ನಾವು ಕೆಲಸ ಮಾಡುವ ವಿಚಾರದಲ್ಲಿ ನಿಷ್ಠೆಯನ್ನು ಹೊಂದಿದ್ದರೆ ಅಲ್ಲಿ ಯಶಸ್ಸು ಖಂಡಿತ ಲಭಿಸುತ್ತದೆ. ಇದೀಗ ಈ ಮಾತಿಗೆ ಉದಾಹರಣೆ ಎಂಬಂತೆ, ವ್ಯಕ್ತಿಯೊಬ್ಬ ಬರೋಬ್ಬರಿ 27 ವರ್ಷದಿಂದ ರಜೆಯನ್ನು ತೆಗೆದುಕೊಳ್ಳದೆ ಕೆಲಸ ಮಾಡಿದ್ದಾನೆ. ಈತ ಎಂದಿಗೂ ರಜೆ ತೆಗೆದುಕೊಳ್ಳುವ ಬಗ್ಗೆ ಯೋಜನೆ ಮಾಡಿಲ್ಲವಂತೆ. 


COMMERCIAL BREAK
SCROLL TO CONTINUE READING

ಅಮೆರಿಕದ ಲಾಸ್ ವೇಗಸ್‌ನಲ್ಲಿ ಉದ್ಯೋಗಿಯೊಬ್ಬರು ಕಳೆದ 27 ವರ್ಷಗಳಿಂದ ಒಂದೇ ಒಂದು ರಜೆಯನ್ನೂ ತೆಗೆದುಕೊಂಡಿಲ್ಲ. ಬರ್ಗರ್ ಕಿಂಗ್ ಫುಡ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಈ ರೀತಿ ಬದುಕು ಸಾಗಿಸಿದ್ದಾನೆ. ಇದಕ್ಕೆ ಪ್ರತಿಫಲ ಎಂಬಂತೆ ಈತನಿಗೆ ಬಹುದೊಡ್ಡ ಉಡುಗೊರೆಯೊಂದು ಲಭಿಸಿದೆ. ಆ ಉಡುಗೊರೆ ಬಗ್ಗೆ ಯಾರೂ ಊಹಿಸಲು ಸಾಧ್ಯವಿಲ್ಲ.  


ಇದನ್ನೂ ಓದಿ: ಎರಡು ಮಾವಿನ ಮರಗಳ ರಕ್ಷಣೆಗೆ 3 ಸೆಕ್ಯೂರಿಟಿ ಗಾರ್ಡ್ ಹಾಗೂ 6 ನಾಯಿಗಳ ನಿಯೋಜನೆ, ಕಾರಣ ರೋಚಕವಾಗಿದೆ


ಇದೀಗ ಆ ಉದ್ಯೋಗಿ ಸೋಷಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಸ್ಟಾರ್ ವರ್ಕರ್ ಆಗಿದ್ದಾರೆ. ಆದರೆ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದೂ ಸಹ ಮ್ಯಾನೇಜ್‌ಮೆಂಟ್‌ನಿಂದ ಈತನಿಗೆ ಸಾಧಾರಣ ಗಿಫ್ಟ್‌ ನೀಡಿದೆ. ಅಮೇರಿಕಾದ ಲಾಸ್ ವೇಗಾಸ್‌ನಲ್ಲಿರುವ ನಿಷ್ಠಾವಂತ ಬರ್ಗರ್ ಕಿಂಗ್ ಉದ್ಯೋಗಿಯೊಬ್ಬರು 27 ವರ್ಷಗಳಿಂದ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. 


