ಟೀಂ ಇಂಡಿಯಾದಿಂದ ಹೊರಗುಳಿದ ಆಲ್‌ರೌಂಡರ್‌: ಕಾರಣ ಏನು ಗೊತ್ತಾ?

ಐಪಿಎಲ್ 2022 ರಲ್ಲಿ ವಿಜಯ್ ಶಂಕರ್ ಸಂಪೂರ್ಣ ವಿಫಲರಾಗಿದ್ದಾರೆ. ಸೀಸನ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ 19 ರನ್‌ ಗಳಿಸಿದ್ದಾರೆ. ಜೊತೆಗೆ ಒಂದೇ ಒಂದು ವಿಕೆಟ್‌ ಸಹ ಕಬಳಿಸಿಲ್ಲ. ಗುಜರಾತ್ ಟೈಟಾನ್ಸ್ ಅವರನ್ನು 1 ಕೋಟಿ ರೂ.ಗೆ ಖರೀದಿಸಿತ್ತು. 

Written by - Bhavishya Shetty | Last Updated : Jul 4, 2022, 11:38 AM IST
  • ಟೀಂ ಇಂಡಿಯಾದಿಂದ ಹೊರಗುಳಿದ ವಿಜಯ್ ಶಂಕರ್
  • ಟೀಂ ಇಂಡಿಯಾದಲ್ಲಿ ಆಲ್‌ರೌಂಡರ್‌ ಆಗಿದ್ದ ವಿಜಯ್‌
  • ಕಳಪೆ ಪ್ರದರ್ಶನದಿಂದ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಶಂಕರ್‌
ಟೀಂ ಇಂಡಿಯಾದಿಂದ ಹೊರಗುಳಿದ ಆಲ್‌ರೌಂಡರ್‌: ಕಾರಣ ಏನು ಗೊತ್ತಾ?  title=
Indian Team

ಯಾವುದೇ ಕ್ರಿಕೆಟ್ ತಂಡಕ್ಕೆ ಆಲ್ ರೌಂಡರ್ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಪ್ರತೀ ಪಂದ್ಯದ ಗೆಲುವಿಗೆ ಇವರು ನೀಡುವ ಕೊಡುಗೆ ಅಗಾಧವಾಗಿರುತ್ತದೆ. ಬಲಿಷ್ಠ ಬ್ಯಾಟಿಂಗ್ ಮತ್ತು ಕಿಲ್ಲರ್ ಬೌಲಿಂಗ್‌ನಿಂದ ತಂಡವನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಭಾರತ ತಂಡವು ಕಪಿಲ್ ದೇವ್ ನಂತರ ಸ್ಟಾರ್ ಆಲ್ ರೌಂಡರ್ ಅನ್ನು ಹುಡುಕಲು ಪ್ರಯತ್ನಿಸುತ್ತಿದೆ. ಆದರೆ ಅಂತಹ ನಿರೀಕ್ಷೆ ಹೆಚ್ಚಿಸುವ ಯಾವೊಬ್ಬ ಆಟಗಾರ ಇಲ್ಲಿವರೆಗೆ ಆಯ್ಕೆದಾರರಿಗೆ ಸಿಕ್ಕಿಲ್ಲ. ಸದ್ಯ ಮೂರು ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಆಲ್ ರೌಂಡರ್ ಬಗ್ಗೆ ನಿಮಗೆ ತಿಳಿಸಲಿದ್ದೇವೆ. 

