಳಿಕ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಗ್ರಾಮದ ಯಾವ ಭಾಗಗಳಲ್ಲಿ ಕಾಂಕ್ರೀಟ್ ಹಾಕಬೇಕಿತ್ತೋ, ಆ ಜಾಗವನ್ನು ಗುರುತಿಸಲಾಗಿದೆ. ಗುತ್ತಿಗೆದಾರನ ಉಪಸ್ಥಿತಿಯಲ್ಲಿ ಆ ಜಾಗಗಳಲ್ಲಿ ಕಾಂಕ್ರೀಟ್ ಹಾಕಲಾಗಿದೆ.  ಕೆಲವೇ ಸಮಯದಲ್ಲಿ ಸಂಪೂರ್ಣ ಕಾಂಕ್ರೀಟ್ ರಸ್ತೆ ಸಿದ್ಧಗೊಂಡಿದೆ. ರಸ್ತೆ ನಿರ್ಮಾಣಗೊಂಡ ಬಳಿಕ ಕೆಲಸಗಾರರು ಮತ್ತು ಗುತ್ತಿಗೆದಾರ ಅಲ್ಲಿನ ಹೊರಟುಹೋಗಿದ್ದಾರೆ . ಆದರೆ ಬಳಿಕ ನಡೆದ ರಸ್ತೆ ಕಳ್ಳತನ ನೋಡಿ ನೀವೂ ಕೂಡ ಬೆಚ್ಚಿಬೀಳುವಿರಿ. 

ಇದನ್ನೂ ಓದಿ-ಬಾಯ್ ಫ್ರೆಂಡ್ ಗೆ ಲವ್ ಲೆಟರ್ ಬರೆದ ಗೆಳತಿಗೆ ತುಂಬಿದ ಕ್ಲಾಸ್ ರೂಮ್ ನಲ್ಲಿಯೇ...ವಿಡಿಯೋ ನೋಡಿ!

ದೃಶ್ಯ ಕಂಡು ಕಕ್ಕಾಬಿಕ್ಕಿಯಾದ ಗುತ್ತಿಗೆದಾರ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಈ ವಿಡಿಯೋ ನೋಡಿ ಗ್ರಾಮಸ್ಥರು ಮೊದಲು ನೀರನ್ನು ಬಳಸಿ ರಸ್ತೆಯನ್ನು ತೆಳುಗೊಳಿಸಿರುವುದು ಕಂಡುಬರುತ್ತಿದೆ. ಬಳಿಕ ಅವರು ಅದನ್ನು ಪಾತ್ರೆಗಳ ಸಹಾಯದಿಂದ ತಮ್ಮ ಮನೆಗಳಿಗೆ ಸಾಗಿಸುತ್ತಿರುವುದು ಕೂಡ ಕಂಡುಬರುತ್ತಿದೆ. ಫ್ರೇಮ್ ನಲ್ಲಿ ಮೊದಲು ಎಲ್ಲಿ ರಸ್ತೆ ಕಾಣಿಸುತ್ತಿತ್ತೋ ಇದೀಗ ಅದು ಅಲ್ಲಿಲ್ಲ. ಎಲ್ಲಾ ಕಾಂಕ್ರೀಟ್ ಅನ್ನು ಗ್ರಾಮಸ್ಥರು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಸುಮಾರು ಎರಡು ಗಂಟೆ ಬಳಿಕ ಗುತ್ತಿಗೆದಾರ ರಸ್ತೆಯನ್ನು ನೋಡಲು ಬಂದಾಗ ಆತ ಕಕ್ಕಾಬಿಕ್ಕಿಯಾಗಿ ನಿಂತುಕೊಂಡಿದ್ದಾನೆ. ಇಡೀ ರಸ್ತೆಯನ್ನೇ ಗ್ರಾಮಸ್ಥರು ಕದ್ದಿರುವುದು ಆತನ ಗಮನಕ್ಕೆ ಬಂದಿದೆ. 

ಇದನ್ನೂ ಓದಿ-OMG...ವಾಗ್ವಾದಕ್ಕಿಳಿದ ಅಪ್ಪ-ಮಗನನ್ನೇ ಗುಂಡಿಕ್ಕಿ ಕೊಂದ ನೆರೆಹೊರೆಯ ವ್ಯಕ್ತಿ... ವಿಡಿಯೋ ನೋಡಿ!

ರಸ್ತೆ ಕಳ್ಳತನದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳ ವಿವಿಧ ವೇಡಿಕೆಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ @UtkarshSingh_ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. 

ವಿಡಿಯೋ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News