ಈ ಉದ್ಯೋಗಿ ಹೆಸರು ಕೆವಿನ್ ಫೋರ್ಡ್. ತನ್ನ ದಣಿವರಿಯದ ಸೇವೆಗಾಗಿ ಉಡುಗೊರೆಯನ್ನು ಹೇಗೆ ಪಡೆದರು ಎಂಬ ಬಗ್ಗೆ ತಿಳಿಸಲಿದ್ದೇವೆ. ಈತನ ಸೇವೆಯನ್ನು ಮೆಚ್ಚಿ ಇಂಟರ್ನೆಟ್ ಬಳಕೆದಾರರು ಹಣ ಸಂಗ್ರಹಿಸಲು ಕೈ ಜೋಡಿಸಿದ್ದಾರೆ. 54 ವರ್ಷದ ಈ ವ್ಯಕ್ತಿ ಬರ್ಗರ್ ಕಿಂಗ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. 1995 ರಿಂದ ಸೇವೆ ಸಲ್ಲಿಸುತ್ತಿರುವ ಇವರು, 27ನೇ ಕೆಲಸದ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ. ಇನ್ನು ಕೆವಿನ್‌ ನಿಸ್ವಾರ್ಥ ಸೇವೆಗಾಗಿ ಸಿನಿಮಾ ಟಿಕೆಟ್‌, ಸ್ಟಾರ್‌ಬಕ್ಸ್ ಕಪ್‌, ಕ್ಯಾಂಡಿ ಮತ್ತು ಚಾಕೊಲೇಟ್‌ಗಳಿಂದ ತುಂಬಿದ ಗಿಫ್ಟ್‌ ಪ್ಯಾಕ್‌ನ್ನು ಕಂಪನಿ ನೀಡಿ ಗೌರವಿಸಿದೆ. 


ಉಡುಗೊರೆಯನ್ನು ಸ್ವೀಕರಿಸಿ ತಮ್ಮ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದ ವಿಡಿಯೋ ವೈರಲ್ ಆಗಿದೆ. ಆದರೆ ಕಂಪನಿಯೊಂದಿಗೆ ವರ್ಷಗಳ ಹಳೆಯ ಸೇವೆ ನೀಡಿದರೂ ಸಹ ಅವರಿಗೆ ಇಂತಹ ಸಾಧಾರಣ 'ಧನ್ಯವಾದ' ನೀಡಿರುವುದು ಆಶ್ಚರ್ಯ ತಂದಿದೆ ಎಂದು ಹಲವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೆಣ್ಣುಮಕ್ಕಳು ತಮ್ಮ ತಂದೆಗಾಗಿ GoFundMe ಪೇಜ್‌ ಕ್ರಿಯೇಟ್‌ ಮಾಡಿ ಸುಮಾರು 200 ಡಾಲರ್‌ ಹಣ ಸಂಗ್ರಹಿಸಲು ಮುಂದಾದರು. ಆದರೆ ಅವರಿಗೆ ಸಿಕ್ಕಿದ್ದು  ಬರೋಬ್ಬರಿ $300,000 ಡಾಲರ್‌ (ರೂ. 2.36 ಕೋಟಿಗೂ ಹೆಚ್ಚು).


ಇದನ್ನೂ ಓದಿ: Ration Card Rules: ನೀವೂ ಈ ತಪ್ಪುಗಳನ್ನು ಮಾಡಿದರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್


ಕೆವಿನ್ ಫೋರ್ಡ್ ಅವರ ಮಗಳು ಸೆರಿನಾ ನಿಧಿ ಸಂಗ್ರಹಣೆ ಬಳಿಕ ಸಂದೇಶವನ್ನು ಬರೆದಿದ್ದಾರೆ: "ಆ ವೀಡಿಯೊದಲ್ಲಿರುವ ವ್ಯಕ್ತಿ ನನ್ನ ತಂದೆ. ಅವರು 27 ವರ್ಷಗಳಿಂದ ರಜೆಯಿಲ್ಲದೆ ಕೆಲಸ ಮಾಡಿದ್ದಾರೆ. 27 ವರ್ಷಗಳ ಹಿಂದೆ ನನ್ನ ಮತ್ತು ನನ್ನ ಅಕ್ಕನ ಪಾಲನೆಗಾಗಿ ದೃಢವಾಗಿ ನಿಂತರು. ಹೀಗಾಗಿ ಈ ಕೆಲಸ ಮಾಡಲು ಮುಂದಾಗಿದ್ದಾರೆ" ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