ಇದನ್ನೂ ಓದಿ: Kullu Bus Accident: ಕಂದಕಕ್ಕೆ ಉರುಳಿದ ಬಸ್ 20 ಕ್ಕೂ ಹೆಚ್ಚು ಜನರ ದುರ್ಮರಣ

ದೇಶಿಯ ಕ್ರಿಕೆಟ್‌ನಲ್ಲಿ ಬಿರುಸಿನ ಆಟ ಪ್ರದರ್ಶಿಸುವ ಮೂಲಕ ವಿಜಯ್ ಶಂಕರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆ ಬಳಿಕ 2019 ರ ವಿಶ್ವಕಪ್‌ನಲ್ಲಿ ಅವರಿಗೆ ಅವಕಾಶವನ್ನೂ ಸಹ ನೀಡಲಾಯಿತು. ಆದರೆ ಅವರ ಕಳಪೆ ಆಟದಿಂದಾಗಿ, ಆಯ್ಕೆದಾರರ ನಂಬಿಕೆ ಉಳಿಸಲು ಸಾಧ್ಯವಾಗಿಲ್ಲ. ಈ ಪ್ರದರ್ಶನ ಅವರನ್ನು ಟೀಮ್ ಇಂಡಿಯಾದಿಂದ ಹೊರಗುಳಿಯುವಂತೆ ಮಾಡಿದೆ ಎನ್ನಬಹುದು. ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ವಿಜಯ್‌, ತಮ್ಮ ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿದ್ದರು.

ಐಪಿಎಲ್ 2022 ರಲ್ಲಿ ವಿಜಯ್ ಶಂಕರ್ ಸಂಪೂರ್ಣ ವಿಫಲರಾಗಿದ್ದಾರೆ. ಸೀಸನ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ 19 ರನ್‌ ಗಳಿಸಿದ್ದಾರೆ. ಜೊತೆಗೆ ಒಂದೇ ಒಂದು ವಿಕೆಟ್‌ ಸಹ ಕಬಳಿಸಿಲ್ಲ. ಗುಜರಾತ್ ಟೈಟಾನ್ಸ್ ಅವರನ್ನು 1 ಕೋಟಿ ರೂ.ಗೆ ಖರೀದಿಸಿತ್ತು. 

ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ್ದಾರೆ. ಆ ನಂತರ ಆಯ್ಕೆಗಾರರು ವಿಜಯ್ ಶಂಕರ್ ಅವರನ್ನು ಕಡೆಗಣಿಸಲು ಆರಂಭಿಸಿದರು. ವಿಜಯ್ ಶಂಕರ್ ಕೂಡ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದಾರೆ. ತಂಡದ ನಾಯಕ ಹಾರ್ದಿಕ್ ಪಾಂಡ್ಯ, ವಿಜಯ್‌ ಶಂಕರ್‌ಗೆ ಪ್ಲೇಯಿಂಗ್‌ XI ನಲ್ಲಿ ಆಡಲು ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ. ಕಾರಣ ಅವರ ಕಳಪೆ ಪ್ರದರ್ಶನವಾಗಿತ್ತು. 

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ವಿಜಯ್ ಶಂಕರ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಶಂಕರ್ ಭಾರತ ಪರ 12 ಒಡಿಐ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಈ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಮಾಡಿಲ್ಲ.  ಇದು ಅವರನ್ನು ಟೀಮ್ ಇಂಡಿಯಾದಿಂದ ಹೊರಗುಳಿಯುವಂತೆ ಮಾಡಿದೆ. ಆದರೆ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಇದು ವಿಜಯ್‌ ಅಸಮಾಧಾನಕ್ಕೂ ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಗುರು ಪೂರ್ಣಿಮಾ ದಿನ ನಿರ್ಮಾಣಗೊಳ್ಳುತ್ತಿವೆ 4 ಶುಭಯೋಗಗಳು, ಈ ಕೆಲಸ ಮಾಡಿದ್ರೆ ಕಷ್ಟಗಳಿಂದ ಮುಕ್ತಿ

ಇನ್ನು ರೋಹಿತ್ ಶರ್ಮಾ ನಾಯಕನಾದ ಬಳಿಕ ವಿಜಯ್‌ ಶಂಕರ್‌ಗೆ ತಂಡದಲ್ಲಿ ಸ್ಥಾನ ನೀಡಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ವೆಂಕಟೇಶ್ ಅಯ್ಯರ್ ಜೊತೆ ರೋಹಿತ್ ಕಣಕ್ಕಿಳಿಯುವುದು ಖಚಿತವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News